ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಭವಿಷ್ಯದ ರೈಲು ನಿಲ್ದಾಣದ ಚಿತ್ರಣವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​​ ಅವರು ಬಹಿರಂಗಪಡಿಸಿದ್ದು, ರೈಲು ನಿಲ್ದಾಣ ಹೊಸ ವಿನ್ಯಾಸ ನೋಡಿದವರು ಹುಬ್ಬೇರಿಸುವಷ್ಟು ಅದ್ಭುತವಾಗಿದೆ.
ರಾಷ್ಟ್ರದ ರಾಜಧಾನಿಯ ಪ್ರತಿಷ್ಠೆಯಾಗಿ, ಭವಿಷ್ಯದ ಹೊಸ ಹೆಗ್ಗುರುತಾಗಿ ಇಂದಿನ ಜನದಟ್ಟಣೆ ಹಾಗೂ ಧೂಳಿನಿಂದ ಕೂಡಿದ ಪ್ರಪಂಚದಿಂದ ರೈಲು ನಿಲ್ದಾಣ ದೂರವಿರಲಿದೆ. 95 ವರ್ಷ ಹಳೆಯ ರೈಲು ನಿಲ್ದಾಣದ ಮರು ಅಭಿವೃದ್ಧಿ ಕುರಿತಾದ ವರ್ಚುವಲ್​ ರೋಡ್​ಶೋ ನಡೆಸಲು ರೈಲು ಭೂ ಅಭಿವೃದ್ಧಿ ಪ್ರಾಧಿಕಾರ (ಆರ್​ಎಲ್​ಡಿಎ) ತಯಾರಿ ಮಾಡಿಕೊಂಡಿದ್ದು, ಜಗತ್ತಿನಾದ್ಯಂತ ಬಂಡವಾಳಗಾರರು ಮತ್ತು ಅಭಿವೃದ್ಧಿಗಾರರ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದೆ.
ಇದನ್ನೂ ಓದಿರಿ:ಸೆಕ್ಸ್​ ಡಾಲ್​ ಮದ್ವೆಯಾದ ಬಾಡಿಬಿಲ್ಡರ್​ಗೆ ನೆಟ್ಟಿಗನ ಪ್ರಶ್ನೆ: ಬಂದ ಉತ್ತರ ಕೇಳಿ ಹೌಹಾರಿದ ನೆಟ್ಟಿಗ!

ರೈಲು ನಿಲ್ದಾಣಕ್ಕೆ ಸುಮಾರು 680 ಮಿಲಿಯನ್​ ಡಾಲರ್​ ವೆಚ್ಚ ಅಂದಾಜಿಸಲಾಗಿದ್ದು, ಬಂಡವಾಳಗಾರರನ್ನು ಆಕರ್ಷಿಸಲು ಜನವರಿ 14 ಮತ್ತು 19ರ ನಡುವೆ ಆನ್​ಲೈನ್​ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಂತಹ 61 ಇತರ ಯೋಜನೆಗಳಿಗೂ ಸಹ ಬಿಡ್ ನಡೆಯಲಿದೆ.
ಹೀಗಾಗಿ ಗೋಯೆಲ್ ಅವರು ಗುರುವಾರ ಕೆಲವು ಫೋಟೋಗಳನ್ನು ಟ್ವೀಟ್​ ಮೂಲಕ ಶೇರ್​ ಮಾಡಿದ್ದು, ಕಲಾವಿದನ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ. ಭವಿಷ್ಯದ ರೈಲು ನಿಲ್ದಾಣದ ವಿನ್ಯಾಸ ಜಗತ್ತಿನ ಅದ್ಭುತಗಳಲ್ಲಿ ಒಂದು ಎಂಬಂತೆ ಬಹಳ ವೈಭಯುತವಾಗಿ ಕಣ್ಣಿಗೆ ಕುಕ್ಕುವಂತಿದೆ.
ಇದನ್ನೂ ಓದಿರಿ:5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!
​ವಿವಿಧ ಸಾರಿಗೆಗಳ ಸಂಪೂರ್ಣ ಏಕೀಕರಣದೊಂದಿಗೆ ಸಮೃದ್ಧ ಪ್ರಯಾಣಿಕರ ಅನುಭವವನ್ನು ರೂಪಿಸೋಣ ಎಂದು ಟ್ವೀಟ್​ ಮಾಡಿರುವ ಗೋಯೆಲ್​ ಅವರು ನವದೆಹಲಿಯ ರೈಲ್ವೆ ನಿಲ್ದಾಣದ ಭವಿಷ್ಯವನ್ನು ನೋಡೋಣ ಎಂದಿದ್ದಾರೆ.
ಆರ್​ಎಲ್​ಡಿಎ ನಡೆಸಲಿರುವ ರೋಡ್​ಶೋ, ಸಿಂಗಾಪೋರ್​, ಆಸ್ಟ್ರೇಲಿಯಾ, ದುಬೈ ಮತ್ತು ಸ್ಪೇನ್​ ಮೂಲದ ಬಂಡವಾಳಗಾರರು ಮತ್ತು ಅಭಿವೃದ್ಧಿಗಾರರ ಆಸಕ್ತಿಯನ್ನು ಯೋಜನೆಯೆಡೆಗೆ ಸೆಳೆಯುವ ನಿರೀಕ್ಷೆಯಿದ್ದು, ಯೋಜನೆಯ ಪರಿಕಲ್ಪನೆ ಮತ್ತು ಉದ್ದೇಶಿತ ವಹಿವಾಟು ರಚನೆ ಕುರಿತು ಚರ್ಚೆ ನಡೆಯಲಿದೆ ಎಂದು ಬುಧವಾರ ಆರ್​ಎಲ್​ಡಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿರಿ:ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

ಯೋಜನೆಯು ವಿವಿಧ ಪಾಲುದಾರರಿಂದ ಬಂಡವಾಳವನ್ನು ಆಕರ್ಷಿಸಲಿದೆ ಮತ್ತು ವರ್ಚುವಲ್ ರೋಡ್ ಶೋಗಳ ಮೂಲಕ ಆವೇಗವನ್ನು ಉಳಿಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಆರ್​ಎಲ್​ಡಿಎ ಉಪಾಧ್ಯಕ್ಷ ವೇದ್​ ಪ್ರಕಾಶ್​ ದುಡೆಜಾ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​)
VIDEO| ಕಣ್ಣು ಮಿಟುಕಿಸುವಷ್ಟರಲ್ಲಿ ಕೊಚ್ಚಿ ಹೋದ ಯುವತಿ: ಸೆಲ್ಫಿ ದುರಂತದ ಭಯಾನಕ ವಿಡಿಯೋ ವೈರಲ್​!

ರಾಮಸೇತು ಅಧ್ಯಯನಕ್ಕೆ ಸಮ್ಮತಿ; ನೀರಿನ ಆಳದಲ್ಲಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆ

ಮಾಸ್ಕ್​ ಹಾಕಿದ್ದ ಡಿಸಿಪಿಯನ್ನು ಗುರುತಿಸದ ಲೇಡಿ ಕಾನ್ಸ್ಟೇಬಲ್​ಗೆ ಟ್ರಾಫಿಕ್​ ಶಿಕ್ಷೆ! ಕೆಲಸಕ್ಕೆ ಸೇರಿ ವಾರದಲ್ಲೇ ದರ್ಪ ತೋರಿದ ಡಿಸಿಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + two =
Remember me
