| ರಾಘವ ಶರ್ಮ ನಿಡ್ಲೆ, ನವದೆಹಲಿಜಿ-20 ಗುಂಪಿನ ಅಧ್ಯಕ್ಷ ರಾಷ್ಟ್ರವಾಗಿ ಪ್ರಥಮ ಬಾರಿಗೆ ಶೃಂಗಸಭೆ ಆಯೋಜನೆ ಮಾಡಿರುವ ಭಾರತ, ಮೊದಲ ದಿನವೇ ಯಶಸ್ಸಿನ ಝೇಂಕಾರ ಮೊಳಗಿಸಿದೆ. ಭಾರತ-ಮಧ್ಯಪ್ರಾಚ್ಯ-ಯೂರೋಪ್ ನಡುವಿನ ಮೆಗಾ ಆರ್ಥಿಕ ಕಾರಿಡಾರ್​ಗೆ ಚಾಲನೆ, ಜಿ-20 ಗುಂಪಿಗೆ ಆಫ್ರಿಕನ್ ರಾಷ್ಟ್ರಗಳ ಒಕ್ಕೂಟದ ಅಧಿಕೃತ ಸೇರ್ಪಡೆ, ಸವಾಲು ಹಾಗೂ ಅನಿಶ್ಚಿತತೆ ನಡುವೆಯೂ ಜಿ-20 ನಿರ್ಣಯದ (ನವದೆಹಲಿ ಘೊಷಣೆ) ಕುರಿತು ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಸಿದ್ದು, ಶುದ್ಧ ಇಂಧನ ಬಳಕೆ ಹೆಚ್ಚಿಸಲು ಭಾರತದ ನಾಯಕತ್ವದಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆಯಾಗಿರು ವುದು… ಹೀಗೆ ಭಾರತ ಜಿ-20 ಶೃಂಗಸಭೆಯ ಮೊದಲ ದಿನವೇ ವಿಶ್ವ ನಾಯಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆಗೆ ಪ್ರಧಾನಿ ಮೋದಿ ಒಡನಾಟ, ಆಪ್ತತೆ ಹೆಚ್ಚುತ್ತಿರುವ ಸೂಚನೆಗಳು ಸಿಕ್ಕಿದ್ದರೆ, ಮತ್ತೊಂದೆಡೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಭಾರತದ ನಾಯಕತ್ವವನ್ನು ಕೊಂಡಾಡಿದ್ದಾರೆ. ‘ದೇಶಗಳು ಎರಡಾದರೂ, ನಮ್ಮ ಮಹತ್ವಾಕಾಂಕ್ಷೆ ಒಂದೇ’ ಎಂಬ ಸಂದೇಶವನ್ನು ರಿಷಿ ಸುನಕ್ ರವಾನಿಸಿದ್ದಾರೆ. ಭಾರತ-ಮಧ್ಯಪ್ರಾಚ್ಯ-ಯೂರೋಪ್ ನಡುವಿನ ಮೆಗಾ ಆರ್ಥಿಕ ಕಾರಿಡಾರ್ ಬಗ್ಗೆ ಸಂತಸ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರಿ ಬದಲಾವಣೆಗೆ ತೆರೆದುಕೊಳ್ಳಲಿರುವ ನಿರ್ಣಾಯಕ ಹೂಡಿಕೆ ಯೋಜನೆ ಇದಾಗಲಿದೆ ಎಂದು ಹೇಳಿದ್ದಾರೆ.
ಆರ್ಥಿಕ ಅಭಿವೃದ್ಧಿ ಮತ್ತು ರಾಜಕೀಯ ಸಹಕಾರ ಸುಧಾರಣೆಗೆ ನೆರವಾಗಲಿರುವ ಈ ಯೋಜನೆ, ದೇಶಗಳ ನಡುವಿನ ವ್ಯಾಪಾರ, ಇಂಧನ ಸಂಪನ್ಮೂಲಗಳ ಸಾಗಾಟ ಹಾಗೂ ಡಿಜಿಟಲ್ ಸಂಪರ್ಕದ ಸುಧಾರಣೆಗೂ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಆರ್ಥಿಕ ಕಾರಿಡಾರ್​ನಲ್ಲಿ ಭಾರತ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಜೋರ್ಡಾನ್, ಇಸ್ರೇಲ್ ಮತ್ತು ಐರೋಪ್ಯ ಒಕ್ಕೂಟ ಇರಲಿವೆ ಎಂದು ಬೈಡೆನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ತಿಳಿಸಿದ್ದಾರೆ. ಜಿ-20ಯಲ್ಲಿ ಭಾರತದ ಅಧ್ಯಕ್ಷತೆಯು ವೈವಿಧ್ಯಮಯ, ಸಾಂಸ್ಕೃತಿಕ ಸಮೃದ್ಧತೆ, ಗುರಿ ಆಧಾರಿತವಾಗಿದೆ ಎಂಬ ಸಂದೇಶ ಕೊಟ್ಟಿರುವುದಲ್ಲದೆ, ಹೊಸ ಇತಿಹಾಸ ಸೃಷ್ಟಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಒಟ್ಟಾರೆ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದ್ದು, ತಂತ್ರಜ್ಞಾನದ ಬಳಕೆಯ ಮೂಲಕ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಭಾರತದ ಎಲ್ಲಾ ಭಾಗಗಳಿಗೆ ಶಾಂತಿಯನ್ನು ತರುತ್ತದೆ ಎನ್ನಲಾಗಿದೆ.
ನವದೆಹಲಿ ಘೋಷಣೆಯನ್ನು ಜಿ-20 ರಾಷ್ಟ್ರಗಳು ಅಂಗೀಕರಿಸುವುದರೊಂದಿಗೆ ಹೊಸ ಇತಿಹಾಸ ಸೃಷ್ಟಿಯಾಗಿದೆ. ಒಮ್ಮತ ಮತ್ತು ಉತ್ಸಾಹದೊಂದಿಗೆ ನಾವು ಉತ್ತಮ, ಹೆಚ್ಚು ಸಮೃದ್ಧ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಸಹಕಾರದಿಂದ ಕೆಲಸ ಮಾಡಲು ಪ್ರತಿಜ್ಞೆ ಮಾಡುತ್ತೇವೆ. ಜಿ-20 ಸದಸ್ಯ ರಾಷ್ಟ್ರಗಳ ಬೆಂಬಲ ಮತ್ತು ಸಹಕಾರಕ್ಕಾಗಿ ನನ್ನ ಕೃತಜ್ಞತೆಗಳು.
| ನರೇಂದ್ರ ಮೋದಿ, ಪ್ರಧಾನಮಂತ್ರಿ
ನವದೆಹಲಿ ಘೋಷಣೆ:ರಷ್ಯಾ-ಯೂಕ್ರೇನ್ ಸಂಘರ್ಷದ ಕಾರಣದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನ ಮಧ್ಯೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಒಮ್ಮತದ ಜಂಟಿ ಹೇಳಿಕೆ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ. ಯೂಕ್ರೇನ್​ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ನಿರ್ಮಾಣ ಮಾಡುವ ಅಗತ್ಯದ ಬಗ್ಗೆ ಕರೆ ನೀಡಿದೆ. ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಸೇನಾಪಡೆಯನ್ನು ಬಳಸುವ ಬೆದರಿಕೆಯ ಕೃತ್ಯ ಗಳಿಂದ ಸದಸ್ಯ ರಾಷ್ಟ್ರಗಳು ಹಿಂದೆ ಸರಿಯಬೇಕು ಮತ್ತು ದೇಶದ ಸಮಗ್ರತೆಗೆ ಹಾನಿ ಮಾಡುವ ಯಾವುದೇ ಕ್ರಮ ಸ್ವೀಕಾರಾರ್ಹವಲ್ಲ ಎಂಬ ಸಂದೇಶ 2023ರ ಜಿ-20 ನಿರ್ಣಯದಲ್ಲಿದೆ. ರಷ್ಯಾ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬಳಕೆ ಮಾಡುವ ಬೆದರಿಕೆಯನ್ನೂ ನಾವು ಒಪ್ಪುವುದಿಲ್ಲ ಎಂದೂ ನಿರ್ಣಯದಲ್ಲಿ ತಿಳಿಸಲಾಗಿದೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಮುಂದಿನ ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ; ದಿನಾಂಕವೂ ನಿಗದಿ, ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 15 =
Remember me
