ಬಾಲಿ:ಈ ಹಿಂದೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುತಿನ್​ರನ್ನು ಭೇಟಿ ಮಾಡಿದ್ದಾಗ ‘ಇದು ಯುದ್ಧದ ಸಮಯ ಅಲ್ಲ’ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಈಗ ಜಿ20 ಶೃಂಗ ಸಭೆಯಲ್ಲಿ ಮೋದಿ ನೀಡಿದ್ದ ಹೇಳಿಕೆಯನ್ನು ಎಲ್ಲಾ ಜಾಗತಿಕ ನಾಯಕರು ಪುನರುಚ್ಚರಿಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಅಧಿವೇಶನದ ಕೊನೆಗೆ ಭಾಗವಹಿಸಿದ ಎಲ್ಲಾ ನಾಯಕರು ಒಟ್ಟಾಗಿ ಒಂದು ಹೇಳಿಕೆಯನ್ನು ನೀಡುವುದು ವಾಡಿಕೆ. ಈ ಬಾರಿ ವಿವಿಧ ದೇಶಗಳ ನಾಯಕರು ಹಿಂದೆ ಮೋದಿ ಹೇಳಿದ್ದ ‘ಇದು ಯುದ್ಧದ ಸಮಯವಲ್ಲ’ ಎಂಬ ಹೇಳಿಕೆಯನ್ನೇ ಮತ್ತೇ ಹೇಳಿದ್ದಾರೆ. ಇದರಿಂದ ಪ್ರಧಾನಿ ಮೋದಿಯ ಪ್ರಭಾವ ಹೆಚ್ಚಾಗಿದ್ದು ಸುಳ್ಳಲ್ಲ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಶಾಂಘೈ ಶೃಂಗಸಭೆ ನಡೆದಿತ್ತು. ಅಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪುಟಿನ್‌ಗೆ ಮೋದಿ, ‘ಇದು ಯುದ್ಧದ ಸಮಯವಲ್ಲ’ ಎಂದು ಸಲಹೆ ನೀಡಿದ್ದರು.
‘ಅಂತಾರಾಷ್ಟ್ರೀಯ ಕಾನೂನು, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿಹಿಡಿಯುವುದು ಅತ್ಯಗತ್ಯ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆ ಸ್ವೀಕಾರಾರ್ಹವಲ್ಲ. ಯುದ್ಧಕ್ಕೆ ಶಾಂತಿಯುತ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ. ಇದು ಯುದ್ಧದ ಸಮಯವಲ್ಲ’ ಎಂದು ಜಿ20 ನಾಯಕರು ಹೇಳಿಕೆ ನೀಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ‘ಪ್ರಧಾನಿ ಮೋದಿ ಸಂದೇಶ ಎಲ್ಲಾ ದೇಶಗಳ ನಾಯಕರ ಬಾಯಲ್ಲೂ ಪ್ರತಿಧ್ವನಿಸಿದೆ. ಭಾರತ ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಈ ಮಾತು ಜಗತ್ತಿನಲ್ಲಿ ಪ್ರತಿಧ್ವನಿಸಿದೆ’ ಎಂದು ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
