ನವದೆಹಲಿ:ಪಂಜಾಬ್​ ಕಾಂಗ್ರೆಸ್​​ನಲ್ಲಿ ಮುಗಿಯದ ಬಿಕ್ಕಟ್ಟಿನ ಬೆನ್ನಲ್ಲೇ ಕೇರಳದಲ್ಲಿ ನಾಯಕತ್ವದ ಹೊಸ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾಯಿತ ಅಧ್ಯಕ್ಷರಿಲ್ಲದೆ ಪಕ್ಷ ನಡೆಸುತ್ತಿರುವ ವಿಪರ್ಯಾಸದ ಬಗ್ಗೆ ಕಾಂಗ್ರೆಸ್​ ಹೈಕಮ್ಯಾಂಡ್​ಗೆ ಜಿ-23 ನಾಯಕರು ಮತ್ತೆ ಪ್ರಶ್ನೆ ಹಾಕಿದ್ದಾರೆ.
ಪರೋಕ್ಷವಾಗಿ ಗಾಂಧಿ ಪರಿವಾರಕ್ಕೆ ಬೆಟ್ಟು ಮಾಡಿರುವ ಕಾಂಗ್ರೆಸ್​ನ ಹಿರಿಯ ನಾಯಕ ಕಪಿಲ್​ ಸಿಬಾಲ್​, ಕಾಂಗ್ರೆಸ್​ ಪಕ್ಷದಿಂದ ಜನರು ನಿರ್ಗಮಿಸುತ್ತಿರುವ ಬಗ್ಗೆ ಹಾಗೂ ಪಂಜಾಬ್​ನಲ್ಲಿ ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ತಕ್ಷಣ ಕಾಂಗ್ರೆಸ್​ ವರ್ಕಿಂಗ್​ ಕಮಿಟಿ(ಸಿಡಬ್ಲ್ಯೂಸಿ) ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
#WATCH| We are not “Jee Huzoor 23”. It is very clear. We will keep talking. We will continue to reiterate our demands: Congress leader Kapil Sibal, one of the 23 party leaders who wrote a letter to Congress president last year, demanding a slew of organizational reformspic.twitter.com/JIy4HYqHeT
— ANI (@ANI)September 29, 2021

“ಕಾಂಗ್ರೆಸ್​​ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ. ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ” ಎಂದಿರುವ ಸಿಬಾಲ್​, “ನಾವು ಜಿ-23. ಖಂಡಿತವಾಗಿ ಜೀ ಹುಜೂರ್​ 23 ಅಲ್ಲ” ಎಂದು ಉದ್ಗರಿಸಿದ್ದಾರೆ. ಪಕ್ಷವನ್ನು ಹಲವರು ತೊರೆಯುತ್ತಿದ್ದಾರೆ. ಇದಕ್ಕೆ ನಮ್ಮ ತಪ್ಪುಗಳೇ ಕಾರಣವಾ ಅಂತ ಯೋಚಿಸಬೇಕು. ಪಕ್ಷದ ಮೂಲಚಿಂತನೆಯಿಂದ ನಾವು ದೂರವಾಗುತ್ತಿದ್ದೇವಾ ಎಂದು ಪರಾಮರ್ಶಿಸಬೇಕು ಎಂದು ಕಪಿಲ್ ಸಿಬಾಲ್​ ಹೇಳಿದ್ದಾರೆ.(ಏಜೆನ್ಸೀಸ್)
ಎನ್ಇಪಿ ಪಠ್ಯಕ್ಕೆ ಇಸ್ರೋ ಮಾರ್ಗದರ್ಶನ… ಬಾಹ್ಯಾಕಾಶ ವಿಜ್ಞಾನದ ಅಂಶಗಳು ಅಡಕ

VIDEO| ಪ್ರವಾಹಕ್ಕೆ ಸಿಲುಕಿರೋ ಜನರನ್ನ ರಕ್ಷಿಸುತ್ತಿರೋ ಹೆಲಿಕಾಪ್ಟರ್​ ದೃಶ್ಯ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 3 =
Remember me
