ಮುಂಬೈ:ನಟ, ಸಂಸದ ಸನ್ನಿ ಡಿಯೋಲ್​-ಅಮೀಶಾ ಪಟೇಲ್​ ಅಭಿನಯದ ಗದರ್​​-2 ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಸಿನಿಮಾದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆ ಕಂಡು ಬಂದಿಲ್ಲ.
ವಾರದ ದಿನವೂ ಸಿನಿಮಾದ ಗಳಿಕೆಯೂ 35 ಕೋಟಿ ರೂಪಾಯಿಗಿಂತ ಕೆಳಗೆ ಇಳಿದಿಲ್ಲ. ಬಿಡುಗಡೆಯಾದ ಆರು ದಿನಗಳಲ್ಲಿ ಚಿತ್ರವೂ 261.35 ಕೋಟಿ ರೂಪಾಯಿ ಗಳಿಸಿರುವುದು ಮತ್ತಷ್ಟು ವಿಶೇಷವಾಗಿದೆ. ಬಾಕ್ಸ್​ಆಫೀಸ್​ ಪಂಡಿತರು ಸಿನಿಮಾವನ್ನು ತೂಫಾನ್​, ಸುನಾಮಿ, ಹರಿಕೇನ್​ ಎಂದೆಲ್ಲಾ ಬಣ್ಣಿಸಿದ್ದಾರೆ.
ಆಗಸ್ಟ್​ 15ರಂದು ಚಿತ್ರವು 200 ಕೋಟಿ ರೂಪಾಯಿ ಕ್ಲಬ್​ ಸೇರಿದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆಗಸ್ಟ್​ 16ರಂದು ಚಿತ್ರವು 34.50 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ವಾರದ ದಿನ ಇಷ್ಟು ದೊಡ್ಡಮಟ್ಟದಲ್ಲಿ ಗಳಿಕೆ ಮಾಡೋದು ಸಣ್ಣ ಸಾಧನೆಯೇನೂ ಅಲ್ಲ ಎಂದು ಬಾಕ್ಸ್​ಆಫೀಸ್​ ಪಂಡಿತರು ಹೇಳಿದ್ದಾರೆ.
TYPHOON – TSUNAMI – HURRICANE, that’s the power of#Gadar2at the#BO… Yet another ₹ 30 cr+ day [working day] 🔥🔥🔥… UNSHAKABLE and UNAFFECTED, especially in *mass pockets*… Fri 40.10 cr, Sat 43.08 cr, Sun 51.70 cr, Mon 38.70 cr, Tue 55.40 cr, Wed 32.37 cr. Total: ₹ 261.35…pic.twitter.com/GOOoVyswaf
ಇದನ್ನೂ ಓದಿ:ನ. 2ರಿಂದ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ; ಪೂರ್ವಭಾವಿ ಸಭೆಯಲ್ಲಿ ಸಚಿವರಿಂದ ಅಧಿಕಾರಿಗಳಿಗೆ ತರಾಟೆ
ಸದ್ಯ ಸನ್ನಿ ಡಿಯೋಲ್ ಸಿನಿಮಾ ರಾಕಿಂಗ್​ ಸ್ಟಾರ್​ ಯಶ್​ ನಟನೆಯ KGF Chapter-2 ದಾಖಲೆ ಮೇಲೆ ಕಣ್ಣಿಟ್ಟಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದ ಅಬ್ಬರ ಹೀಗೇ ಮುಂದುವರಿದರೆ ಮತ್ತಷ್ಟು ದಾಖಲೆಗಳು ಸೃಷ್ಟಿ ಆಗುವುದಂತು ಗ್ಯಾರಂಟಿ.
ರಾಕಿಂಗ್​ ಸ್ಟಾರ್​ ಯಶ್​ ನಟನೆಯ KGF Chapter-2 ಚಿತ್ರವೂ ಬಾಲಿವುಡ್​ನಲ್ಲಿ 434 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಗಳಿಕೆಯನ್ನು ಸನ್ನಿ ಡಿಯೋಲ್​ ನಟನೆಯ ಗದರ್​-2 ಚಿತ್ರವೂ ಮುರಿದು ಹಾಕಲಿದೆ ಎನ್ನಲಾಗುತ್ತಿದೆ. ಶಾರುಖ್​ ಖಾನ್​ ನಟನೆಯ ಪಠಾಣ್​ ಚಿತ್ರವು 543 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ದಾಖಲೆ ಮುರಿಯುವುದು ಡೌಟ್​ ಎಂದು ಅಂದಾಜಿಲಸಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
