ನವದೆಹಲಿ:ಬಾಹ್ಯಾಕಾಶಕ್ಕೆ ಮಾನವರಹಿತ ನೌಕೆ ಕಳಿಸುವ ಯೋಜನೆ ಮುಂದೂಡಿಕೆಯಾಗುವುದು ಖಚಿತವಾಗಿದೆ. 2020ರ ಡಿಸೆಂಬರ್​ನಲ್ಲಿ ಈ ನೌಕೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಧರಿಸಿತ್ತು. ಆದರೆ, ಕರೊನಾದಿಂದಾಗಿ ಯೋಜನೆಯ ಸಿದ್ಧತೆಗೆ ಹಿನ್ನಡೆ ಉಂಟಾಗಿದೆ.
ಇನ್ನುಳಿದಿರುವ ನಾಲ್ಕು ತಿಂಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಷ್ಟ ಎಂದು ಈ ಯೋಜನೆಯಲ್ಲಿ ತೊಡಗಿರುವ ವಿಜ್ಞಾನಿಗಳು ತಿಳಿಸಿದ್ದಾರೆ. ಇಸ್ರೊ ಮುಖ್ಯಸ್ಥ ಕೆ. ಶಿವನ್ ನೇತೃತ್ವದ ಉನ್ನತ ಸಮಿತಿಗೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಕನಿಷ್ಠ ಆರು ತಿಂಗಳು ಈ ಯೋಜನೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಮಾನವರಹಿತ
ಈ ನೌಕೆಯು 2021ರ ಡಿಸೆಂಬರ್​ನಲ್ಲಿ ಉಡಾವಣೆ ಮಾಡಲು ಉದ್ದೇಶಿಸಿರುವ ಮಾನವಸಹಿತ ಗಗನನೌಕೆಯ ಪರೀಕ್ಷೆಯ ಭಾಗವಾಗಿದೆ. ಮುಖ್ಯ ಯೋಜನೆಗೂ ಮುನ್ನ ಎರಡು ಸಾರಿ ಮಾನವರಹಿತ ನೌಕೆಯನ್ನು ಉಡಾವಣೆ ಮಾಡಲು ಇಸ್ರೊ ಬಯಸಿದೆ. ಇದರಲ್ಲಿ ಮೊದಲನೆಯದ್ದು ಈ ವರ್ಷದ ಡಿಸೆಂಬರ್​ನಲ್ಲಿ ಮತ್ತು 2021ರ ಜುಲೈನಲ್ಲಿ ಎರಡನೆಯ ನೌಕೆಯನ್ನು ಕಳುಹಿಸಲು ತೀರ್ವನಿಸಿತ್ತು.
ಪರೀಕ್ಷಾರ್ಥ ಹಂತದ ಮೊದಲ ನೌಕೆಯ ಉಡಾವಣೆಯೇ ಮುಂದೂಡಿಕೆ ಆಗುತ್ತಿರುವ ಕಾರಣ ಮಾನವಸಹಿತ ಗಗನನೌಕೆ ಉಡಾವಣೆ ಕೂಡ ಮುಂದಕ್ಕೆ ಹೋಗುತ್ತದೆ. ಜತೆಗೆ ಚಂದ್ರಯಾನ -3 ಯೋಜನೆಯೂ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯ ಯೋಜನೆಗೆ ಈಗಾಗಲೇ ಗಗನಯಾತ್ರಿಗಳ ಆಯ್ಕೆ ನಡೆದಿದ್ದು, ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ತರಬೇತಿ ಇತ್ತೀಚೆಗೆ ಮತ್ತೆ ಆರಂಭ ಆಗಿದೆ.
ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್​ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
