ಶ್ರೀಹರಿಕೋಟಾ (ಆಂಧ್ರಪ್ರದೇಶ):ನಭಕ್ಕೆ ಜಿಗಿಯಲು ಕೆಲವೇ ಸೆಕೆಂಡ್​ಗಳು ಬಾಕಿ ಇರುವಾಗಲೇ ಗಗನಯಾನಿಗಳ ಸುರಕ್ಷತಾ ಪರೀಕ್ಷಾ ವಾಹನ (ಟಿವಿ-ಡಿ1) ಏಕ-ಹಂತದ ದ್ರವ ರಾಕೆಟ್​ ಉಡಾವಣೆಯನ್ನು ತಡೆಹಿಡಿಯಲಾಗಿದೆ ಮತ್ತು ಸಮಸ್ಯೆಯನ್ನು ಪತ್ತೆಹಚ್ಚಿರುವ ಇಸ್ರೋ 10 ಗಂಟೆಗೆ ಉಡಾವಣಾ ಸಮಯವನ್ನು ಮರುನಿಗದಿ ಮಾಡಿದೆ.
ಲಾಂಚ್​ ಕಮ್ಯಾಂಡ್​ ಅನ್ನು ನಿರ್ವಹಿಸುತ್ತಿದ್ದ ಕಂಪ್ಯೂಟರ್​ ರಾಕೆಟ್​ ಉಡಾವಣೆಗೆ ಇನ್ನೂ ಐದು ಸೆಕೆಂಡ್​ ಬಾಕಿ ಇರುವಾಗಲೇ ಉಡಾವಣೆಯನ್ನು ಸ್ಥಗಿತಗೊಳಿಸಿತು. ಇದಾದ ಬೆನ್ನಲ್ಲೇ ಇಸ್ರೋ ಮಾಹಿತಿ ನೀಡಿದ್ದು, ಸಮಸ್ಯೆಯನ್ನು ಪರಿಶೀಲಿಸಿ, ಅಸಂಗತತೆಯನ್ನು ಗುರುತಿಸುವುದಾಗಿ ತಿಳಿಸಿದೆ.
#WATCH| Gaganyaan’s First Flight Test Vehicle Abort Mission-1 (TV-D1) launch put on hold at 5 seconds
ISRO chief S Somnath says, “The lift-off attempt could not happen today…engine ignition has not happened in the nominal course”pic.twitter.com/4eLOyhAZ6c
— ANI (@ANI)October 21, 2023

ಉಡಾವಣೆಯನ್ನು ತಡೆಹಿಡಿಯಲು ಕಂಪ್ಯೂಟರ್‌ಗೆ ಏನೋ ಒಂದು ಪ್ರಚೋದನೆ ನೀಡಿದ್ದು, ನಾವು ಏನು ಸಮಸ್ಯೆ ಎಂಬುದನ್ನು ಹಸ್ತಚಾಲಿತವಾಗಿ ವಿಶ್ಲೇಷಿಸುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಎಸ್​. ಸೋಮನಾಥ್​ ತಿಳಿಸಿದರು.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹವಾಮಾನ ಸಮಸ್ಯೆಯಿಂದಾಗಿ ಪರೀಕ್ಷಾ ಉಡಾವಣೆಯು ಮುಂಜಾನೆಯೇ ತಡವಾಗಿತ್ತು. ಇಂಜಿನ್ ಇಗ್ನಿಷನ್ ಆಗಲಿಲ್ಲ. ಏನು ತಪ್ಪಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕು. ವಾಹನ ಸುರಕ್ಷಿತವಾಗಿದೆ ಎಂದು ಸೋಮನಾಥ್ ಅವರು ಲೈವ್‌ಸ್ಟ್ರೀಮ್‌ನಲ್ಲಿ ಹೇಳಿದರು.
ಅಂದಹಾಗೆ ಮೂರು ದಿನದ ಗಗನಯಾನ ಮಿಷನ್​ನಲ್ಲಿ 400 ಕಿಲೋ ಮೀಟರ್​ನ ಕೆಳ ಭೂ ಕಕ್ಷೆಯಲ್ಲಿ (ಲೋ ಅರ್ತ್ ಆರ್ಬಿಟ್) ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸಿ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವುದು ಇಸ್ರೋ ಉದ್ದೇಶವಾಗಿದೆ. ತನ್ನ ಇತರ ಮಿಷನ್​ಗಳಂತಲ್ಲದೆ, ಇಸ್ರೋ ತನ್ನ ಪರೀಕ್ಷಾ ವಾಹನ (ಟಿವಿ-ಡಿ1) ಏಕ-ಹಂತದ ದ್ರವ ರಾಕೆಟ್​ಅನ್ನು ಯಶಸ್ವಿಯಾಗಿ ಉಡಾಯಿಸಲು ಪ್ರಯತ್ನಿಸಿತು. ಆದರೆ, ಕೊನೆಯ ಹಂತದಲ್ಲಿ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ರದ್ದಾಗಿದೆ.
ಈ ಕ್ರ್ಯೂ ಮಾಡ್ಯೂಲ್​ನೊಂದಿಗೆ ನಡೆಸಲಾಗುವ ಪರೀಕ್ಷಾ ವಾಹನ ಮಿಷನ್ ಇಸ್ರೋದ ಒಟ್ಟಾರೆ ಗಗನಯಾನ ಕಾರ್ಯಕ್ರಮದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಲಿದೆ. ಈ ಪರೀಕ್ಷಾರ್ಥ ಹಾರಾಟದ ಯಶಸ್ಸು ಉಳಿದ ಪರೀಕ್ಷೆಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಲಿದೆ. ಭಾರತೀಯ ಗಗನಯಾನಿಗಳನ್ನು ಹೊಂದಿದ ದೇಶದ ಮೊದಲ ಗಗನಯಾನ ಕಾರ್ಯಕ್ರಮಕ್ಕೆ ಅದು ನೆರವಾಗಲಿದ್ದು 2025ರಲ್ಲಿ ಸಾಕಾರಗೊಳ್ಳುವ ನಿರೀಕ್ಷೆಯಿದೆ.(ಏಜೆನ್ಸೀಸ್​)
ಭಾರತ ತನ್ನ ಕ್ರಮದಿಂದ ಲಕ್ಷಾಂತರ ಮಂದಿಯ ಸಹಜ ಜೀವನವನ್ನು ಕಷ್ಟಕ್ಕೆ ದೂಡಿದೆ: ಕೆನಡಾ ಪ್ರಧಾನಿ ಹೇಳಿಕೆ

‘ನಾನು ನಂದಿನಿ, ಬೆಂಗಳೂರಿಗ್ ಬಂದೀನಿ!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + twenty =
Remember me
