ಬೆಂಗಳೂರು:ಚಂದ್ರಯಾನ-3 ಯಶಸ್ವಿಯಾದ ಬೆನ್ನಿಗೇ ಸೌರಯಾನ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಯಾನಕ್ಕೂ ಸಜ್ಜಾಗಿದೆ. ಅದು ಮತ್ಯಾವುದೂ ಅಲ್ಲ, ಗಗನಯಾನ. ಭಾರತದ ಮೊದಲ ಮಾನವಸಹಿತ ಗಗನಯಾನದ ಅಂಗವಾಗಿ ಮಾನವರಹಿತ ಪರೀಕ್ಷಾರ್ಥ ಹಾರಾಟವನ್ನು ಇದೇ ಅಕ್ಟೋಬರ್​ನಲ್ಲಿ ಇಸ್ರೋ ಕೈಗೊಳ್ಳಲಿದೆ.
ಅಂದರೆ ಮನುಷ್ಯರನ್ನೇ ಗಗನಯಾನಕ್ಕೆ ಕಳಿಸುವ ಭಾರತದ ಮೊದಲ ಹಾಗೂ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಕ್ರ್ಯೂ ಮಾಡೆಲ್​​ನ ಮಾನವರಹಿತ ಹಾರಾಟ ಪರೀಕ್ಷೆ ಇಸ್ರೋ ಅ. 25ರಂದು ನಡೆಸುವ ಸಾಧ್ಯತೆ ಹೊರಹೊಮ್ಮಿದೆ. ಅಲ್ಲದೆ, ಗಗನಯಾನದ ಕ್ರ್ಯೂ ಮಾಡೆಲ್ ಕುರಿತ ಕೆಲವು ಫೋಟೋಗಳನ್ನು ಇಸ್ರೋ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಮಿಷನ್​​ನ ಸಾಮರ್ಥ್ಯ ಪ್ರದರ್ಶಿಸಲು ಇಸ್ರೋ ಕ್ರ್ಯೂ ಮಾಡೆಲ್​​ನ ಇನ್​ಫ್ಲೈಟ್​ ಅಬಾರ್ಟ್​ ಟೆಸ್ಟ್​ ನಡೆಸಲು ಯೋಜನೆ ಹಾಕಿಕೊಂಡಿದೆ. ಇದನ್ನು ಸಾಧಿಸಿದ ನಂತರ, ಮಾನವರಹಿತ ಕಾರ್ಯಾಚರಣೆಯ ಸಿದ್ಧತೆಗಳೊಂದಿಗೆ ಮುಂದುವರಿಯಲಿರುವುದಾಗಿ ವಿಕ್ರಮ್​ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್​.ಉನ್ನಿಕೃಷ್ಣನ್​ ನಾಯರ್​ ಮಾಹಿತಿ ಹಂಚಿಕೊಂಡಿದ್ದಾರೆ.
Mission Gaganyaan:ISRO to commence unmanned flight tests for the Gaganyaan mission.
Preparations for the Flight Test Vehicle Abort Mission-1 (TV-D1), which demonstrates the performance of the Crew Escape System, are underway.https://t.co/HSY0qfVDEH@indiannavy#Gaganyaanpic.twitter.com/XszSDEqs7w
— ISRO (@isro)October 7, 2023

ಮುಂಬರುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ 1) ಗಗನಯಾನ ಕಾರ್ಯಕ್ರಮದ ನಾಲ್ಕು ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ ಮೊದಲನೆಯದಾಗಿದೆ. ನಾಲ್ಕೂ ಪರೀಕ್ಷಾ ಫಲಿತಾಂಶ ಮತ್ತು ಮಾನವರಹಿತ ಕಾರ್ಯಾಚರಣೆಗಳ ಆಧಾರದ ಮೇಲೆ ಮಾನವಸಹಿತ ಕಾರ್ಯಾಚರಣೆಯನ್ನು ಯೋಜಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಏನದು ಗಗನಯಾನ?:ಗಗನಯಾನ ಯೋಜನೆಯು ಇಬ್ಬರು ಅಥವಾ ಮೂವರನ್ನು ಒಂದರಿಂದ ಮೂರು ದಿನಗಳ ಕಾರ್ಯಾಚರಣೆಗಾಗಿ ಭೂಮಿಯ ಸುತ್ತಲೂ ಸುಮಾರು 400 ಕಿ.ಮೀ. ವೃತ್ತಾಕಾರದ ಕಕ್ಷೆಗೆ ಕರೆದೊಯ್ದು, ಸುರಕ್ಷಿತವಾಗಿ ಭೂಮಿಗೆ ಕರೆತರುವುದಾಗಿರುತ್ತದೆ. ಈ ಮೂಲಕ ಭಾರತದ ಇನ್ನೊಂದು ಸಾಮರ್ಥ್ಯವನ್ನು ಪ್ರದರ್ಶಿಸುವುದು ಗಗನಯಾನದ ಉದ್ದೇಶ.
ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 17 =
Remember me
