ವಾಷಿಂಗ್ಟನ್‌:‘ನನ್ನ ಮಗನಿಗೆ/ಮಗಳಿಗೆ ಎಷ್ಟು ಹೇಳಿದ್ರೂ ಕೇಳೋದೇ ಇಲ್ಲ, ಯಾವಾಗ ನೋಡಿದ್ರೂ ವಿಡಿಯೋ ಗೇಮ್ಸ್‌, ಕಂಪ್ಯೂಟರ್‌ ಗೇಮ್ಸ್‌ ಅಂತ ಆಡ್ತಾನೆ ಇರ್ತಾನೆ/ ಇರ್ತಾಳೆ ಅಂತ ಬಹುತೇಕ ಎಲ್ಲಾ ಪಾಲಕರು ಹೇಳಿಯೇ ಇರುತ್ತದೆ. ಆದರೆ ಮಕ್ಕಳು ಮಾತ್ರ ಗೇಮ್ಸ್‌ ಆಡೋದನ್ನು ಬಿಡೋದಿಲ್ಲ ಎನ್ನುವುದು ಅಷ್ಟೇ ಸತ್ಯ.
ಆದರೆ ಇಲ್ಲೊಬ್ಬ ಬಾಲಕನ ತಂದೆ ಹಾಗೆ ಮಾಡದೆ ಎಷ್ಟು ಬೇಕಾದರೂ ಗೇಮ್ಸ್‌ ಆಡ್ಕೋ ಎಂದು ಮಗನನ್ನು ಉತ್ತೇಜಿಸುತ್ತಲೇ ಬಂದಿದ್ದರು. ಮಗನಿಗೂ ಅಷ್ಟೇ ವಿಡಿಯೋ ಗೇಮ್ಸ್‌ ಆಡುವುದು ಎಂದರೆ ಬಲು ಇಷ್ಟ. ತನ್ನ ದಿನದ ಬಹುಪಾಲು ಸಮಯವನ್ನು ಈತ ಆಟದಲ್ಲಿಯೇ ಕಳೆಯುತ್ತಿದ್ದ.
ಇದನ್ನೂ ಓದಿ:ಒಂದೇ ವರ್ಷದ ಜೈಲು ಶಿಕ್ಷೆ ತಪ್ಪಿಸೋದಕ್ಕೆ ಡೆತ್​ ಸರ್ಟಿಫಿಕೇಟ್​ ಕೊಟ್ಟ!
ಆದರೆ ಇತರ ಮಕ್ಕಳಂತೆ ಈತ ಆಟವನ್ನು ಕೆಟ್ಟ ಅಭ್ಯಾಸವಾಗಿ ಬದಲಿಸಿಕೊಳ್ಳಲಿಲ್ಲ, ಬದಲಿಗೆ ಅದರಿಂದಲೇ ಪ್ರಯೋಜನ ಪಡೆದ. ಇದೀಗ ಅದೇ ಆಟ ಈತನನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದೆ! ಹೌದು. ಅಮೆರಿಕದ ಅಲೆಕ್ಸ್‌ ಮೆಕಾಚೈನ್ ಎಂಬ ಹೆಸರಿನ 17 ವರ್ಷದ ಹುಡುಗ ಇದೀಗ ವೃತ್ತಿಪರ ಆಟಗಾರನಾಗಿದ್ದಾನೆ. ಆನ್‌ಲೈನ್‌ ಆಟದ ಮೇಲೆ ಪರಿಣತಿ ಸಾಧಿಸಿದ್ದಾನೆ.
ಇಷ್ಟೇ ಆಗಿದ್ದರೆ ಬಾಲಕ ಇಷ್ಟೊಂದು ಹೆಸರುವಾಸಿಯಾಗುತ್ತಿರಲಿಲ್ಲ. ಆದರೆ ಆನ್‌ಲೈನ್‌ ಆಟದ ಕುರಿತಂತೆ ಖಾತೆಯೊಂದನ್ನು ತೆರೆದಿರುವ ಈ ಬಾಲಕ ಈಗಾಗಲೇ 22 ಸಾವಿರಕ್ಕೂ ಅಧಿಕ ಬೆಂಬಲಿಗರನ್ನು ಹೊಂದಿದ್ದಾನೆ. ಕಳೆದ 18 ತಿಂಗಳುಗಳಿಂದ ಈ ಆಟದ ಮೇಲೆ ಸಾಕಷ್ಟು ಅಧ್ಯಯನ ಮಾಡಿರುವ ಬಾಲಕ ಅಲೆಕ್ಸ್‌. ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಇದಾಗಲೇ 42 ಸಾವಿರ ಡಾಲರ್‌ (ಸುಮಾರು 32 ಲಕ್ಷ ರೂಪಾಯಿ) ಸಂಪಾದನೆ ಮಾಡಿದ್ದಾನೆ.
‘ಥ್ರಿಲ್ಲಿಂಗ್‌ ಸ್ಟೋರಿ’ ಖ್ಯಾತಿಯ ಪತ್ರಕರ್ತೆ ಅಪಘಾತಕ್ಕೆ ಬಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
