ಬೆಂಗಳೂರು:ಚಾರ್ಟೆಡ್​ ಅಕೌಂಟೆಂಟ್​ ಒಬ್ಬರನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಸಿಕ್ಕಿಸಿ ಹಾಕಲು ಗ್ಯಾಂಗ್​ ಒಂದು ರೆಡಿಯಾಗಿತ್ತು. ಆದರೆ ಅದೃಷ್ಟವಶಾತ್​ ಅವರ ಪ್ಲಾನ್​ ನಡೆಯದೇ ಅವರೇ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮುಂಬೈನ ಪ್ರಖ್ಯಾತ ಚಾರ್ಟೆಡ್ ಅಕೌಂಟೆಂಟ್ ಭವಿನ್​ ಎನ್ನುವವರನ್ನು ಜೈಲಿಗೆ ಕಳುಹಿಸಲು ಪ್ಲಾನ್ ಆರೋಪಿಗಳು ಮಾಡಿದ್ದರು. ಆದರೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಇಡೀ ಗ್ಯಾಂಗ್​ ಅನ್ನು ಅರೆಸ್ಟ್​ ಮಾಡಿದ್ದು ಇರ್ಫಾನ್, ರಾಹುಲ್, ಚಿಂತನ್ ಬಂಧನಕ್ಕೆ ಒಳಗಾಗಿದ್ದಾರೆ.
ಆರೋಪಿ ಇರ್ಫಾನ್, ಭವಿನ್​ನನ್ನು ಸಿಕ್ಸುಸಿ ಹಾಕೋ ಪ್ಲಾನ್ ಮಾಡಿದ್ದ. ಈತ ಆರೋಪಿ ರಾಹುಲ್​ನನ್ನು ಕಳಿಸಿ ಸಿಕ್ಕಿಸಿ ಹಾಕಲು ಮುಂದಾಗಿದ್ದ. ಅದರ ಜೊತೆಗೆ ಆರೋಪಿಗಳು ಕಬ್ಬನ್ ಪಾರ್ಕ್ ಪೊಲೀಸರಿಗೆ ವೆಪನ್ ಡೀಲಿಂಗ್ ಅಂತ ಮಾಹಿತಿ ಕೂಡ ನೀಡಿದ್ದರು.
ಪ್ಲಾನ್ ಪ್ರಕಾರ ಪೊಲೀಸರ ಮುಂದೆ ರಾಹುಲ್ ಭವಿನ್ ಹೆಸರು ಕೂಡ ಹೇಳಿದ್ದ. ಆದರೆ ತೀವ್ರ ವಿಚಾರಣೆ ಮಾಡಿದಾಗ ರಾಹುಲ್, ಸಮೀರ್ ಮತ್ತು ಚಿಂತನ್​ ಎನ್ನುವವನ ಹೆಸರು ಬಾಯ್ಬಿಟ್ಟಿದ್ದ. ಇವರು ಯಾರು ಅಂತೀರಾ? ಚಿಂತನ್ ಮತ್ತು ಸಮೀರ್, ರಾಹುಲ್​ಗೆ ಪಿಸ್ತೂಲ್ ನೀಡಿದ್ದರು. ರಾಹುಲ್​ನ ಬಂಧನ ಆದಾಗ ಆತನ ಕೈಯಲ್ಲಿ ಎರಡು ಪಿಸ್ತೂಲ್, ಐದು ಜೀವಂತ ಗುಂಡುಗಳು ಸಿಕ್ಕಿದ್ದವು. ಇದಾದ ಬಳಿಕ ಮುಂಬೈನಲ್ಲಿ ಆರೋಪಿ ಚಿಂತನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತನ್, ವಿಚಾರಣೆ ವೇಳೆ ಸಂಪೂರ್ಣ ಪ್ಲಾನ್ ಇರ್ಫಾನ್ ಮಾಡಿದ್ದು ಎಂಬುದನ್ನು ಬಾಯಿ ಬಿಟ್ಟಿದ್ದ. ಇದಾದ ಮೇಲೆ ಮುಂಬೈನಲ್ಲಿ ಇರ್ಫಾನ್​ನನ್ನೂ ಪೊಲೀಸರು ಹಿಡಿದಿದ್ದಾರೆ. ಸದ್ಯ ತಲೆಮರೆಸಿಕೊಂಡಿರೋ ಸಮೀರ್ ಗಾಗಿ ಹುಡುಕಾಟ ನಡೆಯುತ್ತಿದೆ.
ಇರ್ಫಾನ್​ ಹೀಗೆಲ್ಲ ಮಾಡಲು ಕಾರಣ ಏನು?ಈ ಹಿಂದೆ ಚಾರ್ಟೆಡ್ ಅಕೌಂಟೆಂಟ್ ಭವಿನ್ ಜೊತೆಗೆ ಇಪತ್ತೆರಡು ವರ್ಷದಿಂದ ಆರೋಪಿ ಇರ್ಫಾನ್ ಕೆಲಸ ಮಾಡಿದ್ದ. ಆಗ ಈ ಭೂಪ ಅಕ್ರಮ ಸೀಲು ಸಹಿಗಳನ್ನು ನಕಲು ಮಾಡಿ ಭ್ರಷ್ಟಾಚಾರ ಮಾಡುತ್ತಿದ್ದ. ಈ ಬಗ್ಗೆ ಮುಂಬೈನ ಆಂಟಿ ಕರಪ್ಶನ್ ಬ್ಯೂರೊಗೆ ಭವಿನ್ ಮಾಹಿತಿ ನೀಡಿದ್ದ. ಹೀಗಾಗಿ ಹಿಂದೆ ಇರ್ಫಾನ್​ನನ್ನು ಮುಂಬೈ ಎಸಿಬಿ ಅರೆಸ್ಟ್ ಮಾಡಿತ್ತು. ತನ್ನನ್ನ ಅರೆಸ್ಟ್ ಮಾಡಿಸಿದ್ದ ಅನ್ನೊ ಕಾರಣಕ್ಕೆ ಸೇಡು ತೀರಿಸಲು ಭವಿನ್ ವಿರುದ್ದ ಪ್ಲಾನ್ ಮಾಡಿದ್ದ ಇರ್ಪಾನ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
