ದೆಹಲಿ:ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಗಂಗಾ ಜಲವನ್ನು ಪ್ರಾಯೋಗಿಕವಾಗಿ ಬಳಸುವಂತೆ ಜಲಶಕ್ತಿ ಸಚಿವಾಲಯದ ರಾಷ್ಟ್ರೀಯ ಗಂಗಾ ನದಿ ಸ್ವಚ್ಛತಾ ಮಿಷನ್ (ಎನ್​ಎಂಸಿಜಿ) ಮತ್ತು ಗಂಗಾ ಶುದ್ಧೀಕರಣ ಕಾರ್ಯದಲ್ಲಿ ಕೈಜೋಡಿಸಿರುವ ಸಾಮಾಜಿಕ ಕಾರ್ಯಕರ್ತರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಾರ್ಸ್- ಕೋವ್-2 ವೈರಾಣು ಕೋವಿಡ್-19ಗೆ ಕಾರಣ ಎಂಬುದು ದೃಢಪಟ್ಟಿದೆ. ಆದರೆ, ಈ ಇಂಥ ವೈರಾಣುಗಳನ್ನು ನಾಶಪಡಿಸುವ ಬ್ಯಾಕ್ಟೀರಿಯಾಫೇಜ್​ಗಳು ಗಂಗೆಯಲ್ಲಿವೆ. ಇದನ್ನು ಬಳಸಿಕೊಂಡು ಕೋವಿಡ್-19 ವೈರಾಣು ನಿವಾರಣೆಗೆ ಪ್ರಯತ್ನಿಸಬಹುದು ಎಂಬುದು ಎನ್​ಎಂಸಿಜಿ ಪ್ರಸ್ತಾವನೆಯ ತಿರುಳು. ಎನ್​ಎಂಸಿಜಿ ಗಂಗೆಯ ಔಷಧ ಗುಣದ ಸಾಧ್ಯಾಸಾಧ್ಯತೆ ಕುರಿತು ‘ನೀರಿ’ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ) ಮತ್ತು ನಾಗಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆ (ಸಿಎಸ್​ಐಆರ್) ಅಭಿಪ್ರಾಯ ಪಡೆದ ನಂತರವೇ ಐಸಿಎಂಆರ್​ಗೆ ಪ್ರಸ್ತಾವನೆ ಸಲ್ಲಿಸಿದೆ. ‘ನೀರಿ’ ಮತ್ತು ಸಿಎಸ್​ಐಆರ್ ಗಂಗೆಯಲ್ಲಿರುವ ಔಷಧೀಯ ಗುಣ ಮತ್ತು ಒಳಿತುಕಾರಕ ಬ್ಯಾಕ್ಟೀರಿಯಾಫೇಜ್ ಕುರಿತು ಅಧ್ಯಯನ ನಡೆಸುತ್ತಿವೆ. ಜತೆಗೆ ನದಿಯಲ್ಲಿರುವ ರೋಗಕಾರಕ ಸೂಕ್ಷಾ್ಮಣು ಮತ್ತು ಕೊಳೆತ ಏಕಾಣು ಜೀವಗಳ ವಿರುದ್ಧ ಬ್ಯಾಕ್ಟೀರಿಯಾಫೇಜ್ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿವೆ.
ಗಂಗಾ ಜಲವೊಂದರಿಂದಲೇ ಫಲಪ್ರದ ಫಲಿತಾಂಶ ಬರುತ್ತದೆ ಎಂದಲ್ಲ. ಆದರೆ, ಇತರ ನದಿಗಳಲ್ಲಿ ಇಲ್ಲದ ವಿಶೇಷ ಶಕ್ತಿ ಗಂಗೆಯಲ್ಲಿದೆ. ಜತೆಗೆ ಗಂಗೆಯಲ್ಲಿರುವ ಉಪಕಾರಿ ವೈರಾಣುಗಳ ಬಗ್ಗೆ ವಿಸ್ತೃತ ಅಧ್ಯಯನವೂ ನಡೆದಿಲ್ಲ. ಹೀಗಾಗಿ ಈ ಬಗ್ಗೆ ಸಂಶೋಧನೆಯೊಂದು ಐಸಿಎಂಆರ್ ನೇತೃತ್ವದಲ್ಲಿ ನಡೆಯಲಿ ಎಂಬ ಆಶಯದಿಂದ ಈ ಪ್ರಸ್ತಾವನೆ ಮಾಡಲಾಗಿದೆ.
| ಡಿ.ಪಿ.ಮಾಥುರಿಯಾಎನ್​ಎಂಸಿಜಿ ಕಾರ್ಯನಿರ್ವಾಹಕ ನಿರ್ದೇಶಕ
ಗಂಗಾ ನದಿಯ ಮೇಲಿನ ಪಾತ್ರದಲ್ಲಿ (ರುದ್ರಪ್ರಯಾಗ ಮತ್ತು ತೆಹ್ರಿ ಮಧ್ಯೆ ಪ್ರದೇಶ) ಬ್ಯಾಕ್ಟೀರಿಯಾ ಭಕ್ಷಕ ಸೂಕ್ಷಾ್ಮಣುಗಳ (ಬ್ಯಾಕ್ಟೀರಿಯಾಫೇಜ್) ಅನೇಕ ಪ್ರಭೇದಗಳು ಇವೆ ಎಂದು ಸಂಶೋಧನೆ ಮೂಲಕ ದೃಢ ಪಡಿಸಿದೆ. ವೈರಸ್​ಗಳೆಂದೂ ಕರೆಯಲಾಗುವ ಬ್ಯಾಕ್ಟೀರಿಯಾಫೇಜ್​ಗಳು ಮನುಷ್ಯ, ಪ್ರಾಣಿ ಇಲ್ಲವೆ ಕೊಳಚೆಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಗಳನ್ನು ತಿನ್ನುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬ್ಯಾಕ್ಟೀರಿಯಾಫೇಜ್ ಸಹ ವೈರಾಣುಗಳೇ. ಆದರೆ ಇವು ಮನುಷ್ಯನಿಗೆ, ಪರಿಸರಕ್ಕೆ ಉಪಕಾರಿಯಾದ ವೈರಾಣು. ಮೈಕೋಬ್ಯಾಕ್ಟೀರಿಯಂ ಸ್ಪ್ರೆಪ್ಟೋಕೊಕಸ್ ಮತ್ತು ಸ್ಯೂಡೋಮಾನಾಸ್ ಯೆರ್ಸೀನಿಯಾ ಬ್ಯಾಕ್ಟೀರಿಯಾಗಳನ್ನು ಇದು ನಿಮೂಲನೆ ಮಾಡುತ್ತದೆ ಎಂದಿದ್ದಾರೆೆ. ರೋಗನಿರೋಧಕ ಶಕ್ತಿಯನ್ನು ಎದುರಿಸಿ ಉಪದ್ರವ ನೀಡುವಂತಹ ವೈರಾಣುಗಳನ್ನು ನಿಮೂಲ ಮಾಡಲು ಬಳಸುವ ಚಿಕಿತ್ಸಾ ವಿಧಾನವನ್ನು ‘ಫೇಜ್ ಥೆರಪಿ’ ಎಂದು ಕರೆಯಲಾಗುತ್ತದೆ ಎಂದು ವೈರಾಲಜಿ ವಿಜ್ಞಾನಿಗಳು ತಿಳಿಸಿದ್ದಾರೆ.
ಲಾಕ್​ಡೌನ್ ಘೋಷಣೆಯಿಂದ ಪರಿಸರಕ್ಕೆ ಒಳಿತಾಗುತ್ತಿದೆ. ವಾಹನಗಳು ರಸ್ತೆಗಳಿಯದ ಕಾರಣ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ. ಹಾಗೆಯೇ ಜನರು ಮನೆಯಲ್ಲೇ ಇರುವ ಕಾರಣ ನದಿ-ಕೆರೆ-ಕಲ್ಯಾಣಿಗಳು ಶುದ್ಧಿಗೊಳ್ಳುತ್ತಿವೆ. ನದಿ ತಟಗಳು ಮಲಿನಮುಕ್ತವಾಗುತ್ತಿವೆ. ಗಂಗಾ ನದಿ ಕೂಡ ಸ್ವಚ್ಛಗೊಂಡಿದ್ದು, ನದಿಯ ಅನೇಕ ದಡಗಳಲ್ಲಿ ನೀರು ಕುಡಿಯುವಷ್ಟು ಸ್ವಚ್ಛವಾಗಿದೆ ಎಂದು ಎನ್​ಎಂಸಿಜಿ ತಿಳಿಸಿದೆ.
ಗಂಗೆಯ ಮೇಲಿನ ಪಾತ್ರವು ಕಲ್ಮಷ ಮುಕ್ತವಾದ ಮತ್ತು ನೈಸರ್ಗಿಕ ಹರಿವಿನಿಂದ ಕೂಡಿದ ಪ್ರದೇಶ, ಈ ಕಾರಣದಿಂದ ಅಲ್ಲಿ ಜಲಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಹಾನಿಕಾರಕ ವೈರಾಣುಗಳನ್ನು ನಾಶ ಮಾಡುವ ವೈರಾಣುಗಳು ಅಲ್ಲಿವೆ. ಆದರೆ, ಇದು ಸಾಂಕ್ರಾಮಿಕ ಸೋಂಕನ್ನು ನಿಮೂಲನೆ ಮಾಡುವಷ್ಟು ಬಲಶಾಲಿಯೇ ಎಂಬುದು ಮೊದಲು ಖಚಿತವಾಗಬೇಕು. ಇದಕ್ಕಾಗಿ ಅನೇಕ ಪ್ರಯೋಗಗಳು ನಡೆದು ಗಂಗೆಯಲ್ಲಿನ ಔಷಧ ಗುಣ ಸಿದ್ಧಿಗೊಂಡರೆ ಕರೊನಾ ಸೋಂಕಿಗೆ ಹೊಸ ಮದ್ದು ದೊರಕಿ ಇಡೀ ಮಾನವಕುಲಕ್ಕೆ ಲಾಭವಾಗುತ್ತದೆ. | ವೈದ್ಯರು ವೈರಾಲಜಿ ತಜ್ಞರು
ದೇಶದಲ್ಲಿ ಹೀಗಿರಲಿದೆ 3ನೇ ಹಂತದ ಲಾಕ್​ಡೌನ್​; ಸಡಿಲಿಕೆಯ ನಡುವೆಯೂ ಈ ಎಲ್ಲ ಕಠಿಣ ನಿರ್ಬಂಧಗಳ ಮುಂದುವರಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
