ಇಸ್ಲಾಮಾಬಾದ್:ಮನುಷ್ಯರು ಎನಿಸಿಕೊಂಡಿರುವವರ ದೌರ್ಜನ್ಯ, ಹಿಂಸಾ ಪ್ರವೃತ್ತಿ, ಕಾಮುಕತೆಗೆ ಕೊನೆಯೇ ಇಲ್ಲ. ಆತನ ಮನಸ್ಥಿತಿ ಎಷ್ಟು ಕೀಳಾಗಿ ಹೋಗಿದೆ ಎನ್ನುವುದಕ್ಕೆ ಈ ಬೆಕ್ಕೇ ಸಾಕ್ಷಿ.
ಹಸುಗೂಸು, ಮಕ್ಕಳು, ವೃದ್ಧೆಯರು ಎನ್ನದೇ ಅತ್ಯಂತ ಬರ್ಬರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಹೆಣ್ಣು ಬೆಕ್ಕಿನ ಮೇಲೆ ಸಾಮೂಹಿಕವಾಗಿ ರೇಪ್‌ ಮಾಡಿ ಅದನ್ನು ರಕ್ತದ ಮಡುವಿನಲ್ಲಿ ಒದ್ದಾಡುವಂತೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ!
15 ವರ್ಷದ ಬಾಲಕ ತನ್ನ ಸಂಬಂಧಿ ಬಾಲಕರ ಜತೆಗೂಡಿ ವಾರಗಟ್ಟಲೆ ಈ ಬೆಕ್ಕಿನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾನೆ. ಬೆಕ್ಕು ನೋವನ್ನು ತಾಳದೇ ವಿಲವಿಲ ಒದ್ದಾಡುತ್ತಿದ್ದರೂ ನೋಡದೇ ಎಲ್ಲರೂ ಅತ್ಯಾಚಾರ ಮಾಡಿದ್ದಾರೆ. ಒಂದು ವಾರ, ರಕ್ತ, ನೋವಿನಿಂದ ಚೀರಾಡಿಕೊಂಡ ಆ ಮುಗ್ಧ ಜೀವ ನಂತರ ಪ್ರಾಣಬಿಟ್ಟಿದೆ!
ತಾವು ಮಾಡಿರುವುದು ಸಾಹಸ ಎಂಬಂತೆ ತಮ್ಮ ಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಬಾಲಕರು. ಇದು ವೈರಲ್‌ ಆಗುತ್ತಿದ್ದಂತೆಯೇ ಬೆಕ್ಕನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರಕ್ತದ ಮಡುವಿನಲ್ಲಿದ್ದ ಆ ಬೆಕ್ಕು ನೋವು ತಾಳಲಾರದೇ ಕೂಗಲೂ ಆಗದಂಥ ಪರಿಸ್ಥಿತಿಯಲ್ಲಿ ಇತ್ತು. ಉಸಿರು ಮಾತ್ರ ಹಿಡಿದುಕೊಂಡಿದ್ದ ಬೆಕ್ಕು ಅಲ್ಲಿಯೇ ಪ್ರಾಣ ಬಿಟ್ಟಿದೆ.
ಇದನ್ನೂ ಓದಿ:ಮಹಿಳೆಯಿಂದ ಡ್ರೆಸ್ ಖರೀದಿ: 30 ಮಂದಿಗೆ ಕರೊನಾ! ಅಂಗಡಿ ವಿರುದ್ಧ ಕ್ರಿಮಿನಲ್‌ ಕೇಸ್‌
ಬೆಕ್ಕು ಓಡಿ ಹೋಗದಂತೆ ಪ್ಲಾಸ್ಟಿಕ್‌ ಬ್ಯಾಗ್‌ನಿಂದ ಕಟ್ಟಿ ಕೃತ್ಯ ಎಸಗಿದ್ದಾರೆ ಬಾಲಕರು. ಬೆಕ್ಕಿನ ಮೇಲೆ ಅತ್ಯಾಚಾರ ಆಗಿರೋದನ್ನು ಪಾಕಿಸ್ತಾನದ ವೈದ್ಯರು ದೃಢಪಡಿಸಿದ್ದರೂ ಈ ಬಗ್ಗೆ ವೈದ್ಯಕೀಯ ವರದಿ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ!
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಾಲಕರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಮನೆಯಲ್ಲಿ ಚಪಾತಿ ತಿಂದ ನ್ಯಾಯಾಧೀಶ, ಮಗನ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
