ಸೂರತ್​: ಗ್ಯಾಂಗ್ಸ್ ಆಫ್ ವಾಸೇಪುರ್ ಜನಪ್ರಿಯ ಬಾಲಿವುಡ್​ ಚಲನಚಿತ್ರ. 2012ರಲ್ಲಿ ತೆರೆಕಂಡ ಈ ಡಾರ್ಕ್ ಕಾಮಿಡಿ ಕ್ರೈಮ್ ಚಲನಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಿ ನಿರ್ದೇಶಿಸಿದ್ದರು. ಧನಬಾದ್‌ನ ಕಲ್ಲಿದ್ದಲು ಮಾಫಿಯಾ ಮತ್ತು ಮೂರು ಅಪರಾಧ ಕುಟುಂಬಗಳ ನಡುವಿನ ಅಧಿಕಾರದ ಹೋರಾಟ, ರಾಜಕೀಯ ಮತ್ತು ಸೇಡು ತೀರಿಸಿಕೊಳ್ಳುವ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಮನೋಜ್ ಬಾಜ್‌ಪೇಯ್, ನವಾಜುದ್ದೀನ್ ಸಿದ್ದಿಕಿ, ಪಂಕಜ್ ತ್ರಿಪಾಠಿ, ರಿಚಾ ಚಡ್ಡಾ, ಹುಮಾ ಖುರೇಷಿ ಮೊದಲಾದವರು ನಟಿಸಿದ್ದರು.ಈಗೇಕೆ ಈ ಚಿತ್ರದ ಪೀಠಿಕೆ ಎಂದರೆ… ವಾಸೇಪುರದಲ್ಲಿ ಕೊಲೆ ಅಪರಾಧಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅದು ಕೂಡ 21 ವರ್ಷಗಳ ನಂತರ. ಈ ಬಂಧನಕ್ಕೆ ಪೊಲೀಸರು ಸಿನಿಮಿಯ ರೀತಿಯಲ್ಲಿಯೇ ಸಾಹಸ ಮಾಡಿದ್ಧಾರೆ.
ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿಯನ್ನು ಸೂರತ್ ಪೊಲೀಸರ ಪ್ರಿವೆಂಟಿವ್ ಕ್ರೈಂ ಬ್ರಾಂಚ್ (ಪಿಸಿಬಿ) ತಂಡವು 21 ವರ್ಷಗಳ ನಂತರ ಬಂಧಿಸಿದೆ. ಪೊಲೀಸರು ಇದಕ್ಕಾಗಿ ಏಳು ದಿನಗಳ ಕಾಲ ಜಾರ್ಖಂಡ್‌ನ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪತ್ತೆ ಕಾರ್ಯ ನಡೆಸಿದ್ದಾರೆ. ತಮ್ಮ ಈ ಕಾರ್ಯಾಚರಣೆಯಲ್ಲಿ ಆಟೋ ಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಮೊಹಮ್ಮದ್ ಉಮರ್ ಅಲಿಯಾಸ್ ಅಮರ್ ಅಬ್ದುಲ್ ರಶೀದ್ ಅನ್ಸಾರಿಯನ್ನು ಬಂಧಿಸಿದ್ದಾರೆ..
ಜಗಳದ ಕಾರಣಕ್ಕಾಗಿ ತಾನು ಹಾಗೂ ತನ್ನ ಸ್ನೇಹಿತ ಮೆಹರಾಜ್ ಅಲಿ ಅಲಿಯಾಸ್ ಮೀರಜ್ ಅಲಿಯಾಸ್ ರಾಜು ಜಬ್ಬಾರ್ ಅಲಿ ರೆಹಮಾನಿಯು ಮೇ 2003ರಲ್ಲಿ ದಯಾಶಂಕರ್ ಶಿವಚರಣ್ ಗುಪ್ತಾ ಎಂಬಾತನಿಗೆ ಮದ್ಯ ಕುಡಿಸಿ ಹತ್ಯೆಗೈದಿರುವುದಾಗಿ ವಿಚಾರಣೆ ವೇಳೆ ಅನ್ಸಾರಿ ಒಪ್ಪಿಕೊಂಡಿದ್ದಾನೆ.
ಸ್ಥಳದಿಂದ ಪರಾರಿಯಾಗುವ ಮೊದಲು ಮೃತದೇಹವನ್ನು ಗುರುತಿಸಲಾಗದಂತೆ ಶಿವಚರಣನ ಮುಖವನ್ನು ಸುಟ್ಟು ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ವಾಸೇಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ಅನ್ಸಾರಿ ಬಗ್ಗೆ ಪಿಸಿಬಿ ತಂಡಕ್ಕೆ ಮಾಹಿತಿ ಸಿಕ್ಕಿದೆ. ಆರೋಪಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದ ನಂತರ, ಆತನನ್ನು ಬಂಧಿಸಲು ಪೊಲೀಸರ ತಂಡ ತೆರಳಿತ್ತು.
2023ರ ಸಾಲಿನಲ್ಲಿ ಪಿಸಿಬಿ ಪೊಲೀಸರು ಕೊಲೆ ಪ್ರಕರಣಗಳಲ್ಲಿ 16 ಶಂಕಿತರು ಸೇರಿದಂತೆ 10 ವರ್ಷಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿರುವ ಒಟ್ಟು 22 ಶಂಕಿತರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲಬಹುದು: ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೀಗೇಕೆ ಹೇಳಿದ್ದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
