ನವದೆಹಲಿ:ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಖ್ಯಾತ ಗ್ಯಾಂಗ್​ಸ್ಟರ್​, ಪ್ರತ್ಯೇಕವಾದಿ ನಾಯಕ ಲಾಖಾ ಸಿಧಾನ ಕಾಣಿಸಿಕೊಂಡಿದ್ದಾನೆ. ಇದಲ್ಲದೆ ಈತ ಪ್ರತಿಭಟನಾ ನಿರತ ರೈತಿರಿಗೆ ಸಲಹೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ದೆಹಲಿ ಹಾಗೂ ಪಂಜಾಬಿನ ಗಡಿಭಾಗವಾದ ಖಾನೌರಿ ಗಡಿಯಲ್ಲಿ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಲಾಖಾ ಸಿಧಾನ ಪೊಲೀಸರು ಅಶ್ರವಾಯು ಪ್ರಯೋಗಿಸಿದಾಗ ನಮ್ಮ ಮುಖದ ಮೇಲೆ ಧೂಳು ಬೀಳುತ್ತದೆ ಇದರಿಂದಾಗಿ ನಮ್ಮ ಚರ್ಮ ಹಾಳಾಗುತ್ತದೆ. ಆದ್ದರಿಂದ ರೈತರು ತಮ್ಮ ಮುಖಗಳಿಗೆ ಹಲ್ಲನ್ನು ಉ್ಜುವ ಪೇಸ್ಟ್​ಅನ್ನು ಹೆಚ್ಚಬೇಕು. ಇದರಿಂದ ಯಾವುದೇ ರೀತಿಯ ಚರ್ಮ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Lakha Sidhana alias Lakhbir Singh, one of the most dreaded gangsters in Punjab at one time, accused in more than two dozen cases; Lakha smeared Colgate toothpaste over his face and asked to apply on faceLakkha asked to bring JCB from nearby villages.#Punjab#KisanAndolan2024pic.twitter.com/moFaULuOpc
ಇದನ್ನೂ ಓದಿ:ಪದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧಶತಕ; ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಸರ್ಫರಾಜ್​
ಇತ್ತ ಲಾಖಾ ಸಿಧಾನ ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವ ಸುದ್ದಿ ಹೊರಬೀಳುತ್ತಿದ್ದಂತೆ ದೆಹಲಿ ಪೊಲೀಸರು ಹೈ ಅಲರ್ಟ್​ ಘೋಷಿಸಿದ್ದಾರೆ. ಇದಲ್ಲದೆ ಆತ ತನ್ನ ಪ್ರಚೋದನಕಾರಿ ಭಾಷಣದ ಮೂಲಕ ರೈತರನ್ನು ಪೊಲೀಸರನ್ನು ಎತ್ತಿ ಕಟ್ಟುತ್ತಿದ್ದಾನೆ. ಇದರಿಂದಾಗಿ ರೈತರ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2021 ಜನವರಿ 26ರಂದು ನಡೆದಿದ್ದ ಕೆಂಪುಕೋಟೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅರೋಪಿಯಾಗಿರುವ ಲಾಖಾ ಸಿಧಾನ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ. ಈತನ ವಿರುದ್ಧ ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಈತ ಪ್ರತ್ಯೇಕವಾದಿಗಳ ಜೊತೆ ಗುರುತಿಸಿಕೊಂಡಿದ್ದಾನೆ.
He's gangster Lakha Sidhana, spotted at#FarmersProtestsite.Do we need anything more to say? Gangsters, khaIistanis, criminals all are there, except real farmers….pic.twitter.com/FbA0NPqkDn

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 17 =
Remember me
