ಕಾನ್ಪುರ:ಸಹಚರರೊಂದಿಗೆ ಎಂಟು ಪೊಲೀಸರನ್ನು ಕೊಂದು ತಲೆಮರೆಸಿಕೊಂಡಿರುವ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಮನೆಯನ್ನು ಘಟನೆ ನಡೆದ ಎರಡನೇ ದಿನವೇ ನೆಲಸಮಗೊಳಿಸಲಾಗಿದೆ. ಈ ಮನೆಯ ಅವಶೇಷಗಳಡಿಯಲ್ಲಿ ಪೊಲೀಸರು ಬಾಂಬ್​ಗಳನ್ನು ಪತ್ತೆ ಹಚ್ಚಿದ್ದಾರೆ.
ಉತ್ತರಪ್ರದೇಶದ ಭಿಕರೂ ಗ್ರಾಮದಲ್ಲಿರುವ ವಿಕಾಸ್​ ದುಬೆಯ ಅವಶೇಷಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ;ಬಿಜೆಪಿ ಶಾಸಕರೊಂದಿಗೆ ಸಖ್ಯವಿದೆ; ಎಂಟು ಪೊಲೀಸರ ಕೊಂದ ಗ್ಯಾಂಗ್​ಸ್ಟರ್​ನ ವಿಡಿಯೋ ಹೇಳಿಕೆ ಬಹಿರಂಗ
ಇದಲ್ಲದೇ, ಮನೆಯಲ್ಲಿಯೇ ಕಚ್ಚಾವಸ್ತುಗಳನ್ನು ಬಳಸಿ ಬಾಂಬ್​ ತಯಾರಿಸುತ್ತಿದ್ದ ಎಂದು ಹೇಳಲಾಗಿತ್ತು. ಇದೀಗ ಬಾಂಬ್​ ಪತ್ತೆಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದಲ್ಲದೇ, ಪೊಲೀಸರು ದಾಳಿ ಬಂದಾಗ ಇಡೀ ಪ್ರದೇಶವನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಎಂದೇ ಹೇಳಲಾಗಿತ್ತು.
ಕಾನ್ಪುರದಲ್ಲೊಂದು ಮನೆ:ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಕಾನ್ಪುರದಲ್ಲೊಂದು ಮನೆ ಹೊಂದಿದ್ದಾನೆ. ಹಳ್ಳಿಯ ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಈ ಮನೆಯಿಂದಲೇ ವೀಕ್ಷಿಸುತ್ತಿದ್ದ. ಈತನ ಪತ್ನಿ ಕೂಡ ಮನೆಗೆ ಪೊಲೀಸರು ಬಂದ ಮಾಹಿತಿಯನ್ನು ಆತನಿಗೆ ನೀಡುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ;ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
ನೇಪಾಳಕ್ಕೆ ಪರಾರಿ:ಈವರೆಗೂ ಪತ್ತೆಯಾಗದ ವಿಕಾಸ್​ ದುಬೆ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈತನ ಶೋಧಕ್ಕಾಗಿ ಪೊಲೀಸರು 40 ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ.
ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
