ಸೂರತ್​: ಜಗತ್ತೇ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಂಕಷ್ಟ ಹರನ ಆರಾಧನೆಯ ದಿನ ನಗರದ ಕೋವಿಡ್ ಆಸ್ಪತ್ರೆಯಲ್ಲಿನ ಡ್ರೈಫ್ರುಟ್ ಗಣಪ ದೇಶದ ಗಮನಸೆಳೆದಿದ್ದಾನೆ. ವಾಲ್ನಟ್​, ಶೇಂಗಾ ಬಳಸಿ ಈ ಗಣಪನನ್ನು ತಯಾರಿಸಲಾಗಿದೆ.
ಈ ಪರಿಸರ ಸ್ನೇಹಿ ಗಣಪ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಪತ್ರಿಷ್ಠಾಪನೆಗೊಂಡಿದ್ದು, ಒಂಭತ್ತು ದಿನಗಳ ಕಾಲ ಪೂಜೆ ನಡೆಯಲಿದೆ. ಆನಂತರ ಈ ಗಣಪನನ್ನು ನೀರಿನಲ್ಲಿ ವಿಸರ್ಜಿಸಲ್ಲ, ಬದಲಾಗಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಪ್ರಸಾದವಾಗಿ ಹಂಚಲಾಗುತ್ತದೆ.
ಇದನ್ನೂ ಓದಿ:‘ಈ ಗಂಡ ನನ್ ಜತೆ ಜಗಳ ಆಡೋದೇ ಇಲ್ಲ, ಇವ್ನ ಜತೆ ಸಂಸಾರ ನಡೆಸೋಕೆ ನನ್​ ಕೈಲಾಗಲ್ಲ!’
ಈ ಗಣೇಶನ ಮೂರ್ತಿಯನ್ನು ಸೂರತ್ ನಿವಾಸಿ ಡಾ. ಅದಿತಿ ಮಿತ್ತಲ್​ ರಚಿಸಿದ್ದು, ಆಸ್ಪತ್ರೆಯಲ್ಲಿ ಹಬ್ಬದ ಸಡಗರ ತುಂಬಲು, ಅಲ್ಲಿದ್ದವರಲ್ಲಿ ಉತ್ಸಾಹ ತುಂಬಲು ನಿರ್ಮಿಸಿದ್ದೇನೆ. ಇಮ್ಯೂನಿಟಿ ಹೆಚ್ಚಿಸುವುದಕ್ಕೆ ಡ್ರೈ ಫ್ರುಟ್ಸ್​ ಸಹಕಾರಿ. ಈ ಸಂದೇಶ ನೀಡುವ ಸಲುವಾಗಿ ಹೀಗೆ ಮೂರ್ತಿ ರಚಿಸಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
VIDEO: ರಾಮನಗರ ವ್ಯಾಪ್ತಿಯ 12 ಗ್ರಾಮಗಳು ಮಾರಿ ಅಲೆಯಲ್ಲಿ ಮುಳುಗಿದ್ವು…

Sign in to your account
Please enter an answer in digits:sixteen + seven =
Remember me
