ಗಾಂಧಿನಗರ:ದೇಶಾದ್ಯಂತ ಕರೊನಾ ಹಾವಳಿ ಕೈಮೀರಿ ಹೋಗಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಬೆಡ್​-ಆಕ್ಸಿಜನ್​ ಸಿಗದಿರುವುದು ಒಂದೆಡೆಯಾದರೆ, ಇನ್ನು ಕರೊನಾದಿಂದಾಗಿ ಸತ್ತವರ ದೇಹಗಳನ್ನು ಸುಡಲೂ ಜಾಗವಿಲ್ಲದಂತಾಗಿದೆ.
ಹೀಗೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ಇಲ್ಲೊಂದು ಕಡೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಕಸ ಹಾಕುವ ಜಾಗದಲ್ಲೇ ಚಿತೆಗಳನ್ನು ಹಾಕಿ ಶವಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್​ನ ಗಾಂಧಿನಗರದ ನಗರ ಪಾಲಿಕೆಗೆ ಸೇರಿರುವ, ಸಬರಮತಿ ನದಿ ಪಕ್ಕದ ಸೆಕ್ಟರ್​ 39ರಲ್ಲಿನ ಮಸಣದ ಪಕ್ಕದ ತಿಪ್ಪೆಗುಂಡಿಯಲ್ಲೂ ಶವಸಂಸ್ಕಾರ ನಡೆಸಲಾಗುತ್ತಿದೆ.
ಸಿಎನ್​ಜಿ ಮೂಲಕ ಕಾರ್ಯನಿರ್ವಹಿಸುವ ಇಲ್ಲಿನ ಚಿತಾಗಾರಗಳು ಕೆಲವು ದಿನಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ 11 ಕಟ್ಟಿಗೆ ಚಿತಾಗಾರಗಳ ಮೂಲಕ ಶವಸಂಸ್ಕಾರ ನಡೆಸಲಾಗುತ್ತಿದೆ. ಅದಾಗ್ಯೂ ಬುಧವಾರ 8 ಶವಗಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ನಡೆಸಲು ಅವಕಾಶ ಸಿಕ್ಕಿಲ್ಲ. ಇಲ್ಲಿ ದಿನವೊಂದಕ್ಕೆ 75-80 ಶವಗಳು ಬರುತ್ತಿದ್ದು, ಆ ಪೈಕಿ ಶೇ. 25 ಕರೊನೇತರ ಸಾವಿಗೆ ಒಳಗಾದಂಥವು. ಸಿಎನ್​ಜಿ ಚಿತಾಗಾರ ಕೆಟ್ಟು ಸ್ಥಗಿತಗೊಂಡಿರುವುದು ಹಾಗೂ ಹತ್ತಿರದ ಸರ್ಗಾಸನ್​ ಸ್ಮಶಾನದಲ್ಲಿ ಕೋವಿಡ್​ ಸೋಂಕಿತ ಶವಗಳ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪಕ್ಕದ ತಿಪ್ಪೆಗುಂಡಿಯಲ್ಲಿ ಶವಸಂಸ್ಕಾರ ನಡೆಸುವ ಪರಿಸ್ಥಿತಿ ಸೃಷ್ಟಿ ಆಗಿದೆ. ಒಟ್ಟಿನಲ್ಲಿ ಕರೊನಾ ಎರಡನೇ ಅಲೆ ಗಂಭೀರವಾಗಿದ್ದು, ಆತಂಕವನ್ನು ಹೆಚ್ಚಿಸಲಾರಂಭಿಸಿದೆ. (ಏಜೆನ್ಸೀಸ್)
ರಾಜ್ಯದಲ್ಲಿ ಕರೊನಾ ಕಂಟ್ರೋಲ್ ತಪ್ಪಿದೆ, ಕೈಮುಗಿಯುವೆ ಮನೆಯಿಂದ ಯಾರೂ ಹೊರ ಬರಬೇಡಿ: ಯಡಿಯೂರಪ್ಪ

ಚಿತಾಗಾರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪೊಲೀಸ್​! ಇದು ಕರೊನಾದ ಕರಾಳ ದೃಶ್ಯ

ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:six − 4 =
Remember me
