ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯವು ಸಾವಿರಾರು ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ದಿಢೀರನೇ ವೈರಲ್​ ಆಗಿಬಿಡುತ್ತವೆ. ಒಂದೇ ದಿನಕ್ಕೆ ಲಕ್ಷಾಂತರ ವೀಕ್ಷಣೆಗಳನ್ನು ಗಿಟ್ಟಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಆ ಫೋಟೋ ಮತ್ತು ವಿಡಿಯೋದಲ್ಲಿರುವ ವಿಶೇಷತೆ. ಇದೀಗ ಎಲ್ಲರ ಹುಬ್ಬೇರಿಸುವ ವಿಡಿಯೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆ ವಿಡಿಯೋದ ವಿಶೇಷತೆ ಏನೆಂದರೆ 500 ರೂಪಾಯಿಯ ಗರಿಗರಿಯಾದ ನೋಟುಗಳು.
ಎಲ್ಲರು ಪ್ರತಿದಿನ ಬಳಸುವ 500 ರೂಪಾಯಿ ನೋಟುಗಳಲ್ಲಿ ಅಂಥದ್ದೇನಿದೆ ವಿಶೇಷತೆ ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ, ಈ ವಿಡಿಯೋದಲ್ಲಿ ಅದೇ ಎಲ್ಲರ ಕೇಂದ್ರ ಬಿಂದು. ಏಕೆಂದರೆ, ನಾವು ಹೂವಿನ ಹಾರದ ಬಗ್ಗೆ ಕೇಳಿರುತ್ತೇವೆ. ಆದರೆ, ನೋಟಿನ ಹಾರದ ಬಗ್ಗೆ ಕೇಳುವುದು ತುಂಬಾ ವಿರಳ. ಕೇಳಿದರೂ ನೋಟಿನ ಹಾರದ ಉದ್ದ ಅಷ್ಟೇನು ಗಮನ ಸೆಳೆಯುವುದಿಲ್ಲ. ಆದರೆ, ಈ ವಿಡಿಯೋದಲ್ಲಿ ನೋಟಿನ ಹಾರದ ಉದ್ದ ನೋಡಿದವರು ಚಕಿತರಾಗುವುದು ಗ್ಯಾರಂಟಿ.
ಇತ್ತೀಚೆಗೆ ವರನೊಬ್ಬ 500 ರೂ.ಗಳಿಂದ ಮಾಡಲ್ಪಟ್ಟ ಬೃಹತ್​​ ಹಾರವನ್ನು ಹಾಕಿಕೊಂಡು ತನ್ನ ಮದುವೆ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋ ನೋಡಿದವರು ಬೃಹತ್​ ಹಾರದಲ್ಲಿರುವ ನೋಟಿನ ಮೌಲ್ಯವೆಷ್ಟು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಗರಿಗರಿಯಾದ 500 ರೂ.ಗಳಿಂದ ಮಾಡಲ್ಪಟ್ಟ ಬೃಹತ್​ ಹಾರದಲ್ಲಿರುವ ಒಟ್ಟು ನೋಟಿನ ಮೊತ್ತ 20 ಲಕ್ಷ ರೂಪಾಯಿ. ಈ ವಿಡಿಯೋವನ್ನು dilshadkhan_kureshipur ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ವಿಡಿಯೋ ನೋಡಿದ ಕೆಲ ನೆಟ್ಟಿಗರು ಇವರ ಸಂಪತ್ತನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ನೋಟುಗಳು ಅಸಲಿಯತ್ತಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

A post shared by dilsad khan (@dilshadkhan_kureshipur)

ಈ ವಿಶೇಷ ವಿಡಿಯೋ ಹರಿಯಾಣದ ಖುರೇಶಿಪುರ್ ಗ್ರಾಮದ್ದು ಎಂದು ನಂಬಲಾಗಿದೆ. ಆದರೆ, ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಭಾರತದ ಕೆಲವು ಭಾಗಗಳಲ್ಲಿ ಮದುವೆ ಸಮಾರಂಭಗಳಲ್ಲಿ ಕರೆನ್ಸಿ ನೋಟುಗಳನ್ನು ಹಾರ ಹಾಕುವುದು ವಾಡಿಕೆ. ಆದರೆ, ಕೆಲವರು ಇದನ್ನು ಧರಿಸುವುದು ಸಂಪತ್ತಿನ ಅಗೌರವ ಎಂದು ಪರಿಗಣಿಸುತ್ತಾರೆ. ಲಕ್ಷ ಲಕ್ಷ ರೂಪಾಯಿ ಮೌಲ್ಯದ ನೋಟುಗಳ ಮಾಲೆಯನ್ನು ವರನಿಗೆ ತೊಡಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ಡಿಕೆಶಿ ವಿರುದ್ಧದ ಸಿಬಿಐ ಕೇಸ್ ಹಿಂಪಡೆಯುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಪದಗ್ರಹಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + fifteen =
Remember me
