ಥಾಣೆ :ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಿನ್ನೆ ರಾತ್ರಿ ರಾಸಾಯನಿಕ ಕಾರ್ಖಾನೆಯಿಂದ ಗ್ಯಾಸ್​ ಲೀಕ್​ ಆದ ಪ್ರಸಂಗ ವರದಿಯಾಗಿದೆ. ಸ್ವಲ್ಪ ಸಮಯದವರೆಗೆ ಉಸಿರಾಡಲು ತೊಂದರೆ ಉಂಟಾಗಿ ಆತಂಕದ ವಾತಾವರಣ ಕವಿದಿತ್ತು. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎನ್ನಲಾಗಿದೆ.
“ಜೂನ್ 3 ರಂದು ರಾತ್ರಿ 10.22 ಕ್ಕೆ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆ ಕಂಡುಬಂತು. ಸಲ್ಫ್ಯೂರಿಕ್ ಆ್ಯಸಿಡ್ ಮತ್ತು ಬೆಂಜೈಲ್ ಆ್ಯಸಿಡ್ ಅತಿಯಾಗಿ ಬಿಸಿಯಾಗುವುದರಿಂದ ಉಂಟಾದ ರಾಸಾಯನಿಕ ಕ್ರಿಯೆಯು ಘಟನೆಗೆ ಕಾರಣವಾಯಿತು. 11.24 ರ ವೇಳೆಗೆ ಅಗ್ನಿ ಶಾಮಕ ದಳದವರು ಸೋರಿಕೆಯನ್ನು ನಿಲ್ಲಿಸಿದ್ದು, ತಕ್ಷಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು” ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.
#WATCH| A gas leak from a factory in Maharashtra's Badlapur was reported at around 10:22 pm on Thursday. People in the area were having trouble breathing. Fire brigade stopped the leak at 11:24 pm. The situation is under control. No one injured: Thane Municipal Corporationpic.twitter.com/djdZY77DAE
— ANI (@ANI)June 3, 2021

ಅನಿಲ ಸೋರಿಕೆಯಿಂದಾಗಿ ಗಾಳಿಯಲ್ಲಿ ಹೊಗೆ ತುಂಬಿದ ಚಿತ್ರಣವನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕಾಣಬಹುದು. ಕಾರ್ಖಾನೆಯ ಸುತ್ತಲ 3 ಕಿಲೋಮೀಟರ್​ ಪ್ರದೇಶದ ನಿವಾಸಿಗಳು ಉಸಿರಾಟದಲ್ಲಿ ಕೊಂಚ ಸಮಸ್ಯೆಗೆ ಒಳಗಾಗಿದ್ದರು. ಕೆಲ ಸಮಯ ಕಣ್ಣು ಉರಿ ಕೂಡ ಅನುಭವಿಸಿದರು ಎನ್ನಲಾಗಿದೆ.(ಏಜೆನ್ಸೀಸ್)
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

ವುಹಾನ್ ಲ್ಯಾಬಿಂದ ವೈರಸ್​ ಲೀಕಾಗಿತ್ತೆಂದು ನಾನು ಸರಿಯಾಗೇ ಹೇಳಿದ್ದೆ : ಟ್ರಂಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
