ವಿಶಾಖಪಟ್ಟಣಂ:ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರ್​.ಆರ್​. ವೆಂಕಟಪುರಂನಲ್ಲಿರುವ ಎಲ್​.ಜಿ. ಪಾಲಿಮರ್ಸ್​ ಕೆಮಿಕಲ್​ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ನಡೆದ ವಿಷಾನಿಲ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಗ್ಯಾಸ್​ ಇಡೀ ಊರಿಗೆ ಹರಡಿದ್ದರಿಂದ ಅಲ್ಲಿದ್ದವರನ್ನು ಗುರುವಾರ ಬೆಳಗ್ಗೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಸದ್ಯ ಅಧಿಕಾರಿಗಳು ಹೇಳುವ ಪ್ರಕಾರ ಗ್ರಾಮಸ್ಥರು ಇನ್ನು ಎರಡು ದಿನ ಇರುವಲ್ಲಿಯೇ ಆಶ್ರಯ ಪಡೆಯಬೇಕಾಗಿದೆ. ಆ ಬಳಿಕ ತಮ್ಮ ಊರಿಗೆ ತೆರಳುವುದು ಸೂಕ್ತವೆಂದಿದ್ದಾರೆ. ಪುಣೆಯ ವಿಶೇಷ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದು, ಅದರೊಂದಿಗೆ ಗ್ಯಾಸ್​ ಲೀಕ್​ ಆಗಲು ಕಾರಣ ಏನಿರಬಹುದೆಂಬ ತನಿಖೆಯನ್ನು ನಡೆಸುತ್ತಿದೆ.
ಇದನ್ನೂ ಓದಿ:VIDEO| ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು
ಇನ್ನು ಕಾರ್ಖಾನೆಯ ಎರಡು ಕಿ.ಮೀ ವ್ಯಾಪ್ತಿಯ ಹೊರಗಿರುವ ಜನರು ಯಾವುದೇ ಭಯಪಡಬೇಕಾಗಿಲ್ಲ. ಅವರಿಗೆ ಸ್ಥಳಾಂತರದ ಅವಶ್ಯಕತೆ ಇಲ್ಲವೆಂದು ವಿಶಾಖಪಟ್ಟಣಂ ಪೊಲೀಸ್​ ಆಯುಕ್ತರಾದ ಆರ್​.ಕೆ. ಮೀನಾ ಅವರು ಭರವಸೆ ನೀಡಿದ್ದಾರೆ.
ಕಾರ್ಖಾನೆಯಲ್ಲಿ ಗ್ಯಾಸ್​ ಈಗಲೂ ಲೀಕ್​ ಆಗುತ್ತಿದೆ, ಅನಿಲ ಆವಿಗಳು ಹೊರ ಸೂಸುತ್ತಿದ್ದು, ಸ್ಥಳೀಯ ಜನರಿಗೆ ಆತಂಕವನ್ನುಂಟುಮಾಡಿದೆ. ಕಾರ್ಖಾನೆಯ 5 ಕಿ.ಮೀ ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕೆಂದು ವಿಶಾಖಪಟ್ಟಣಂ ಅಗ್ನಿಶಾಮಕ ಅಧಿಕಾರಿ ಸುರೇಂದ್ರ ಆನಂದ್​ ಅವರು ಗುರುವಾರ-ಶಕ್ರವಾರದ ಮಧ್ಯರಾತ್ರಿಯ ಕಾರ್ಯಾಚರಣೆ ವೇಳೆ ಹೇಳಿದ್ದರು.
ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಗ್ಯಾಸ್​ ಲೀಕ್​ ಆಗುವುದನ್ನು ತಡೆಯಲು ಗುಜರಾತಿನಿಂದ ವಿಶೇಷ ಇಂಡಿಯಾ ಕಾರ್ಗೋ ವಿಮಾನಿಂದ ವಿಶಾಖಪಟ್ಟಣಂಗೆ ಪ್ಯಾರಾ ಟೆರ್ಟಿಯರಿ ಬ್ಯುಟೈಲ್ ಕ್ಯಾಟೆಕೋಲ್ (ಪಿಟಿಬಿಸಿ) ಅನ್ನು ತರಲಾಗಿದೆ.
ಇದನ್ನೂ ಓದಿ:VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಇದರೊಂದಿಗೆ ಹೆಚ್ಚುವರಿಯಾಗಿ 10 ಅಗ್ನಿಶಾಮಕ ವಾಹನ ಸ್ಥಳದಲ್ಲೇ ಬೀಡುಬಿಟ್ಟಿದೆ. ಅಲ್ಲದೆ, ವೈದ್ಯಕೀಯ ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್​ ಕೂಡ ಸ್ಥಳದಲ್ಲಿವೆ. ವಿಷಾನಿಲದಿಂದ ಜನರು ಒದ್ದಾಡಿ ಪ್ರಾಣಬಿಟ್ಟಿದ್ದು, ಭೋಪಾಲ್​ ಅನಿಲ ದುರಂತವನ್ನು ನೆನಪಿಸುವಂತಿತ್ತು.(ಏಜೆನ್ಸೀಸ್​)
ಗಂಡನ ಕೊಂದಳು, ಸಾವಿಗೆ ಕೋವಿಡ್​ ಕಾರಣ ಎಂದಳು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 9 =
Remember me
