ಮುಂಬೈ:ಭಾರತದ ಕುಬೇರ ಗೌತಮ್​ ಅದಾನಿ ಅವರ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಬುಧವಾರ ಭಾರೀ ಕುಸಿತವಾಗಿದೆ.
ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅದಾನಿ ಅವರ ಸಿಮೆಂಟ್​ ಕಂಪನಿಯಾದ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ 6 ಪ್ರತಿಶತದಷ್ಟು ಕುಸಿತ ಕಂಡವು. ಈ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಕನಿಷ್ಠ 96.55 ರೂ. ಮುಟ್ಟಿದವು. ದಿನದ ಅಂತ್ಯದಲ್ಲಿ ಶೇ. 1.02ರಷ್ಟು ಕುಸಿತ ಕಂಡು ರೂ. 103.30ಕ್ಕೆ ಮುಟ್ಟಿದವು.
ಈ ಷೇರುಗಳ ಈ ಕುಸಿತಕ್ಕೆ ಒಂದು ಪ್ರಮುಖ ಕಾರಣವಿದೆ. ಮಂಗಳವಾರ ಕಂಪನಿಯು ತನ್ನ ಪ್ರವರ್ತಕರಾದ ಅಂಬುಜಾ ಸಿಮೆಂಟ್ಸ್ ಮತ್ತು ರವಿ ಸಂಘಿ ಕಂಪನಿಯಲ್ಲಿನ ಶೇ. 3.52 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (ಒಎಫ್​ಎಸ್​) ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿತು. ಇದೇ ಕಾರಣಕ್ಕಾಗಿ ಬುಧವಾರ ಷೇರುಗಳ ಬೆಲೆಯಲ್ಲಿ ಸಾಕಷ್ಟು ಕುಸಿತ ಕಂಡಬಂದಿದೆ.
ಒಎಫ್​ಎಸ್​ ಷೇರುಗಳ ಮಾರಾಟವನ್ನು ಜೂನ್ 26-27 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಷೇರಿಗೆ ರೂ 90ರ ಬೆಲೆಯಲ್ಲಿ ಒಎಫ್​ಎಸ್​ ಷೇರು ಮಾರಾಟ ಮಾಡಲು ಉದ್ದೇಶಿಸಲಾಗಿದೆ.
ಈ ಷೇರಿನ ಮಂಗಳವಾರದ ಮುಕ್ತಾಯದ ದರ ಮಟ್ಟವಾದ ರೂ 102ಕ್ಕೆ ಹೋಲಿಸಿದರೆ ಒಎಫ್​ಎಸ್​ ಷೇರು ಬೆಲೆಯು ಅಂದಾಜು 12 ಪ್ರತಿಶದಷ್ಟು ಕಡಿಮೆ ಇದೆ.
ಚಿಲ್ಲರೆಯಲ್ಲದ ಲ್ಲದ ಹೂಡಿಕೆದಾರರಿಗೆ ಜೂನ್ 26 ರಂದು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಜೂನ್ 27 ರಂದು ಒಎಫ್​ಎಸ್​ ಷೇರುಗಳನ್ನು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.
ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 156.20 ಮತ್ತು ಕನಿಷ್ಠ ಬೆಲೆ ರೂ 68.50 ಆಗಿದೆ.ಕಳೆದ ಐದು ದಿನಗಳಲ್ಲಿ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ ಶೇ.3ರಷ್ಟು ಏರಿಕೆ ಕಂಡಿದೆ. ಈ ಷೇರು ಬೆಲೆ ಒಂದು ತಿಂಗಳಲ್ಲಿ 10%; ಒಂದು ವರ್ಷದಲ್ಲಿ 45% ಮತ್ತು 5 ವರ್ಷಗಳಲ್ಲಿ 65% ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಈ ಷೇರಿನ ಬೆಲೆ 20% ನಷ್ಟು ಕುಸಿತವಾಗಿದೆ.
4 ವರ್ಷಗಳಲ್ಲಿ ಈ ಷೇರಿನ ಬೆಲೆ 30339% ಏರಿಕೆ: 1 ಲಕ್ಷವಾಯ್ತು 1 ಕೋಟಿ ರೂಪಾಯಿ

ಮುಖೇಶ್​ ಅಂಬಾನಿ ಷೇರಿಗೆ ಭರ್ಜರಿ ಡಿಮ್ಯಾಂಡು: ಬೆಲೆ ಇನ್ನಷ್ಟು ಏರಲಿದೆ ಎನ್ನುತ್ತವೆ ಬ್ರೋಕರೇಜ್​ ಸಂಸ್ಥೆಗಳು

ಮೂರನೇ ದಿನವೂ ಗುಳಿಯ ಗುಟುರು: ಷೇರು ಸೂಚ್ಯಂಕ ಮತ್ತೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
