ಮುಂಬೈ:ಶುಕ್ರವಾರ ಮಾರುಕಟ್ಟೆ ಮುಚ್ಚಿದ ನಂತರ ಈ ಸುದ್ದಿ ಬಂದಿದೆ. ಜೂನ್ ತ್ರೈಮಾಸಿಕದಲ್ಲಿ ಗೌತಮ್ ಅದಾನಿ ಅವರು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ತಮ್ಮ ಪಾಲನ್ನು 1.32%ರಷ್ಟು ಹೆಚ್ಚಿಸಿದ್ದಾರೆ.
ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ತಮ್ಮ ಗುಂಪಿನ ಅತಿದೊಡ್ಡ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ತಮ್ಮ ಪಾಲನ್ನು 1.32 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ.
ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಕಂಪನಿಯು ಜೂನ್ 14 ರಂದು ಷೇರು ವಿನಿಮಯ ಕೇಂದ್ರಗಳಿಗೆ ಈ ಕುರಿತು ಹೇಳಿಕೆ ನೀಡಿದೆ.
ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ತಮ್ಮ ಪಾಲನ್ನು ಏಪ್ರಿಲ್‌ನಿಂದ ಜೂನ್ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಿಂದ 1.32% ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಅಂದರೆ, ಮುಕ್ತ ಷೇರು ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಮಾಣದ ಷೇರುಗಳನ್ನು ಖರೀದಿಸಿದ್ದಾರೆ.
ಷೇರು ಮಾರುಕಟ್ಟೆ ನೀಡಿದ ಮಾಹಿತಿ ಪ್ರಕಾರ, ಮೇ 10 ಮತ್ತು ಮೇ 14ರ ನಡುವೆ ಅವರು ಕೆಂಪಸ್ ಟ್ರೇಡ್ ಮತ್ತು ಇನ್ವೆಸ್ಟ್ಮೆಂಟ್ ಮೂಲಕ ಗುಂಪಿನ ಪ್ರಮುಖ ಕಂಪನಿಯಲ್ಲಿ ಹೆಚ್ಚುವರಿ 0.42% ಪಾಲನ್ನು ಖರೀದಿಸಿದ್ದಾರೆ.ಇದರ ನಂತರ, ಮೇ 21 ಮತ್ತು ಜೂನ್ 12 ರ ನಡುವೆ, ಎಮರ್ಜಿಂಗ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಡಿಎಂಸಿಸಿ ಮೂಲಕ 0.92% ಪಾಲನ್ನು ಖರೀದಿಸಲಾಗಿದೆ.
ಎರಡನೇ ಶ್ರೀಮಂತ ಭಾರತೀಯ ಮತ್ತು ವಿಶ್ವದ 14 ನೇ ಶ್ರೀಮಂತ ವ್ಯಕ್ತಿಯಾಗಿರುವ ಗೌತಮ್​ ಅದಾನಿ, ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಇನ್ಫೈನೈಟ್ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಮೂಲಕ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ 0.68% ಪಾಲನ್ನು ಖರೀದಿಸಿದ್ದಾರೆ.
ಶುಕ್ರವಾರದಂದು ಮಾರುಕಟ್ಟೆಯು ಮುಚ್ಚಿದ ನಂತರ ಮತ್ತು ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಎನ್‌ಎಸ್‌ಇಯಲ್ಲಿ ರೂ 45.50 ಅಥವಾ 1.41% ರಷ್ಟು ಏರಿಕೆಯೊಂದಿಗೆ ರೂ 3,269 ಕ್ಕೆ ತಲುಪಿವೆ.
ಅದಾನಿ ಎಂಟರ್‌ಪ್ರೈಸಸ್ ಮಾರ್ಚ್ 2024 ರ ತ್ರೈಮಾಸಿಕದಲ್ಲಿ ರೂ 451 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಗಳಿಸಿದ ರೂ 722.48 ಕೋಟಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 38% ಹೆಚ್ಚಾಗಿದೆ. ಇದೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯವು ರೂ 29,180 ಕೋಟಿಗಳಷ್ಟಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ದಾಖಲಾಗಿದ್ದ ರೂ. 28,944 ಕೋಟಿಗಿಂತ 0.81% ಹೆಚ್ಚಾಗಿದೆ.
ಭಾರತೀಯ ಷೇರು ಮಾರುಕಟ್ಟೆಗಳಿಗೆ ಸತತ ಮೂರು ದಿನಗಳ ಕಾಲ ರಜೆ ಏಕೆ?

ಷೇರು ಪೇಟೆಯಲ್ಲಿ ಸತತ 3ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಹೊಸ ಗರಿಷ್ಠ ಮಟ್ಟ ಮುಟ್ಟಿದ ಸೂಚ್ಯಂಕ

ಮೋದಿ ಸ್ಟಾಕ್‌ಗಳನ್ನುಮೀರಿಸುತ್ತಿವೆ ಆಂಧ್ರ ಮತ್ತು ನಾಯ್ಡು ಷೇರುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
