ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಅದಾನಿ ಗ್ರೂಪ್​ನ ಮುಖ್ಯಸ್ಥ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸೇಬು ಉದ್ಯಮದಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಅವರ ಕಂಪನಿಗಳ ಷೇರು ಮೌಲ್ಯದಲ್ಲಿ ಏರಿಕೆ ಕಂಡಿರುವುದರಿಂದ ಗೌತಮ್ ಅದಾನಿ ಏಷ್ಯಾದ ಸಿರಿವಂತ ವ್ಯಕ್ತಿ ಪಟ್ಟಕ್ಕೇರಿದ್ದಾರೆ.
ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿಯವರ ಸಂಪತ್ತಿನ ನಿವ್ವಳ ಮೌಲ್ಯ 111 ಬಿಲಿಯನ್ ಡಾಲರ್. ಮುಕೇಶ್ ಅಂಬಾನಿ 109 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನ ಮೌಲ್ಯ ಹೊಂದಿದ್ದು, ವಿಶ್ವದ 12ನೇ ಸಿರಿವಂತರಾಗಿದ್ದಾರೆ ಎಂದು ಬ್ಲೂಮ್​ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ. ಅದಾನಿ ಗ್ರೂಪ್​ನ ಎಲ್ಲ ಷೇರುಗಳು ಶುಕ್ರವಾರ ಶೇಕಡ 14ರಷ್ಟು ಏರಿಕೆ ಕಂಡಿದ್ದವು. ಶುಕ್ರವಾರ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ ಅದಾನಿ ಕಂಪನಿಗಳ ಷೇರುಗಳ ಮೌಲ್ಯ 84,604 ಕೋಟಿ ರೂ. ಹೆಚ್ಚಿ, ಒಟ್ಟು ಮೌಲ್ಯ 17.51 ಲಕ್ಷ ಕೋಟಿ ರೂ.ಗೆ ಹೆಚ್ಚಾಗುವ ಮೂಲಕ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿಯ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2022ರಲ್ಲಿ ಜಾಗತಿಕ ಆರ್ಥಿಕತೆ ಕುಸಿತ ಕಂಡರೂ, ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಏರಿಕೆ ದಾಖಲಿಸುವ ಮೂಲಕ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಗಿಟ್ಟಿಸಿದ್ದರು. ಕಳೆದ ವರ್ಷ ಹಿಂಡನ್​ಬರ್ಗ್ ವರದಿಯಲ್ಲಿ ಪ್ರಸ್ತಾಪಿಸಲಾದ ಕೆಲ ಆರೋಪಗಳ ಬಳಿಕ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಅದಾನಿ ಕಂಪನಿ ಷೇರುಗಳು ಮತ್ತಷ್ಟು ಏರಿಕೆ ಕಾಣಲಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ನವದೆಹಲಿ: ದೇಶದ ಪ್ರಸಿದ್ಧ ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯುವ ಜತೆಗೆ ಹೋಟೆಲ್ ಉದ್ಯಮಕ್ಕೂ ಭಾರಿ ಅವಕಾಶಗಳು ಸೃಷ್ಟಿಯಾಗಿವೆ. ಇದನ್ನು ಮನಗಂಡು ಹೋಟೆಲ್ ಉದ್ಯಮ ದೇಶದ 14 ಧಾರ್ವಿುಕ ನಗರಗಳಲ್ಲಿ 3,500 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಅಮೃತಸರ, ಅಜ್ಮೇರ್, ವಾರಾಣಸಿ, ಅಯೋಧ್ಯಾ, ಪುರಿ, ತಿರುಪತಿ, ಮಥುರಾ, ದ್ವಾರಕಾ, ಗುರುವಾಯೂರು, ಮಧುರೈ ಸೇರಿದಂತೆ 14 ಕ್ಷೇತ್ರಗಳಲ್ಲಿ ತಲಾ 100ರಿಂದ 250 ಕೋಣೆಗಳನ್ನು ಒಳಗೊಂಡ ಹೋಟೆಲ್​ಗಳು ಆರಂಭವಾಗಲಿವೆ. 14 ನಗರಗಳಲ್ಲಿ ಒಟ್ಟು 5 ಸಾವಿರಕ್ಕೂ ಅಧಿಕ ಹೊಸ ಕೋಣೆಗಳು ನಿರ್ವಣವಾಗಲಿದ್ದು, 25 ಸಾವಿರ ಉದ್ಯೋಗಸೃಷ್ಟಿಯಾಗಲಿವೆ. ಮುಂಬರುವ ದಿನಗಳಲ್ಲಿ ಹೋಟೆಲ್ ಉದ್ಯಮದ ಆದಾಯ ವೃದ್ಧಿಯಲ್ಲಿ ಧಾರ್ವಿುಕ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಅರ್ನಾಲ್ಟ್ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ
ಬ್ಲೂಮ್​ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಪ್ರಸ್ತುತ ಬರ್ನಾಡ್ ಅರ್ನಾಲ್ಟ್ ವಿಶ್ವದ ಸಿರಿವಂತ ವ್ಯಕ್ತಿಯಾಗಿದ್ದಾರೆ. ಅವರ ಸಂಪತ್ತಿನ ನಿವ್ವಳ ಮೌಲ್ಯ 207 ಬಿಲಿಯನ್ ಡಾಲರ್. ಟೆಸ್ಲಾದ ಮಾಲೀಕ ಎಲಾನ್ ಮಸ್ಕ್ 203 ಬಿಲಿಯನ್ ಡಾಲರ್ ಸಂಪತ್ತಿನ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 199 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮೂರನೇ ಸ್ಥಾನದಲ್ಲಿದ್ದಾರೆ.
20 ದೇಶಗಳಿಗೆ ಯುಪಿಐ ವಿಸ್ತರಣೆ
ನವದೆಹಲಿ: ಇದೇ ವರ್ಷದ ಫೆಬ್ರವರಿಯಲ್ಲಿ ಮಾರಿಷಸ್​ನಲ್ಲಿ ಯುಪಿಐ (ಯುನಿಫೈಡ್ಸ್ ಪೇಮೆಂಟ್ಸ್ ಇಂಟರ್​ಫೇಸ್) ಸೌಲಭ್ಯ ಆರಂಭಿಸಲಾಗಿತ್ತು. ಇದಕ್ಕೆ ಸಿಕ್ಕಿರುವ ಉತ್ತಮ ಸ್ಪಂದನೆಯನ್ನು ಪರಿಗಣಿಸಿ 2029ರ ಹೊತ್ತಿಗೆ 20 ದೇಶಗಳಿಗೆ ಯುಪಿಐ ಸೌಲಭ್ಯ ವಿಸ್ತರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನ್ಯಾಶನಲ್ ಪೇಮೆಂಟ್ ಕಾಪೋರೇಶನ್ ಆಫ್ ಇಂಡಿಯಾ (ಎನ್​ಪಿಸಿಐ) ಯೋಜನೆ ರೂಪಿಸಿವೆ. 2047ರ ಹೊತ್ತಿಗೆ ವಿಕಸಿತ ಭಾರತದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಆರ್​ಬಿಐ ಮತ್ತು ಎನ್​ಪಿಸಿಐ ಇಂಟರ್​ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್​ಐಪಿಎಲ್) ಜತೆಗೂಡಿ 2029ರ ಹೊತ್ತಿಗೆ 20 ದೇಶಗಳಿಗೆ ವಿಸ್ತರಿಸಲು ಒಟ್ಟಾಗಿ ಕಾರ್ಯನಿರ್ವಹಿಸಲಿವೆ. 2024-25ರ ಹಣಕಾಸು ವರ್ಷದಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಹಂತ-ಹಂತವಾಗಿ ಹೆಚ್ಚೆಚ್ಚು ದೇಶಗಳಲ್ಲಿ ಯುಪಿಐ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಆರ್​ಬಿಐ ತನ್ನ 2024ರ ಆರ್ಥಿಕ ವರ್ಷದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಆರ್ ಆಂಡ್ ಡಿಯಲ್ಲಿ ಜಾಗತಿಕ ಕಂಪನಿಗಳಿಗೆ ಭಾರತ ಸೆಡ್ಡು
ನವದೆಹಲಿ: ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ರಿಸರ್ಚ್ ಆಂಡ್ ಡೆವಲಪ ಮೆಂಟ್) ಭಾರತದ ಕಂಪನಿ ಗಳು ಜಾಗತಿಕೆ ಕಂಪನಿಗಳಿಗೆ ಸಡ್ಡು ಹೊಡೆ ಯುತ್ತಿವೆ ಎಂದು ಫೌಂಡೇ ಷನ್ ಫಾರ್ ಎಡ್ವಾಯಿಜಿಂಗ್ ಸೈನ್ಸ್ ಆಂಡ್ ಟೆಕ್ನಾಲಜಿ (ಫಾಸ್ಟ್ ಇಂಡಿಯಾ) ಮತ್ತು ಐಐಎಫ್​ಎಲ್ ಸೆಕ್ಯುರಿಟಿಜ್​ನ ಅಧ್ಯಯನ ವರದಿ ತಿಳಿಸಿದೆ. ಹಣಕಾಸು ವರ್ಷ 2016ರಿಂದ 2023ರವರೆಗೆ ಭಾರತೀಯ ಕಂಪನಿಗಳು ರಿಸರ್ಚ್​ನಲ್ಲಿ ಜಾಗತಿಕ ಕಂಪನಿಗಳಿಗಿಂತ 1.2 ಪಟ್ಟು ಅಧಿಕ ಬೆಳವಣಿಗೆ ದಾಖಲಿಸಿವೆ. ಪೇಟೆಂಟ್ ಗಳಿಸುವಲ್ಲಿ ಮತ್ತು ಉತ್ಪಾದಕತೆಯಲ್ಲಿ (ಔಟ್​ಪುಟ್) ಈಗಲೂ ವಿದೇಶಿ ಕಂಪನಿಗಳು ಮುನ್ನಡೆ ಕಾಯ್ದಯಕೊಂಡಿವೆ. ಆದರೆ, ಭಾರತೀಯ ಕಂಪನಿಗಳು ರಿಸರ್ಚ್ ಆಂಡ್ ಡೆವಲಪಮೆಂಟ್​ನಲ್ಲಿ ಬೆಳವಣಿಗೆ ದಾಖಲಿಸಿವೆ ಎಂದು ವರದಿ ತಿಳಿಸಿದೆ.
ಯಾವ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳು ಮುಂದೆ?
ಎಲ್ ಆಂಡ್ ಟಿ ಕಂಪನಿಗೆ 4.68 ಕೋಟಿ ರೂ. ದಂಡ
ಆದಾಯ ತೆರಿಗೆ ಇಲಾಖೆಯು ಲಾರ್ಸೆನ್ ಆಂಡ್ ಟೂಬ್ರೊ ಲಿಮಿಟೆಡ್​ಗೆ 4.68 ಕೋಟಿ ರೂ.ಗೂ ಅಧಿಕ ದಂಡವನ್ನು ವಿಧಿಸಿದೆ. 2021 ಏಪ್ರಿಲ್ 1ರಂದು ಕಂಪನಿಯೊಂದಿಗೆ ವಿಲೀನಗೊಂಡ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಹಿಂದಿನ ಎಲ್ ಆಂಡ್ ಟಿ ಹೈಡ್ರೋಕಾರ್ಬನ್ ಇಂಜಿನಿಯರಿಂಗ್ ಲಿಮಿಟೆಡ್​ನ ತೆರಿಗೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇಲಾಖೆಯು 4,68,91,352 ರೂ. ದಂಡ ವಿಧಿಸಿದೆ ಎಂದು ಶನಿವಾರ ಸಲ್ಲಿಸಿದ ಫೈಲಿಂಗ್​ನಲ್ಲಿ ಕಂಪನಿ ತಿಳಿಸಿದೆ.
2020-21ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ ಇನಕಮ್ ಹೊಂದಾಣಿಕೆಗೆ ಅನುಗುಣವಾಗಿ ದಂಡ ವಿಧಿಸಲಾಗಿದ್ದು, ಇದನ್ನು ಒಪು್ಪವುದಿಲ್ಲ ಮತ್ತು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಂಪನಿ ಹೇಳಿದೆ. ಎಲ್ ಆಂಡ್ ಟಿ ಕಂಪನಿಯು 27 ಶತಕೋಟಿ ಡಾಲರ್ ಮೊತ್ತದ ಭಾರತೀಯ ಬಹುರಾಷ್ಟ್ರೀಯ ಉದ್ಯಮವಾಗಿದ್ದು, ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬಾಕಿ ಜಿಎಸ್​ಟಿ ಶೀಘ್ರ ವಸೂಲಿಗೆ ನಿರ್ದೇಶನ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ಬಾಕಿಯನ್ನು ಡಿಮಾಂಡ್ ಆರ್ಡರ್ ನೀಡಿದ ನಿಗದಿತ ಮೂರು ತಿಂಗಳ ಮುಂಚೆಯೇ ವಸೂಲಿ ಮಾಡಲು ಪ್ರಧಾನ ಆಯುಕ್ತರು (ಕಮಿಷನರ್) ಅಥವಾ ಕಮಿಷನರ್ ಮಟ್ಟದ ಅಧಿಕಾರಿಗಳು ನಿರ್ದೇಶನ ನೀಡಬಹುದಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಅಬಕಾರಿ ಮಂಡಳಿ (ಸಿಬಿಐಸಿ) ಹೇಳಿದೆ. ತೆರಿಗೆ ಪಾವತಿಸಲು ಅರ್ಹರಾದ ವ್ಯಕ್ತಿಗೆ ಸಿಜಿಎಸ್​ಟಿ ಕಾನೂನಿನಡಿ ಆದೇಶ ಹೊರಡಿಸಿದ ಮೂರು ತಿಂಗಳೊಳಗೆ ನಿಗದಿತ ಮೊತ್ತವನ್ನು ಪಾವತಿಸದಿದ್ದರೆ ತೆರಿಗೆ ಅಧಿಕಾರಿಯು ಬಾಕಿ ವಸೂಲಿಗಾಗಿ ಈ ಮೂರು ತಿಂಗಳ ಅವಧಿ ಮುಗಿದ ಮೇಲಷ್ಟೇ ಕ್ರಮಕೈಗೊಳ್ಳ ಬಹುದೆಂಬುದು ಜಿಎಸ್​ಟಿ ಕಾನೂನಿನ ನಿಯಮವಾಗಿದೆ. ಆದರೆ, ವಿಶೇಷ ಸಂದರ್ಭಗಳಲ್ಲಿ ಆದಾಯದ ಹಿತದೃಷ್ಟಿಯಿಂದ ಸೂಕ್ತ ಅಧಿಕಾರಿಯು ಕಾರಣಗಳನ್ನು ಲಿಖಿತವಾಗಿ ದಾಖಲಿಸಿದ ನಂತರ ಮೂರು ಮಾಸಕ್ಕಿಂತ ಕಡಿಮೆ ಅವಧಿಯಲ್ಲಿ ಬಾಕಿ ಮೊತ್ತವನ್ನು ಪಾವತಿಸುವಂತೆ ಸಂಬಂಧಿತ ತೆರಿಗೆದಾರರಿಗೆ ಸೂಚಿಸಬಹುದಾಗಿದೆ. ಸಾಮಾನ್ಯವಾಗಿ, ಕೇಂದ್ರೀಯ ತೆರಿಗೆಯ ಉಪ ಅಥವಾ ಸಹಾಯಕ ಕಮಿಷನರ್ ವಸೂಲಿ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ.
ದಯವಿಟ್ಟು ಈ ಸಮಯದಲ್ಲಿ ಫುಡ್​ ಆರ್ಡರ್​ ಮಾಡೋದನ್ನು ಆದಷ್ಟು ನಿಲ್ಲಿಸಿ: ಗ್ರಾಹಕರಲ್ಲಿ ಝೊಮ್ಯಾಟೋ ಸಂಸ್ಥೆ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
