ಮುಂಬೈ:ಅದಾನಿ ಗ್ರೂಪ್​ನ ಚೇರ್ಮನ್ ಗೌತಮ್​ ಅದಾನಿ ಇದೀಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್​ನ ಚೇರ್ಮನ್​ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.
ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ನ ಹೊಸ ಪಟ್ಟಿ ಪ್ರಕಾರ ಗೌತಮ್ ಅದಾನಿಯ ಒಟ್ಟು ಆಸ್ತಿ 10,000 ಕೋಟಿ (100 ಬಿಲಿಯನ್) ಡಾಲರ್ ಆಗಿದ್ದು, ಈ ಮೂಲಕ ಅವರು ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಟಾಪ್​-10 ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಮುಖೇಶ್ ಅಂಬಾನಿ 9,900 ಕೋಟಿ (99 ಬಿಲಿಯನ್​) ಡಾಲರ್ ಆಸ್ತಿ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ತಲುಪಿದ್ದಾರೆ.
ಅದಾನಿ-ಅಂಬಾನಿ ಇಬ್ಬರೂ ಹಲವು ಕ್ಷೇತ್ರಗಳಲ್ಲಿ ವ್ಯಾಪಾರ-ವಹಿವಾಟು ಹೊಂದಿದ್ದು ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದ್ದು, ಹಿಂದಿನ ಒಂದು ವಾರದ ಬೆಳವಣಿಗೆ ಅದಾನಿಗೆ ಭಾರಿ ಲಾಭ ತಂದುಕೊಟ್ಟಿದೆ.
ಅದಾನಿ ಗ್ರೂಪ್ ಆಫ್ ಎಡಿಬಲ್ ಆಯಿಲ್ ಕಂಪನಿ ಅದಾನಿ ವಿಲ್​-ಮರ್​ನ ಷೇರಿನಲ್ಲಿ ಶೇ. 30 ಹೆಚ್ಚಳವಾಗಿದ್ದು, ಅದಾನಿ ವಿಲ್​ಮರ್​ನ ಇನಿಷಿಯಲ್ ಪಬ್ಲಿಕ್ ಆಫರ್​ನಿಂದ 3,600 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು ರಷ್ಯಾ-ಯೂಕ್ರೇನ್​ ಯುದ್ಧದ ಪರಿಣಾಮ ಅದಾನಿ ಕಂಪನಿಯ ಷೇರಿನಲ್ಲಿ ಭಾರಿ ಬೆಳವಣಿಗೆ ಆಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಕೊಡುಗೆಯಾಗಿ ತುಟ್ಟಿಭತ್ಯೆ ನೀಡಿ..

ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿ; ಇಬ್ಬರೂ ನೀರುಪಾಲು..

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine − five =
Remember me
