ನವದೆಹಲಿ:ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪಾಕಿಸ್ತಾನ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ‘ಕೋವಿಡ್ -19 ನಿಂದ ಶೀಘ್ರ ಗುಣಮುಖವಾಗಿ’ ಎಂದು ಹಾರೈಸಿದ್ದಾರೆ. ಅಫ್ರಿದಿ ಶನಿವಾರ, ತಾವು ಕರೊನಾ ವೈರಸ್ ಸೋಂಕಿತರಾಗಿರುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಕೇಳಿದಾಗ ಗಂಭೀರ್, ‘ ಯಾರೂ ವೈರಸ್ ಸೋಂಕಿಗೆ ಒಳಗಾಗದಿರಲಿ’ ಎಂದು ಹೇಳಿದ್ದಾರೆ.“ಶಾಹಿದ್ ಅಫ್ರಿದಿಯವರೊಂದಿಗೆ ನನಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆಯಾದರೂ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ ”ಎಂದು ಸ್ಪೋರ್ಟ್ಸ್ ತಕ್​​​ನಲ್ಲಿ ಗಂಭೀರ್ ಹೇಳಿದ್ದಾರೆ. “ಆದರೆ ಅಫ್ರಿದಿಗಿಂತ ಹೆಚ್ಚಾಗಿ, ನನ್ನ ದೇಶದಲ್ಲಿ ಸೋಂಕಿಗೊಳಗಾದ ಪ್ರತಿಯೊಬ್ಬರೂ ಆದಷ್ಟು ಬೇಗ ಗುಣಮುಖನಾಗಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.
ಇದನ್ನೂ ಓದಿ:ರೋಗದ ವಿರುದ್ಧ ಹೋರಾಟಕ್ಕೆ ವಿಚಾರಧಾರೆಗಳನ್ನು ಹಂಚಿಕೊಳ್ಳಿ ಎಂದ ಪಿಎಂ
“ನಾನು ಗುರುವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ; ನನ್ನ ದೇಹದಲ್ಲಿ ನೋವು ಕಾಣಿಸಿಕೊಂಡಿತ್ತು. ನನ್ನನ್ನು ಪರೀಕ್ಷಿಸಿದಾಗ ದುರದೃಷ್ಟವಶಾತ್ ನಾನು ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ.ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಅಫ್ರಿದಿ ಶನಿವಾರ ಟ್ವೀಟ್ ಮಾಡಿದ್ದರು.ಗೌತಮ್ ಗಂಭೀರ್ ಹೊರತಾಗಿ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಟ್ವಿಟ್ಟರ್ ನಲ್ಲಿ ಅಫ್ರಿದಿ ಶೀಘ್ರ ಗುಣಮುಖವಾಗಲೆಂದು ಹಾರೈಸಿದ್ದಾರೆ. ಅವರು ಯುಟ್ಯೂಬ್ ವೀಡಿಯೊದ ಸ್ಕ್ರೀನ್​ಶಾಟ್ ಅನ್ನು ಹಂಚಿಕೊಂಡಿದ್ದು, ಜನರಿಗೆ ಸೂಕ್ಷ್ಮತೆ ಮತ್ತು ಮಾನವೀಯತೆಯನ್ನು ಕಾಪಾಡಿಕೊಳ್ಳಲು ತಿಳಿಸಿದ್ದಾರೆ. ವೇಗದ ಬೌಲರ್ ವಹಾಬ್ ರಿಯಾಜ್, ಸೋಹೇಲ್ ತನ್ವೀರ್ ಹಾಗೂ ಹಲವಾರು ಹಾಲಿ ಮತ್ತು ಮಾಜಿ ಪಾಕಿಸ್ತಾನಿ ಆಟಗಾರರು, ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಂ ಸಹ ಅಫ್ರಿದಿ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ಮೂರು ಕಾಡಾನೆ ಸಾವು; ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಅಧಿಕಾರಿಗಳ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 17 =
Remember me
