ನವದೆಹಲಿ:ಕರೊನಾ ಸಾಂಕ್ರಾಮಿಕದ ಕಾರಣ 2020-21ನೇ ಸಾಲಿನ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಮೈನಸ್ ಶೇ. 7.3ಕ್ಕೆ ತಗ್ಗಿದೆ. ಜಿಡಿಪಿಯ ಶೇ. 9.3 ಆರ್ಥಿಕ ಸಾಲಿನ ವಿತ್ತೀಯ ಕೊರತೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಇದು ಕಳೆದ 11 ವರ್ಷದಲ್ಲೇ ಅತ್ಯಂತ ಕನಿಷ್ಠ ಮಟ್ಟದ ಜಿಡಿಪಿ ಆಗಿದೆ. ಆರ್ಥಿಕ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ ಕರೊನಾ ಎರಡನೇ ಅಲೆ ತೀಕ್ಷ್ಣಗೊಳ್ಳುತ್ತಿರುವ ಮಧ್ಯೆಯೂ ಶೇ. 1.6ರಷ್ಟು ಬೆಳವಣಿಗೆಯನ್ನು ಜಿಡಿಪಿ ದಾಖಲಿಸಿದೆ. 2019-20ರಲ್ಲಿ ಜಿಡಿಪಿ ಶೇ. 4 ಇತ್ತು. ಈ ಆರ್ಥಿಕ ಸಾಲಿನ ಕಡೆಯ ಚರಣದಲ್ಲಿ ದೇಶದಲ್ಲಿ ಕರೊನಾ ಕಾಲಿಟ್ಟಿತ್ತು.
ತಗ್ಗಿದ ಕೈಗಾರಿಕಾ ವಲಯದ ಹಣದುಬ್ಬರ:ಕೈಗಾರಿಕಾ ವಲಯದ ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ. 5.14ಕ್ಕೆ ಇಳಿದಿರುವುದು ಕೊಂಚ ನಿರಾಳ ನೀಡಿದೆ. ಮಾರ್ಚ್​ನಲ್ಲಿ ಇದರ ಪ್ರಮಾಣ ಶೇ. 5.64 ಇತ್ತು. 2020ರ ಏಪ್ರಿಲ್​ನಲ್ಲಿ ಇದು ಶೇ. 5.45 ದಾಖಲಾಗಿತ್ತು ಎಂದು ಕಾರ್ವಿುಕ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಆಹಾರ ವಲಯದ ಚಿಲ್ಲರೆ ಹಣದುಬ್ಬರವು ಶೇ. 4.78ಕ್ಕೆ ಇಳಿದಿದೆ. ಇದು ಮಾರ್ಚ್​ನಲ್ಲಿ ಶೇ. 5.36 ಮತ್ತು 2020ರ ಏಪ್ರಿಲ್​ನಲ್ಲಿ ಶೇ. 6.56 ಇತ್ತು ಎಂದು ಸಚಿವಾಲಯ ಹೇಳಿದೆ.
– ಎರಡನೇ ಅಲೆ ಶುರುವಾದ ಫೆಬ್ರವರಿಯಲ್ಲಿ ಜಿಡಿಪಿ ಮೈನಸ್ ಶೇ. 8ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು.
– ಗ್ರಾಸ್ ವಾಲ್ಯೂ ಆಡೆಡ್ (ಜಿವಿಎ) ಪ್ರಕಾರ 2020-21ರ ಜಿಡಿಪಿ ಮೈನಸ್ ಶೇ. 6.2 ಜಿವಿಎ ಜಿಡಿಪಿಯನ್ನು ನಿಖರವಾಗಿ ಅಳೆಯುವ ಅಳತೆಗೋಲು.

ಸಂಕಷ್ಟದ ವರ್ಷ:ಸೋಂಕಿನ ಮೊದಲ ಅಲೆ ವೇಳೆ ಲಾಕ್​ಡೌನ್ ನಿರ್ಬಂಧಗಳು ಕಠಿಣವಾಗಿದ್ದ ಕಾರಣ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ ದೇಶದಲ್ಲಿ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಆರ್ಥಿಕತೆ ಪೂರ್ಣವಾಗಿ ಕುಸಿದು ಜಿಡಿಪಿ ಮೈನಸ್ ಶೇ. 23.9ಕ್ಕೆ ಕುಸಿದಿತ್ತು. ಜೂನ್ ನಂತರ ನಿರ್ಬಂಧಗಳು ಹಂತ ಹಂತವಾಗಿ ಸಡಿಲವಾಗಿದ್ದರಿಂದ ಆರ್ಥಿಕ ಚುಟುವಟಿಕೆ ನಿಧಾನವಾಗಿ ಗರಿಗೆದರಿದವು. ಆದರೆ, ಜಿಡಿಪಿ ಸಂಕುಚಿತದಲ್ಲೇ ಮುನ್ನಡೆದರೂ ಮೊದಲ ತ್ರೖೆಮಾಸಿಕದ ಆಘಾತಕ್ಕಿಂತ ಸಾಕಷ್ಟು ಸುಧಾರಿಸಿಕೊಂಡು ಮೈನಸ್ ಶೇ. 7.5ಕ್ಕೆ ಬಂದಿತ್ತು. ಮೂರನೇ ತ್ರೖೆಮಾಸಿಕದ ಅವಧಿಯಲ್ಲಿ ಲಾಕ್​ಡೌನ್ ನಿರ್ಬಂಧ ಹೆಚ್ಚು ಕಠಿಣವಾಗಿ ಇರಲಿಲ್ಲ. ಕೈಗಾರಿಕೆ, ವ್ಯಾಪಾರೋದ್ಯಮಗಳು ಹಳಿಗೆ ಬರತೊಡಗಿದವು. ಹೀಗಾಗಿ ಜಿಡಿಪಿ ಶೂನ್ಯ ಪಥ ಬಿಟ್ಟು ಪ್ರಗತಿಯತ್ತ (ಶೇ. 0.4) ಹೊರಳಿತು. ಜನವರಿ ಅಂತ್ಯದ ಹೊತ್ತಿಗೆ ಕರೊನಾ ಸೋಂಕು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಚೇತರಿಕೆ ಪ್ರಮಾಣ ಹೆಚ್ಚಿತ್ತು. ಹೀಗಾಗಿ ಹೆಚ್ಚು ಆರ್ಥಿಕ ಚಟುವಟಿಕೆಗಳು ಮುನ್ನಡೆಯಲು ಆರಂಭಿಸಿದ್ದರಿಂದ ಈ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 1.6ಕ್ಕೆ ಮುಟ್ಟಲು ಸಾಧ್ಯವಾಯಿತು. ಇಷ್ಟೆಲ್ಲವಾದರೂ ದೇಶದ ಕೃಷಿ ವಲಯ ಮೊದಲ ತ್ರೖೆಮಾಸಿಕದಿಂದಲೂ ಧನಾತ್ಮಕವಾಗಿಯೇ ಮುನ್ನಡೆದಿದ್ದು ಸಮಾಧಾನಕರ. 2021ರ ಫೆಬ್ರವರಿ ಎರಡನೇ ವಾರದ ನಂತರ ಶುರುವಾದ 2ನೇ ಅಲೆ ದೇಶವನ್ನು ಬೆಚ್ಚಿಬೀಳಿಸತೊಡಗಿತು. ಮಾರ್ಚ್ ಅಂತ್ಯದ ಹೊತ್ತಿಗೆ ನಿತ್ಯದ ಸೋಂಕಿನ ಪ್ರಮಾಣ ಲಕ್ಷದ ಸಮೀಪಕ್ಕೆ ಬಂದಿತ್ತು.
ಕರೊನಾ ಸೋಂಕಿತನ ಶವ ಊರಿಗೆ ತರದಂತೆ ವಿರೋಧ; ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ದ ಶಾಸಕ

ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
