ವಾಷಿಂಗ್ಟನ್:ಕರೊನಾ ಕಾರಣದಿಂದ ದೇಶದ ಆರ್ಥಿಕತೆ ಮೇಲಿನ ಆಘಾತ ಮುಂದುವರಿದಿದ್ದು, ಇದರ ಪರಿಣಾಮವಾಗಿ ಪ್ರಸಕ್ತ ವರ್ಷದ ಜಿಡಿಪಿ -ಶೇ. 10.3ಕ್ಕೆ ಕುಸಿತವಾಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್ ) ಅಂದಾಜಿಸಿದೆ. ಈ ಕಹಿ ಸುದ್ದಿಯ ಹೊರತಾಗಿಯೂ 2021ರಲ್ಲಿ ಭಾರತದ ಆರ್ಥಿಕತೆ ಪುಟಿದೆದ್ದು ಶೇ.8.8ರ ದರದಲ್ಲಿ ಬೆಳವಣಿಗೆ ಕಾಣುವ ವಿಶ್ವಾಸವೂ ವ್ಯಕ್ತವಾಗಿದೆ. ಕರೊನಾ ಲಾಕ್​ಡೌನ್ ಜಾರಿ ಬಳಿಕ 2020-21ರ ಮೊದಲ ತ್ರೖೆಮಾಸಿಕದಲ್ಲಿ ಭಾರತದ ಜಿಡಿಪಿ ಮೈನಸ್ 23.9ಕ್ಕೆ ಕುಸಿತ ಕಂಡಿದೆ.
2021 ಆರಂಭದ ಹೊತ್ತಿಗೆ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಖ್ಯಾತಿಯನ್ನು ಭಾರತ ಮತ್ತೆ ಗಳಿಸಲಿದೆ. ಚೀನಾದ ಆರ್ಥಿಕತೆ ಶೇ.8.2ರ ದರದಲ್ಲಿ ಬೆಳವಣಿಗೆ ಕಂಡರೆ ಭಾರತ ಇದನ್ನು ಹಿಂದಿಕ್ಕಿ ಸಾಧನೆ ಮಾಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಗತಿಕ ಆರ್ಥಿಕ ಬೆಳವಣಿಗೆ 2020ರಲ್ಲಿ ಶೇ. ಮೈನಸ್ 4.4ರಷ್ಟು ಕುಗ್ಗಲಿದೆ. 2021ರಲ್ಲಿ ಶೇಕಡ 5.2ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ. ಅಮೆರಿಕದ ಆರ್ಥಿಕತೆ 2020ರಲ್ಲಿ ಶೇಕಡ 5.8ರಷ್ಟು ಸಂಕುಚಿತಗೊಳ್ಳುತ್ತದೆ ಮತ್ತು ಮುಂದಿನ ವರ್ಷ ಶೇಕಡ 3.9 ಪ್ರಗತಿ ದಾಖಲಿಸಲಿದೆ. 2020ರಲ್ಲಿ ಆರ್ಥಿಕ ಬೆಳವಣಿಗೆ ಕಂಡ ಏಕೈಕ ದೇಶ ಚೀನಾ ಆಗಿದ್ದು, ಅದು ಶೇಕಡ 1.9ರಷ್ಟು ಸಕಾರಾತ್ಮಕ
ಬೆಳವಣಿಗೆ ಹೊಂದಿದೆ. ಈ ವರ್ಷದ ಮೊದಲಾರ್ಧದಲ್ಲಿ ಕುಸಿತ ಕಂಡಿದ್ದ ವಿವಿಧ ದೇಶಗಳ ಆರ್ಥಿಕತೆಯು ಈಗ ಚೇತರಿಸಿ ಕೊಳ್ಳುತ್ತಿವೆ ಎಂದು ಐಎಂಎಫ್ ಹೇಳಿದೆ.
ಗ್ಲಾಸ್​, ಸ್ಮಾರ್ಟ್​ಫೋನ್​ಗಳ ಮೇಲೆ 28 ದಿನ ಜೀವಂತ ಇರುತ್ತೆ ಕರೊನಾ ವೈರಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
