ನವದೆಹಲಿ:ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪಾಕಿಸ್ತಾನದಲ್ಲಿರುವ ಹೈಕಮಿಷನ್‌ನಲ್ಲಿ ಗೀತಿಕಾ ಶ್ರೀವಾಸ್ತವ ಅವರು ಭಾರತದ ನೂತನ ಚಾರ್ಜ್ ಡಿ ಅಫೇರ್ ಆಗಲಿದ್ದಾರೆ. 2005ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಗೀತಿಕಾ ಶ್ರೀವಾಸ್ತವ ಅವರು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಭಾರತದ ನೂತನ ಉಸ್ತುವಾರಿಯಾಗಲಿದ್ದಾರೆ. ಸುರೇಶ್ ಕುಮಾರ್ ಸ್ಥಾನಕ್ಕೆ ಅವರು ಶೀಘ್ರದಲ್ಲೇ ಹೊಸದಿಲ್ಲಿಗೆ ಮರಳುವ ಸಾಧ್ಯತೆಯಿದೆ.
ಆಗಸ್ಟ್ 2019 ರಲ್ಲಿ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಸಂಬಂಧದ ಸ್ಥಾನಮಾನವನ್ನು ಕಡಿತಗೊಳಿಸಿದ್ದವು. ಅಂದರೆ, ಈಗ ಎರಡೂ ದೇಶಗಳಲ್ಲಿ ಹೈಕಮಿಷನರ್ ಇಲ್ಲ. ಇದರ ನಂತರ, ಇಸ್ಲಾಮಾಬಾದ್ ಮತ್ತು ದೆಹಲಿಯಲ್ಲಿರುವ ಪಾಕಿಸ್ತಾನಿ ಮತ್ತು ಭಾರತೀಯ ಹೈಕಮಿಷನ್‌ಗಳು ಆಯಾ ಉಸ್ತುವಾರಿಗಳ ನೇತೃತ್ವದಲ್ಲಿವೆ.
ಗೀತಿಕಾ ಶ್ರೀವಾಸ್ತವ್ ಯಾರು?ಗೀತಿಕಾ ಶ್ರೀವಾಸ್ತವ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಧಾನ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂಡೋ ಪೆಸಿಫಿಕ್ ವಿಭಾಗದಲ್ಲಿದ್ದಾರೆ. ವಿದೇಶಿ ಭಾಷಾ ತರಬೇತಿಯ ಸಮಯದಲ್ಲಿ ಮ್ಯಾಂಡರಿನ್ (ಚೀನೀ ಭಾಷೆ) ಕಲಿತರು. 2007 ರಿಂದ 2009 ರವರೆಗೆ ಚೀನಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದರು. ಕೋಲ್ಕತ್ತಾದ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿಂದೂ ಮಹಾಸಾಗರ ವಲಯ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ ಅವರು ಇಸ್ಲಾಮಾಬಾದ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪಾಕಿಸ್ತಾನಕ್ಕೆ ಮೊದಲ ಭಾರತೀಯ ಹೈಕಮಿಷನರ್ ಶ್ರೀಪ್ರಕಾಶ್‌1947 ರಲ್ಲಿ, ಶ್ರೀಪ್ರಕಾಶ್‌ ಪಾಕಿಸ್ತಾನಕ್ಕೆ ಮೊದಲ ಭಾರತೀಯ ಹೈಕಮಿಷನರ್ ಆಗಿ ನೇಮಕಗೊಂಡರು, ಅಂದಿನಿಂದ ಭಾರತವನ್ನು ಯಾವಾಗಲೂ ಪುರುಷ ರಾಜತಾಂತ್ರಿಕರು ಪ್ರತಿನಿಧಿಸುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಕೊನೆಯ ಭಾರತೀಯ ಹೈಕಮಿಷನರ್ ಅಜಯ್‌ ಬಿಸಾರಿಯಾ, ಆರ್ಟಿಕಲ್ 370 ರದ್ದತಿ ನಂತರ ಹೈಕಮಿಷನ್ ಸ್ಥಾನವನ್ನು ಡೌನ್ ನ್‌ ಗ್ರೇಡ್ ಮಾಡುವ ಪಾಕಿಸ್ತಾನದ ನಿರ್ಧಾರದ ನಂತರ ಅವರನ್ನು 2019 ರಲ್ಲಿ ಹಿಂಪಡೆಯಲಾಯಿತು. ಈ ಹಿಂದೆಯೂ ವಾಕಿಸ್ತಾನದಲ್ಲಿ ಮಹಿಳಾ ರಾಜತಾಂತ್ರಿಕರನ್ನು ನಿಯೋಜಿಸಲಾಗಿದೆ.
ಪಿಒಕೆಯಲ್ಲಿ ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆ; ತಿಂಗಳ ಸಂಬಳಕ್ಕಿಂತಲೂ ಹೆಚ್ಚಿದೆಯಂತೆ ಕರೆಂಟ್ ಬಿಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
