ನವದೆಹಲಿ:ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಲು ಮಾರ್ಚ್​ ಕೊನೆಯ ವಾರದಲ್ಲಿ ಜಾರಿಗೆ ಬಂದ ಲಾಕ್​ಡೌನ್​ಗಿಂತ ಮೊದಲಿನಿಂದಲೂ ಪ್ರಯತ್ನಗಳು ನಡೆದಿದ್ದವು ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಹೈಕಮಾಂಡ್​ ಅದಾಗಲೇ ಸಿಎಂ ಹುದ್ದೆ ಕೈತಪ್ಪಿದಾಗಿನಿಂದಲೂ ಅತೃಪ್ತರಾಗಿದ್ದ ಡಿಸಿಎಂ ಸಚಿನ್​ ಪೈಲಟ್​ ಜತೆ ಮಾತುಕತೆ ನಡೆಸುತ್ತಿತ್ತು ಎನ್ನಲಾಗಿದೆ. ಆ ಪ್ರಯತ್ನ ಈಗ ತುರುಸುಗೊಂಡಿರುವುದಾಗಿ ಎಂದು ಹೇಳಲಾಗುತ್ತಿದೆ.
ಗೆಹ್ಲೋಟ್​ ಸರ್ಕಾರ ಉರುಳಿಸಿದರೆ ಸಿಎಂ ಪಟ್ಟ ತಮಗೇ ಕೊಡಬೇಕು ಎಂದು ಸಚಿನ್​ ಪೈಲಟ್​ ಬಿಜೆಪಿ ಮುಖಂಡರಿಗೆ ಷರತ್ತು ಹಾಕಿದ್ದಾರೆ. ಆದರೆ, ಅಲ್ಲಿ 45 ಶಾಸಕರ ಬೆಂಬಲ ಹೊಂದಿರುವ ವಸುಂಧರಾ ರಾಜೆ ಅವರನ್ನು ಸಿಎಂ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್​ನ ಇಚ್ಛೆಯಾಗಿದೆ. ಈ ವಿಷಯ ತಿಳಿದಿದ್ದರೂ ಗೆಹ್ಲೋಟ್​ ವಿರುದ್ಧ ಪೈಲಟ್​ ಅವರ ಬಂಡಾಯ ಮುಂದುವರಿದಿದೆ.
ಇದನ್ನೂ ಓದಿ:ಕ್ವಾರಂಟೈನ್‌ನಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಕೈಹಿಡಿದ ‘ಯಯಾತಿ’
ಸದ್ಯಕ್ಕೆ ಪೈಲಟ್​ ಕಾಂಗ್ರೆಸ್​ ಹೈಕಮಾಂಡ್​ ಮುಂದೆ ಬಲಪ್ರದರ್ಶನ ಮಾಡುವ ಮೂಲಕ ಸಿಎಂ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಟ್ಟಿದ್ದಾರೆ. ಇದಕ್ಕಾಗಿ ಅವರು ತಮ್ಮ ಬೆಂಬಲಿಗ 23 ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್​ ಜತೆ ಅವರ ಭೇಟಿ ನಿಗದಿಯಾಗಿಲ್ಲ ಎನ್ನಲಾಗುತ್ತಿದೆ.
ಪ್ರಾದೇಶಿಕ ಪಕ್ಷ: ಕಾಂಗ್ರೆಸ್​ ಹೈಕಮಾಂಡ್​ ತಮ್ಮ ಬೆಂಬಲಕ್ಕೆ ನಿಲ್ಲದೇ ಹೋದರೆ ಪಕ್ಷದಿಂದ ಹೊರಬಂದು ಪ್ರಾದೇಶಿಕ ಪಕ್ಷ ರಚಿಸಿಕೊಳ್ಳುವ ಬಗ್ಗೆಯೂ ಪೈಲಟ್​ ಚಿಂತನೆ ನಡೆಸಿದ್ದಾರೆ. ಇದಕ್ಕೆ ಅವಕಾಶವಾದರೆ ಬಿಜೆಪಿಯೊಂದಿಗೆ ಸಖ್ಯ ಬೆಳಸದಿರಲೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
