ನವದೆಹಲಿ:ಕೋರ್ಟ್ ಕಲಾಪ ಮತ್ತು ತೀರ್ಪಗಳಲ್ಲಿ ಮಹಿಳೆಯರನ್ನು ಸಂಬೋಧಿಸುವ ವಿಚಾರದಲ್ಲಿ ಇದುವರೆಗೆ ಬಳಸಲಾಗುತ್ತಿದ್ದ ಹಲವು ಪದಗಳು ಮತ್ತು ಪದಪುಂಜಗಳು ಅಸಮರ್ಪಕ ಹಾಗೂ ಸಂವೇದನಾರಹಿತವಾಗಿವೆ ಎಂದು ಅತೃಪ್ತಿ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇನ್ನು ಮುಂದೆ ಅಂತಹ ಪದಗಳು ಬಳಕೆ ಪುನರಾವರ್ತನೆ ಆಗುವುದನ್ನು ತಪ್ಪಿಸಲು ಕೈಪಿಡಿ ಪ್ರಕಟಿಸಿದೆ.
ಹಲವು ತೀರ್ಪಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿ ದಂತೆ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಲಾಗಿದೆ. ಕೋರ್ಟ್ ತೀರ್ಪಗಳಲ್ಲಿ ಇಂಥ ಪದಗಳ ಬಳಕೆ ಸಮಂಜಸವಲ್ಲ. ಹೀಗಾಗಿ ಇನ್ನು ಮುಂದೆ ತೀರ್ಪು ನೀಡುವ ಸಂದರ್ಭದಲ್ಲಿ ಮಹಿಳೆಯರಿಗೆ ಅಗೌರವ ತರುವ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಬಾರದು ಎಂದು ನ್ಯಾಯಮೂರ್ತಿಗಳಿಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಎಚ್ಚರಿಕೆ ನೀಡಿದ್ದಾರೆ.
ಕೈಪಿಡಿ ಬಿಡುಗಡೆ ಮಾಡಿದ ಹಿಂದಿನ ತೀರ್ಪಗಳಲ್ಲಿ ಉಲ್ಲೇಖವಾಗಿರುವ ಹಲವು ನಿಂದನಾತ್ಮಕ ಪದಗಳನ್ನು ಉದಾಹರಿಸಿದ ಅವರು, ಕೆಲವು ತೀರ್ಪಗಳಲ್ಲಿ ಬಳಕೆ ಮಾಡಿರುವ ಪದಗಳು ಸೂಕ್ತವಾಗಿಲ್ಲ. ಅಂತಹ ಪದಗಳ ಬಳಕೆ ಸಮಂಜಸವೂ ಅಲ್ಲ. ಈ ಹಿಂದಿನ ತೀರ್ಪಗಳನ್ನು ಟೀಕಿಸುವುದಾಗಲೀ ಅವುಗಳನ್ನು ಅನುಮಾನಿಸುವುದಾಗಲೀ ಈ ಪುಸ್ತಕದ ಉದ್ದೇಶವಲ್ಲ. ಆಕಸ್ಮಿಕವಾಗಿ ಸ್ತ್ರೀ ಕುರಿತ ಕ್ಲೀಷೆಗಳು ಹೇಗೆ ಉಳಿದುಕೊಂಡು ಬಂದಿವೆ ಎನ್ನುವುದನ್ನು ತೋರಿಸುವುದು ಈ ಪುಸ್ತಕದ ಉದ್ದೇಶವಾಗಿದೆ ಎಂದರು. ಮಹಿಳೆಯರಿಗೆ ಸಂಬಂಧಿಸಿದ ಹಲವು ಪ್ರಕರಣಗಳ ತೀರ್ಪಗಳನ್ನು ಗಮನಿಸಿದಾಗ ಸಂಬಂಧ ಹೊಂದಿದ ಮಹಿಳೆಗೆ ಕೀಪ್ (ಇಟ್ಟುಕೊಂಡವಳು) ಎಂಬ ಪದ ಬಳಕೆ ಮಾಡಲಾಗಿದೆ. ಇದು ಒಂದು ಉದಾಹರಣೆ ಮಾತ್ರ. ಉಪಪತ್ನಿ, ಇಟ್ಟುಕೊಂಡವಳು ಮುಂತಾದ ಪದ ಬಳಕೆ ಸೂಕ್ತವಲ್ಲ. ಇಂಥ ಪ್ರಕರಣಗಳೇ ಕೈಪಿಡಿ ಹೊರತರಲು ಕಾರಣವಾಗಿವೆ ಎಂದು ಹೇಳಿದರು.
ಸಿಜೆಐ ಚಂದ್ರಚೂಡ್ ಅವರ ಅವಧಿಯಲ್ಲಿನ ಹಲವು ಕ್ರಮಗಳಲ್ಲಿ ಈ ಕೈಪಿಡಿ ಹೊರತಂದಿರುವುದೂ ಒಂದು ಪ್ರಮುಖ ಎಂದು ಹೇಳಲಾಗಿದೆ. ಈ ಮೊದಲು ಅವರು ಸುಪ್ರೀಂ ಕೋರ್ಟ್ ತೀರ್ಪಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಲು ಕೈಗೊಂಡಿದ್ದ ನಿರ್ಧಾರ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
ಗಂಡನ ಮದ್ಯವ್ಯಸನ ಮಾನಸಿಕ ಕ್ರೌರ್ಯ:ಗಂಡನ ಮದ್ಯಪಾನ ಚಟದಿಂದ ಪತ್ನಿ ಮತ್ತು ಕುಟುಂಬಕ್ಕೆ ಮಾನಸಿಕ ಕ್ರೌರ್ಯ ಉಂಟಾಗುತ್ತದೆ ಎಂದು ಛತ್ತೀಸ್​ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಉಮೇಶ್ ಶರ್ಮಾ ಕೊಡುವ ಹಿಂಸೆಯ ನೆಲೆಯಲ್ಲಿ ವಿಚ್ಛೇದನ ಕೋರಿ ಪಾಯಲ್ ಶರ್ಮಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಪತಿ ತನ್ನ ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಿರಲಿಲ್ಲ ಹಾಗೂ ಮನೆ ನಿಭಾಯಿಸಲು ಹಣ ಕೇಳಿದ ಪತ್ನಿಯನ್ನು ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದನ್ನೂ ಗಣನೆಗೆ ತೆಗೆದುಕೊಂಡಿದೆ.
ಮಥುರಾದಲ್ಲಿ ನೆಲಸಮಕ್ಕೆ ತಡೆ:ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿಯ ಬಳಿ ಅಕ್ರಮ ನಿರ್ವಣಗಳನ್ನು ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು 10 ದಿನ ನಿಲ್ಲಿಸುವಂತೆ ಸೂಚಿಸಿರುವ ಸುಪ್ರೀಂಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬುಧವಾರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಸಂಜಯ್ ಕುಮಾರ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ಪೀಠವು ಈ ಪ್ರಕರಣದಲ್ಲಿ ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು; ಒಂದು ವಾರದ ನಂತರ ಪ್ರಕರಣದ ವಿಚಾರಣೆಯನ್ನು ಪಟ್ಟಿ ಮಾಡಲಾಗುತ್ತದೆ’ ಎಂದಿದೆ. 100 ಮನೆಗಳನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ. ಈ ತೆರವು ಕಾರ್ಯಾಚರಣೆ ನಿರುಪಯುಕ್ತವಾಗುತ್ತದೆ ಎಂದು ಅರ್ಜಿದಾರ ಯಾಕೂಬ್ ಶಾ ಆರೋಪಿಸಿದ್ದಾರೆ.
ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ

ಇದಕ್ಕೆ ನಾನೇ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 8 =
Remember me
