ಮುಂಬೈ:ರಿಲಯನ್ಸ್​ ಜಿಯೋ ಎಂಬ ಸಮುದ್ರದಲ್ಲಿನ ಪ್ರಯಾಣದಲ್ಲಿ ಫೇಸ್​ಬುಕ್​, ಸಿಲ್ವರ್​ ಲೇಕ್​, ವಿಸ್ಟಾ ಈಕ್ವಿಟಿ ಜತೆಗೆ ಈಗ ಜಾಗತಿಕ ಈಕ್ವಿಟಿ ಸಂಸ್ಥೆ ಜನರಲ್​ ಅಟ್ಲಾಂಟಿಕ್​ ಕೂಡ ಸೇರಿಕೊಂಡಿದೆ.
ಈ ವಿಷಯವನ್ನು ಭಾನುವಾರ ತಿಳಿಸಿರುವ ರಿಲಯನ್ಸ್​ ಜಿಯೋ ತನ್ನ ಶೇ.1.34 ಷೇರುಗಳನ್ನು 6,598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​ಗೆ ಮಾರಾಟ ಮಾಡಿರುವುದಾಗಿ ಹೇಳಿದೆ.
ಇದನ್ನೂ ಓದಿ:ಗಿಟಾರ್​ ನುಡಿಸಿ ರೈಲು ಪ್ರಯಾಣಿಕರನ್ನು ರಂಜಿಸಿದ ಕರೊನಾ ಸೇನಾನಿ
ಜನರಲ್​ ಅಟ್ಲಾಂಟಿಕ್​ನೊಂದಿಗಿನ ವಾಣಿಜ್ಯ ಪಾಲುದಾರಿಕೆಯಿಂದಾಗಿ ರಿಲಯನ್ಸ್​ ಜಿಯೋದ ಒಟ್ಟಾರೆ ಹೂಡಿಕೆ ಮೊತ್ತ 67,194.75 ಕೋಟಿ ರೂ.ಗೆ ಹೆಚ್ಚಳವಾಗಿದೆ. ಜತೆಗೆ ಅದರ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ.ಗೆ, ಔದ್ಯಮಿಕ ಮೌಲ್ಯ 5.16 ಲಕ್ಷ ಕೋಟಿ ರೂ.ಗೆ ಹೆಚ್ಚಳವಾದಂತಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಫೇಸ್​ಬುಕ್​, ಸಿಲ್ವರ್​ ಲೇನ್​, ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ರಿಲಯನ್ಸ್​ ಜಿಯೋದ ಷೇರುಗಳನ್ನು ಖರೀದಿಸಿದ್ದವು.ಜನರಲ್​ ಅಟ್ಲಾಂಟಿಕ್​ ಸಂಸ್ಥೆ ಜಾಗತಿಕ ಈಕ್ವಿಟಿ ಸಂಸ್ಥೆಯಾಗಿದೆ. ತಂತ್ರಜ್ಞಾನ, ಗ್ರಾಹಕ, ಆರ್ಥಿಕ ಸೇವೆಗಳು ಮತ್ತು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿನ ಹೂಡಿಕೆಯಲ್ಲಿ ಒಟ್ಟು 4 ದಶಕಗಳ ಅನುಭವ ಹೊಂದಿದೆ. ಅನ್ವೇಷಣಾತ್ಮಕ ಮತ್ತು ಉದ್ಯಮಶೀಲತಾ ಮನೋಭಾವದ ಜತೆಗೆ ಸಮಗ್ರವಾದ ಬೆಳವಣಿಗೆಗೆ ಅವಕಾಶ ಇರುವ ಕಂಪನಿಗಳಲ್ಲಿ ಬಂಡವಾಳ ತೊಡಗಿಸುವುದು ಈ ಸಂಸ್ಥೆಯ ವಿಶೇಷತೆಯಾಗಿದೆ.
ಗಿಟಾರ್​ ನುಡಿಸಿ ರೈಲು ಪ್ರಯಾಣಿಕರನ್ನು ರಂಜಿಸಿದ ಕರೊನಾ ಸೇನಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 12 =
Remember me
