ದಿಟ್ಟ ಹೋರಾಟ, ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಜಾರ್ಜ್​ ಫರ್ನಾಂಡಿಸ್​ ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ನಾಯಕರಲ್ಲಿ ಒಬ್ಬರು. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ರೈಲ್ವೆ ಮುಂತಾದ ರಂಗಗಳ ಬೆಳವಣಿಗೆ ಬಗ್ಗೆ ಅವರು ಮುನ್ನೋಟ ಹೊಂದಿದ್ದರು. ಅವರು ಲೋಹಿಯಾರ ಸೂತ್ರಗಳನ್ನು ಪರಿಣಾಮಕಾರಿಯಾಗಿ ಆಚರಣೆಯಲ್ಲಿ ತಂದರು.| ಅನಿಲ್​ ಹೆಗ್ಡೆಶೋಷಣೆರಹಿತ ಸಮಾಜ ಸ್ಥಾಪಿಸಲು ಗುದ್ದಲಿ, ಜೆಲು ಮತ್ತು ಮತಪತ್ರ& ಇವು ಲೋಹಿಯಾರ ಸೂತ್ರಗಳಾಗಿದ್ದವು. ಈ ಮೂರನ್ನೂ ಜಾರ್ಜ್​ ರ್ನಾಂಡಿಸ್​ ಪರಿಣಾಮಕಾರಿಯಾಗಿ ಆಚರಣೆಯಲ್ಲಿ ತಂದವರು. ಗುದ್ದಲಿ& ರಚನಾತ್ಮಕ ಕಾರ್ಯಕ್ರಮವನ್ನೂ, ಜೆಲು& ಹೋರಾಟವನ್ನೂ, ಮತಪತ್ರ& ಸಂಸದೀಯ ಲೋಕತಂತ್ರವನ್ನೂ ಸಂಕೇತಿಸುತ್ತದೆ.
ರಚನಾತ್ಮಕ ಕಾರ್ಯಕ್ರಮ:ಬಡವರಿಗೆ ಜೀವನೋಪಾಯಕ್ಕಾಗಿ ಬ್ಯಾಂಕ್​ಗಳಿಂದ ಸಾಲ ಪಡೆಯಲು ಆಗುವ ತೊಂದರೆ ಮನಗಂಡ ಜಾರ್ಜ್​ 1968ರಲ್ಲಿ “ಜರ್ಮನ್​ ಲೇಬರ್​ ಬ್ಯಾಂಕ್​’ ಮಾದರಿಯಲ್ಲಿ ಬಾಂಬೆ ಲೇಬರ್​ ಕೋ&ಆಪರೇಟಿವ್​ ಬ್ಯಾಂಕ್​ ಸ್ಥಾಪಿಸಿ 50 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು, ಟ್ಯಾಕ್ಸಿ ಮಾಲೀಕರಾಗಲು ನೆರವಾದರು.
ಜೈಲು:ಪ್ರಜಾಪ್ರಭುತ್ವ, ಮಾನವಾಧಿಕಾರ, ಸ್ವದೇಶಿಪರ, ವಸಾಹತುಶಾಹಿ, ಅಸಮಾನತೆ, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಶೋಷಣೆ ಮತ್ತು ಅನ್ಯಾಯದ ವಿರುದ್ಧದ ಹೋರಾಟಗಳಲ್ಲಿ ಜಾರ್ಜ್​ ಐದೂವರೆ ವರ್ಷ ಸೆರೆವಾಸ ಅನುಭವಿಸಿದ್ದರು. 27ನೇ ವಯಸ್ಸಿನಲ್ಲಿಯೇ ಕಾರ್ಮಿಕರ ಹಕ್ಕಿಗಾಗಿ ನಡೆದ ಮುಷ್ಕರಕ್ಕೆ ವಿಸ್ತತ ಜನಬೆಂಬಲಗಳಿಸಲು ಯಶಸ್ವಿ “ಬಾಂಬೆ ಬಂದ್​’ ಮಾಡಿದರು.1974ರಲ್ಲಿ ಅವರ ನೇತತ್ವದಲ್ಲಿ ನಡೆದ ಐತಿಹಾಸಿಕ ರೆಲು ಮುಷ್ಕರ ಜಗತ್ತಿನಲ್ಲಿ ಅತಿದೊಡ್ಡ ಮುಷ್ಕರವಾಗಿದ್ದು, ಜಾರ್ಜ್​ರನ್ನು ಅಂತಾರಾಷ್ಟ್ರೀಯ ಮಟ್ಟದ ನಾಯಕನನ್ನಾಗಿಸಿತು.
ತುರ್ತುಪರಿಸ್ಥಿತಿಯಲ್ಲಿ ಸೋಷಲಿಸ್ಟ್​ ಪಾರ್ಟಿಯ ಅಧ್ಯರಾಗಿ ಬಂಧನಕ್ಕೊಳಗಾಗುವ ತನಕ 11 ತಿಂಗಳು ಭೂಗತರಾಗಿದ್ದು ದೇಶದಾದ್ಯಂತ ಕ್ರಾಂತಿಕಾರಿ ಹೋರಾಟ ನಡೆಸಿದರು. ಕಲ್ಕತ್ತಾದಲ್ಲಿ ಬಂಧನಕೊಳಗಾದಾಗ ಅಂದಿನ ಬ್ರಿಟನ್​ ಪ್ರಧಾನಿ ಜೇಮ್ಸ್​ ಕೆಲಗನ್​, ಜರ್ಮನ್​ ಚಾನ್ಸಲರ್​ ವಿಲಿ ಬ್ರಾಂಟ್​, ಆಸ್ಟ್ರಿಯಾದ ಚಾನ್ಸಲರ್​ ಬ್ರುನೋ ಕ್ರೆಸ್ಕಿ, ಸ್ವೀಡನ್​ ಪ್ರಧಾನಿ ಓಲ್​ೋ ಪಾಮೆ, ನೆದರ್ಲ್ಯಾಂಡ್​ ಪ್ರಧಾನಿ ಜೂಪ್​ ಡೆನ್​ ಉಯಿಲ್​, ಮಾಸ್ಕೋ ಯಾತ್ರೆಯಲ್ಲಿದ್ದ ಇಂದಿರಾ ಗಾಂಧಿಯವರನ್ನು ಸಂಪರ್ಕಿಸಿ “ಜಾರ್ಜ್​ ಜೀವಕ್ಕೆ ಹಾನಿಯುಂಟಾದರೆ, ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧ ಕೊನೆಗೊಳ್ಳುವುದು’ ಎಂದು ಎಚ್ಚರಿಸಿದರು. ರಾಜದ್ರೋಹದ ಆರೋಪದ ಮೇಲೆ ಬರೋಡ ಡೆನಮೆಟ್​ ಮೊಕದ್ದಮೆ ಎದುರಿಸುತ್ತಿದ್ದ ಜಾರ್ಜ್​ ಜೆಲಿನಿಂದಲೇ 1977ರ ಚುನಾವಣೆ ಸ್ಪರ್ಧಿಸಿ ಮುಜರ್​ಪುರ್​ ದಿಂದ ಜಯಗಳಿಸಿದ್ದರು.
ಕಾರ್ಗಿಲ್​ ವಿರುದ್ಧ ಸತ್ಯಾಗ್ರಹ:1993ರ ೆಬ್ರವರಿಯಲ್ಲಿ ಗುಜರಾತಿನ ಕಾಂಡ್ಲಾದಲ್ಲಿ ಅಮೆರಿಕದ ಕಾರ್ಗಿಲ್​ ಕಂಪನಿಗೆ ಉಪು$್ಪ ತಯಾರಿಸಲು ಕೇಂದ್ರ ಸರ್ಕಾರ 15 ಸಾವಿರ ಎಕರೆ ಜಮೀನು ನೀಡುವುದನ್ನು ವಿರೋಧಿಸಿ ಜಾರ್ಜ್​ ಅಲ್ಲಿಯೇ ಸತ್ಯಾಗ್ರಹ ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಚಂದ್ರಶೇಖರ್​, ವಿ.ಪಿ. ಸಿಂಗ್​, ರಬಿ ರೇ, ಮಧು ದಂಡವತೆ, ಮಣಾಲ್​ ಗೋರೆ, ಸುರೇಂದ್ರ ಮೋಹನ್​ ಪ್ರಮುಖರಾಗಿದ್ದರು. ಬಳ್ಳಾರಿಯಲ್ಲಿ ಇದೇ ಕಾರ್ಗಿಲ್​ ಕಂಪನಿಯ ಕುಲಾಂತರಿ ಬೀಜದ ಗೋದಾಮಿನ ಮೇಲೆ ನಂಜುಂಡಸ್ವಾಮಿಯವರ(ಎಂಡಿಎನ್​) ನೇತತ್ವದಲ್ಲಿ ರೆತಸಂ ದಾಳಿ ನಡೆಸಿತು. ಇದನ್ನು ಸಮರ್ಥಿಸಿ ಬೆಂಗಳೂರಿನಲ್ಲಿ 2 ಆಗಸ್ಟ್​ 1993 ರಂದು ಜಾರ್ಜ್​ ಸಭೆ ನಡೆಸಿದರು. ಪ್ರತಿಯಾಗಿ, ಕಾಂಡ್ಲಾ ಹೋರಾಟಕ್ಕೆ ಎಂಡಿಎನ್​ ಬೆಂಬಲ ೂಷಿಸಿದರು. ಗಾಂಧಿನಗರ ಉಚ್ಚ ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಪಟ್ಟ ಕೇಸಿನಲ್ಲಿ ವಕೀಲರನ್ನು ಇಟ್ಟುಕೊಳ್ಳದೆ ಜಾರ್ಜ್​ ಸ್ವತ@ ತಾವೇ ವಾದಿಸಿದರು. ಕಾರ್ಗಿಲ್​ ಕಂಪನಿ ಉಪ್ಪಿನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. 4 ತಿಂಗಳ ಹೋರಾಟಕ್ಕೆ ಐತಿಹಾಸಿಕ ಜಯ ದೊರಕಿತು. 1994ರ 15 ಏಪ್ರಿಲ್​ರಂದು ಎಅಖಖ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕುವುದಿತ್ತು. ಇದರ ವಿರುದ್ಧ 1994ರ ಮಾರ್ಚ್​ 1ರಂದು ಜಾರ್ಜ್​ ಸಂಸತ್ತಿನ ಮುಂದೆ ಅರ್ನಿದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಿದರು. ಸತ್ಯಾಗ್ರಹದ ದಿನಗಳಲ್ಲಿ ನಿತ್ಯವೂ ಒಬ್ಬೊಬ್ಬ ಸಂಸತ್​ ಸದಸ್ಯ ನೇತತ್ವ ವಹಿಸುತ್ತಿದ್ದರು. 2008ರವರೆಗೆ 14 ವರ್ಷ ಪ್ರತಿದಿನವೂ ಸಂಸತ್​ ಮಾರ್ಗ&ಜಂತರ್​ ಮಂತರ್​ನ ಅಕ್ಕಪಕ್ಕದಲ್ಲಿದ್ದ ಅಂಗಡಿಗಳಿಗೆ ಪೆಪ್ಸಿ&ಕೊಕೊಕೋಲಾ ವಾಹನಗಳು ತಮ್ಮ ಸಾಮಗ್ರಿ ತಲುಪಿಸಲು ಇವರು ಬಿಡುತ್ತಿರಲಿಲ್ಲ.
ಸಂಸದೀಯ ಲೋಕತಂತ್ರ:ಜಾರ್ಜ್​ 9 ಸಲ ಲೋಕಸಭೆ ಮತ್ತು ಒಮ್ಮೆ ರಾಜ್ಯಸಭೆ ಸದಸ್ಯರಾಗಿದ್ದರು. ನಿರುದ್ಯೋಗದ ಕಾರಣ ಪಟ್ಟಣದ ಕಡೆ ಜನ ಗುಳೆ ಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಾರ್ಜ್​, ಗ್ರಾಮಗಳಲ್ಲೇ ಹೆಚ್ಚು ಉದ್ಯೋಗ ಸಷ್ಟಿಸುವ, ದೇಶದಾದ್ಯಂತ ಏಕರೂಪದ ವಿಕೇಂದ್ರೀಕತ ಬೆಳವಣಿಗೆಗಾಗಿ, ಗಾಂಧಿಜಿಯವರ “ಸ್ವದೇಶಿ’ ಮತ್ತು ಲೋಹಿಯಾರ “ಸೂಕ್ತ ತಂತ್ರಜ್ಞಾನ’ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನತಾ ಸರ್ಕಾರದ 1977ರ ಕೆಗಾರಿಕಾ ನೀತಿ ಜಾರಿಗೊಳಿಸಿದರು. ಇದರ ಅಂಗವಾಗಿ ಜಿಲ್ಲಾ ಕೆಗಾರಿಕಾ ಕೇಂದ್ರ (ಆಋಅ) ಸ್ಥಾಪಿಸಿ ಸಣ್ಣ ಮತ್ತು ಗುಡಿಕೆಗಾರಿಕೆಗಳನ್ನು ಪ್ರೋತ್ಸಾಹಿಸಿದರು. ದೇಶೀ ಉದ್ಯಮಗಳು ವಿದೇಶಿ ಕಂಪನಿಗಳಿಗೆ ಸ್ಪರ್ಧೆ ನೀಡಲು ಸಮರ್ಥವಾಗುವಂತೆ ಸಂರಣೆ ನೀಡುವುದು, ದೇಶವನ್ನು ಆತ್ಮನಿರ್ಭರವನ್ನಾಗಿ ಮಾಡುವುದು ಅವರ ಪ್ರಾಥಮಿಕತೆಯಾಗಿತ್ತು. ಇದಕ್ಕಾಗಿ ಕೋಕೋಕೋಲಾ ಮತ್ತು ಐಬಿಎಂ ಅನ್ನು ಹೊರಗಟ್ಟಿದರು. ಇದರಿಂದ ಹೊಸ ತಂಪುಪಾನೀಯಗಳ ಕಂಪನಿಗಳು ಮಾರುಕಟ್ಟೆಗೆ ಬಂದವು.
ಐಬಿಎಂ ಹೊರಗಟ್ಟಿದ್ದರಿಂದ ತಮ್ಮದೇ ಕಂಪನಿ ಪ್ರಾರಂಭಿಸಲು ಯುವ ಇಂಜಿನಿಯರ್​ಗಳಿಗೆ ಹೊಸ ಅವಕಾಶಗಳು ತೆರೆದವು. ಆಗಲೇ ಅಸ್ತಿತ್ವದಲ್ಲಿದ್ದ ಟಿಸಿಎಸ್​, ಎಚ್​ಸಿಎಲ್​ ಮತ್ತು ಪಟನಿ ಕಂಪ್ಯೂರ್ಟಸ್​ ಕಂಪನಿಗಳಿಗೆ ಇದರಿಂದ ನೇರ ಲಾಭವಾಯಿತು. ಪಟನಿ ಕಂಪ್ಯೂಟರಿನಲ್ಲಿದ್ದ ಎನ್​.ಆರ್​. ನಾರಾಯಣಮೂರ್ತಿ, ನಂದನ್​ ನಿಲೇಕಣಿ ಇನ್ಫೋಸಿಸ್​ ಪ್ರಾರಂಭಿಸಿದರು. ವನಸ್ಪತಿ ವೆಜಿಟೆಬಲ್​ ಆಯಿಲ್​ ವ್ಯಾಪಾರದಲ್ಲಿದ್ದ ಅಜೀಮ್​ ಪ್ರೇಮ್​ಜೀಯವರ ವಿಪ್ರೋ ಕಂಪ್ಯೂಟರ್​ ೇತ್ರಕ್ಕೆ ಪದಾರ್ಪಣೆ ಮಾಡಿತು. ಜಾರ್ಜ್​ ನೀತಿಯ ಅವಕಾಶ ಸದುಪಯೋಗ ಪಡಿಸಿಕೊಂಡ ಪ್ರಾರಂಭದ ದಿನಗಳ ಕಂಪನಿಗಳಾದ ಟಿಸಿಎಸ್​, ಇನ್ಫೋಸಿಸ್​, ವಿಪ್ರೋ ಮತ್ತು ಎಚ್​ಸಿಎಲ್​ ಇಂದು ಜಗತ್ತಿನಲ್ಲಿ ಕ್ರಮವಾಗಿ 3,4,7 ಮತ್ತು 9ನೇ ಸ್ಥಾನದಲ್ಲಿವೆ.
1989ರಲ್ಲಿ ಜಾರ್ಜ್​ ರೆಲು ಮಂತ್ರಿಯಾಗಿ ಕೊಂಕಣ ರೆಲ್ವೆ ನಿಗಮ ಸ್ಥಾಪಿಸಿ, ದ ಅಧಿಕಾರಿ ಇ. ಶ್ರೀಧರನ್​ರಿಗೆ ಎಲ್ಲಾ ಪ್ರೋತ್ಸಾಹ ನೀಡಿ ಸರ್ಕಾರದ ಹಣದ ಜೊತೆಗೆ ಲಾನುಭವಿಗಳಿಂದ ಬಾಂಡ್​ ಮೂಲಕ ಹಣ ಸಂಗ್ರಹಿಸಿ ಒಮ್ಮೆಲೇ 32 ಕಡೆ ಕೆಲಸ ಪ್ರಾರಂಭಿಸಿ, 100 ವರ್ಷಗಳಿಂದ ಕರಾವಳಿ ಜನ ಕಾಣುತ್ತಿದ್ದ ಕನಸನ್ನು ನನಸಾಗಿಸಿದರು. ವಾಜಪೇಯಿ ಸರ್ಕಾರದಲ್ಲಿ ರಣಾ ಸಚಿವರಾಗಿ ದೇಶದ ಎಲ್ಲಾ ಗಡಿ ಪ್ರದೇಶಕ್ಕೆ ಹೋಗುತ್ತಿದ್ದ ಜಾರ್ಜ್​ ಮೆನಸ್​ 45 ಡಿಗ್ರಿ ಇರುವ ಸಿಯಾಚಿನ್​ಗೆ 38 ಬಾರಿ ಹೋಗಿ ಯೋಧರನ್ನು ಹುರಿದುಂಬಿಸಿದ್ದರು. 1999ರ ಕಾರ್ಗಿಲ್​ ಯುದ್ಧದ ವೇಳೆ ಜೀವದ ಅಪಾಯ ನೋಡದೆ ಸೆನಿಕರನ್ನು ಹುರಿದುಂಬಿಸಲು ಯುದ್ಧಭೂಮಿಗೆ ಹೋಗಿದ್ದರು.
(ಲೇಖಕರು ಜಾರ್ಜ್​ ರ್ನಾಂಡಿಸ್​ ಆಪ್ತ, ಜೆಡಿಯು ರಾಷ್ಟ್ರೀಯ ಚುನಾವಣಾ ಅಧಿಕಾರಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
