ನವದೆಹಲಿ:ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ತಮ್ಮ ಎರಡು ದಿನಗಳ ಭಾರತ ಪ್ರವಾಸದ ವೇಳೆ ದೆಹಲಿಯ ಹಳೆಯ ಬೀದಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಭಾರತದಲ್ಲಿ ಸುತ್ತಾಟ ನಡೆಸಿ ಶಾಪಿಂಗ್ ಮಾಡಿದ ಸಚಿವೆಯ ಫೋಟೋವನ್ನು ಭಾರತ-ಭೂತಾನ್ ದೇಶಕ್ಕೆ ಜರ್ಮನಿಯ ರಾಯಭಾರಿಯಾಗಿರುವ ಫಿಲಿಪ್ ಅಕರ್‌ಮನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಚಾಂದಿನಿ ಚೌಕ್​ನ ಬೀದಿಗಳಲ್ಲಿ ಸುತ್ತಾಟ ನಡೆಸಿ, ಭಾರತೀಯ ಸಾಂಪ್ರದಾಯಿಕ ಉಡುಪನ್ನು ಖರೀದಿಸಿದ್ದಾರೆ. ಖರೀದಿಯ ನಂತರ ನಗದು ಹಣ ನೀಡದೆ, ಡಿಜಿಟಲ್ ಪಾವತಿಗೆ ಮುಂದಾಗಿ ಪೇಟಿಎಂ (Paytm) ಮೂಲಕ ಅಂಗಡಿಯಾತನಿಗೆ ಹಣ ನೀಡಿದ್ದಾರೆ.
Packed & productive – a super exciting Day 1 of Minister@ABaerbockdraws to a close.Great talks with@DrSJaishankar, an enriching visit to Sis Ganj Gurudwara followed by shopping with Shashi Bansal in Chandni Chowk and using Paytm to pay!pic.twitter.com/dMk9ZPAx4R— Dr Philipp Ackermann (@AmbAckermann)December 5, 2022
Packed & productive – a super exciting Day 1 of Minister@ABaerbockdraws to a close.Great talks with@DrSJaishankar, an enriching visit to Sis Ganj Gurudwara followed by shopping with Shashi Bansal in Chandni Chowk and using Paytm to pay!pic.twitter.com/dMk9ZPAx4R
ಭಾರತ ದೇಶದ ಪ್ರವಾಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್, ನನಗೆ ಭಾರತಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಯಾರೋ ದೂರದ ಆಪ್ತ ಸ್ನೇಹಿತೆ ನಮ್ಮ ದೇಶಕ್ಕೆ ಬಂದಿದ್ದಾರೆ ಎಂಬಂತೆ ನನ್ನನ್ನು ಭಾರತೀಯರು ಸತ್ಕರಿಸಿದ್ದಾರೆ ಎಂದು ಸ್ಮರಿಸಿಕೊಂಡಿದ್ದಾರೆ.
ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಡಿಸೆಂಬರ್ 5 ರಂದು ದೆಹಲಿಗೆ ಆಗಮಿಸಿದ್ದರು. ಈ ವೇಳೆ ರಾಷ್ಟ್ರ ರಾಜಧಾನಿಯ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ. ನಂತರ ದೆಹಲಿ ಮೆಟ್ರೋದಲ್ಲಿ ಸವಾರಿ ಮಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nine =
Remember me
