ಬೆಂಗಳೂರು:ನಗರದ ಮಡಿವಾಳ ಮಾರುಕಟ್ಟೆಯಲ್ಲಿ ಜರ್ಮನಿಯ ಸಚಿವರೊಬ್ಬರು ಮೆಣಸಿನಕಾಯಿ ಖರೀದಿ ಮಾಡಿ, ಯುಪಿಐ ಮೂಲಕ ಪಾವತಿ ಮಾಡಿರುವುದು ಗಮನ ಸೆಳೆದಿದೆ. ಈ ಬಗ್ಗೆ ಭಾರತದಲ್ಲಿರುವ ಜರ್ಮನಿ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ.
ಜರ್ಮನಿಯ ಡಿಜಿಟಲ್‌ ಮತ್ತು ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ ಅವರು ಮಡಿವಾಳ ಮಾರುಕಟ್ಟೆಯಲ್ಲಿ 1 ಕೆಜಿ ಮೆಣಸಿನಕಾಯಿ ಖರೀದಿ ಮಾಡಿ, ವ್ಯಾಪರಸ್ಥನಿಗೆ ಯುಪಿಐ ಮೂಲಕ ಹಣ ಪಾವತಿ ಮಾಡಿದರು.
ಜರ್ಮನಿ ರಾಯಭಾರ ಕಚೇರಿ ಎಕ್ಷ್​ (ಟ್ವಿಟರ್​) ನಲ್ಲಿ ಸಚಿವರು ಮೆಣಸಿನಕಾಯಿ ಖರೀದಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಮೂಲಸೌಕರ್ಯ. ಯುಪಿಐ ಮೂಲಕ ಸೆಕೆಂಡ್‌ಗಳಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ ಯುಪಿಐ ಪಾವತಿಗಳ ಸರಳತೆಯನ್ನು ತಮ್ಮ ಕೈನಿಂದಲೇ ಅನುಭವಿಸಿದ್ದಾರೆ ಮತ್ತು ಇದು ಬಹಳ ಆಕರ್ಷಿತವಾಗಿದೆ ಎಂದು ಎಕ್ಷ್​ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ತಂದೆ, ಪತ್ನಿ, ಪುತ್ರನನ್ನು ಕೊಂದು ಸಾವಿಗೆ ಶರಣು: ಪ್ರಾಣ ಬಿಡೋ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಟೆಕ್ಕಿ
One of India’s success story is digital infrastructure. UPI enables everybody to make transactions in seconds. Millions of Indians use it. Federal Minister for Digital and Transport@Wissingwas able to experience the simplicity of UPI payments first hand and is very fascinated!pic.twitter.com/I57P8snF0C
— German Embassy India (@GermanyinIndia)August 20, 2023

ಅಂದಹಾಗೆ ವೋಲ್ಕರ್‌ ವಿಸ್ಸಿಂಗ್ ಅವರು ಸಭೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಅಡ್ಡಾಡಿ, ವ್ಯಾಪಾರ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸಿದರು. ಬಳಿಕ ತಾವೇ ಮೆಣಸಿನಕಾಯಿ ಖರೀದಿ ಮಾಡಿದರು.
ಭಾರತದ UPI ವ್ಯವಸ್ಥೆ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್​ನಲ್ಲಿ ನಿರ್ವಹಹಿಸುವ ಅಧಿಕಾರವನ್ನು ನೀಡುತ್ತದೆ. ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳು ಯುಪಿಐನಲ್ಲಿ ವಿಲೀನಗೊಂಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) 2016ರ ಏಪ್ರಿಲ್ 21ರಂದು ತನ್ನ ಸದಸ್ಯ ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕವಾಗಿ ಯುಪಿಐ ಅನ್ನು ಜಾರಿಗೆ ತಂದಿತು. ಅಂದಿನಿಂದ UPI ಬಳಕೆಯು ಅದ್ಭುತ ಬೆಳವಣಿಗೆಯನ್ನು ಕಂಡಿದೆ.
ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
