ಜೈಪುರ:ರಾಜಸ್ಥಾನದ ವ್ಯಕ್ತಿಯೊರ್ವ ಸರ್ಕಾರಿ ಅಧಿಕಾರಿಗೆ ಪತ್ರದ ಬರೆಯುವ ಮೂಲಕ ವಿಚಿತ್ರ ಬೇಡಿಕೆ ಇಡುವುದರೊಂದಿಗೆ ಎಲ್ಲರ ಗಮನ ಸೆಳೆದಿದ್ದಾನೆ. ಈ ಘಟನೆ ಜೂನ್​ 3ರಂದು ದೌಸಾ ಜಿಲ್ಲೆಯ ಬಹರವಾಂಡ ಬ್ಲಾಕ್​ನ ಇನ್​ಫ್ಲೇಶನ್​ ರಿಲೀಫ್​ ಕ್ಯಾಂಪ್​ನಲ್ಲಿ ನಡೆದಿದ್ದು, ವ್ಯಕ್ತಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕಲ್ಲು ಮಾಹ್ವಾರ್​ (40) ಪತ್ರ ಬರೆದ ವ್ಯಕ್ತಿ. ಈತ ಸಿಕ್ರಿ ಉಪವಿಭಾಗದ ಗಂಗಡವಾಡಿ ಗ್ರಾಮದ ನಿವಾಸಿ. ನಾನು ಏಕಾಂಗಿಯಾಗಿದ್ದು, ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಕಷ್ಟಪಡುತ್ತಿದ್ದೇನೆ. ಹೀಗಾಗಿ ನನಗೊಂದು ಹೆಣ್ಣು ಕೊಡಿಸಿ ಎಂದು ತಮ್ಮ ತಾಲೂಕಿನ ತಹಸೀಲ್ದಾರ್​ ಹರಿಕಿಶನ್​ ಸೈನಿ ಎಂಬುವರಿಗೆ ಪತ್ರ ಬರೆದಿದ್ದಾರೆ. ಇದೀಗ ಆ ಪತ್ರವನ್ನು ಸರ್ಕಾರಕ್ಕೆ ರವಾನಿಸಿದ್ದು, ಪತ್ರ ಬರೆದ ವ್ಯಕ್ತಿಗೆ ಸೂಕ್ತ ಹೆಂಡತಿಯನ್ನು ಹುಡುಕಿಕೊಡಲು ಒಂದು ತಂಡವನ್ನು ರಚಿಸುವಂತೆ ಒತ್ತಾಯ ಮಾಡಿದ್ದಾರೆ.
ಪತ್ನಿಗೆ ಮಾನದಂಡಗಳುಕಲ್ಲು ಮಾಹ್ವಾರ್ ಅವರು ತಾವು ಬಯಸಿದ ಹೆಂಡತಿಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದಾರೆ. ಅದರಲ್ಲಿ ಸ್ಲಿಮ್, ಫೇರ್ ಹಾಗೂ 30 ರಿಂದ 40 ರ ನಡುವಿನ ವಯಸ್ಸಿನವರು ಆಗಿರಬೇಕು ಎಂದಿದ್ದಾರೆ. ಅಲ್ಲದೆ, ಮನೆಗೆಲಸಗಳಲ್ಲಿ ನೈಪುಣ್ಯತೆ ಇರಬೇಕೆಂದು ಎಂದು ಬೇಡಿಕೆ ಇಟ್ಟಿದ್ದಾರೆ. ಇದೀಗ ಆತ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಆದರೆ, ಈ ರೀತಿಯ ಪತ್ರದಿಂದ ಹಿಂದೆ ಕೆಲವು ಕಿಡಿಗೇಡಿಗಳು ಇದ್ದಾರೆ ಎಂದು ತಹಸೀಲ್ದಾರ್ ಹರಿಕಿಶನ್​ ಸೈನಿ ಆರೋಪಿಸಿದ್ದಾರೆ. ಸದ್ಯಕ್ಕೆ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಮುಂದೆ ಮುಂದುವರಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಈ ಪತ್ರವನ್ನು ಸೋಮವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ನೆಟಿಜನ್‌ಗಳ ಕಣ್ಣುಗಳನ್ನು ಸೆಳೆದಿದೆ. 22,000 ಕ್ಕೂ ಹೆಚ್ಚು ಜನರು ಟ್ವೀಟ್ ಅನ್ನು ವೀಕ್ಷಿಸಿದ್ದಾರೆ ಮತ್ತು ನೂರಾರು ಜನರು ಲೈಕ್​ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಟ್ವಿಟರ್ ಬಳಕೆದಾರರು ವ್ಯಕ್ತಿಯ ಬೇಡಿಕೆಯನ್ನು ನೋಡಿ ಹುಬ್ಬೇರಿಸಿದ್ದು, ತಮ್ಮದೇ ಶೈಲಿಯಲ್ಲಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಸ್ಟೋರಿ ಓದಿದ ಮೇಲೆ ನಿಮಗೆ ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
https://www.vijayavani.net/minor-andhra-girl-calls-helpline-gets-child-marriage-cancelled
OctoberBaby ಎಂದು ಬರೆದುಕೊಂಡ ಸ್ವರಾ ಭಾಸ್ಕರ್; ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ

ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಕ್ರಿಸ್​ಮಸ್​ ಮರದಲ್ಲಿ ಅಡಗಿರುವ ಬೆಕ್ಕನ್ನು ಗುರುತಿಸಬಲ್ಲರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
