ಪಣಜಿ:ಕೇರಳದ ಪ್ರವಾಸಿಗರ ಮೇಲೆ ಪಾನಮತ್ತ ಜೋಡಿಯೊಂದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಗೋವಾದ ಪೊರ್ವೊರಿಮ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಈ ಘಟನೆ ಭಾನುವಾರ ರಾತ್ರಿ 11 ಗಂಟೆಗೆ ಪೊರ್ವೊರಿಮ್​ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಜೋಡಿ ರೆಸ್ಟೋರೆಂಟ್​ ಕ್ಯಾಷಿಯರ್​ನನ್ನು ನಿಂದಿಸಿ, ಅವನ ಮೇಲೆ ಕೈ ಮಾಡುತ್ತಾರೆ. ಆದರೆ, ಇದನ್ನು ಪ್ರಶ್ನಿಸಲಾಗದೇ ಕ್ಯಾಷಿಯರ್,​ ಅವರನ್ನು ಸಮಾಧಾನಿಸಲು ಮುಂದಾಗುತ್ತಾರೆ. ಆದರೆ, ಯುವತಿ ಕ್ಯಾಷಿಯರ್​ ಮೇಲೆ ಹಲ್ಲೆ ಮಾಡುತ್ತಾಳೆ.
ಇದನ್ನೂ ಓದಿ:ಆಪರೇಷನ್ ನಂತರ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯರು: ಬಾಣಂತಿ ಸಾವು, ತಾಯಿ ಪ್ರೀತಿ ಕಾಣದೇ ಮಗು ಅನಾಥ..
ಇದೇ ಸಮಯದಲ್ಲಿ ಅಲ್ಲಿದ್ದ ಕೇರಳಿಗರ ಗುಂಪೊಂದು, ಸುಮ್ಮನೇ ನೋಡುತ್ತಾ ನಿಂತುಕೊಳ್ಳುವುದು ಬೇಡ, ಹೇಗಾದರೂ ಮಾಡಿ ಜಗಳ ಬಿಡಿಸಬೇಕು ಅಂದುಕೊಂಡು ಮಧ್ಯ ಪ್ರವೇಶ ಮಾಡುತ್ತಾರೆ. ಕ್ಯಾಷಿಯರ್​ ಮೇಲೆ ಹಲ್ಲೆ ಮಾಡುವುದು ತಡೆಯಲು ಯತ್ನಿಸುತ್ತಾರೆ. ಆದರೆ, ಮದ್ಯದ ಅಮಲಿನಲ್ಲಿದ್ದ ಜೋಡಿ ಕೇರಳಿಗರ ಮೇಲೆಯೇ ಹಲ್ಲೆ ಮಾಡಲು ಯತ್ನಿಸುತ್ತಾರೆ. ಅದರಲ್ಲೂ ಯುವತಿಯೇ ಹೆಚ್ಚಾಗಿ ಕೂಗಾಡಿ, ಮನಬಂದಂತೆ ನಿಂದಿಸಿ, ಹಲ್ಲೆ ಮಾಡುತ್ತಾಳೆ.
ರೆಸ್ಟೋರೆಂಟ್​ ಸಿಬ್ಬಂದಿ ಮೇಲೆಯೂ ಆ ಜೋಡಿ ಮನಬಂದಂತೆ ನಿಂದಿಸುತ್ತಾರೆ. ಕೊನೆಗೂ ಎರಡು ಗುಂಪಿನ ನಡುವೆ ಒಂದು ದೊಡ್ಡ ಜಗಳವೇ ಶುರುವಾಗುತ್ತದೆ. ಇದೀಗ ಕೇರಳದ ಶ್ಯಾಮ್​ ಕೃಷ್ಣ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ವಿವರವಾಗಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಗೋವಾದ ಎಸ್​ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
#WATCH| Goa | A man & a woman abused and assaulted a cashier at a restaurant in Porvorim. When the complainant tried to save the cashier, the accused person abused the complainant and his friends. Further investigation is in progress: North Goa SP Nidhin Valsan.
(Note: Abusive…pic.twitter.com/LY0NnogTJu
— ANI (@ANI)August 23, 2023

ಗಲಾಟೆಯ ನಂತರವೂ ಮದ್ಯದ ಅಮಲಿನಲ್ಲಿದ್ದ ಜೋಡಿ, ಶ್ಯಾಮ್​ ಕೃಷ್ಣ ಮತ್ತು ಅವರ ಸ್ನೇಹಿತರಿಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ. ಇದು ನನ್ನ ಗೋವಾ ಇಲ್ಲಿಂದ ತೊಲಗಿ ಎಂದು ಯುವತಿ ಕೂಗಾಡಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಾನಮತ್ತ ಜೋಡಿಯ ವರ್ತನೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.(ಏಜೆನ್ಸೀಸ್​)
ವಿಶ್ವದಲ್ಲಿರುವ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದ ಹಿಂದೆ ಬಿದ್ದಿರುವುದೇಕೆ? ಇಲ್ಲಿದೆ ಕಾರಣ…

ಹೆಣ್ಣು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
