ನವದೆಹಲಿ: ಅತ್ತ ಉದ್ಯೋಗವೂ ಇಲ್ಲದೇ. ಇತ್ತ ಕೈಯಲ್ಲಿ ಹಣವೂ ಇಲ್ಲದ ಅತಂತ್ರಸ್ಥಿತಿಯಲ್ಲಿ ದ್ದವರು ತಮ್ಮೂರು ಸೇರಿದರೆ ಸಾಕೆಂಬ ಧಾವಂತದೊಂದಿಗೆ ಹೆದ್ದಾರಿಯಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಿದ್ದವರು. ದೇಶದ ಎಲ್ಲ ರಾಜ್ಯಗಳ ಗಡಿ ಪ್ರದೇಶದಲ್ಲಿ ಇಂಥವರು ಸಾವಿರಾರು ಸಂಖ್ಯೆಯಲ್ಲಿದ್ದರು. ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದ ಇನ್ನಷ್ಟು ಭೀತಿ ಇವರಲ್ಲಿ ಮನೆ ಮಾಡಿತ್ತು. ಅವರಿವರ ನೆರವಿನೊಂದಿಗೆ ಕೆಲವರು ಹೇಗೋ ಊರು ಸೇರಿದರೆ, ಇನ್ನುಳಿದವರಿಗೆ ಆ ಭಾಗ್ಯವಿರಲಿಲ್ಲ. ಅಂಥ 6 ಲಕ್ಷಕ್ಕೂ ಅಧೀಕ ಜನರಿಗೆ ಈಗ ಸೂರು, ಆಸರೆ ದೊರಕಿದೆ.
ದೇಶಾದ್ಯಂತ ಲಾಕ್​ಡೌನ್​ ಘೊಷಣೆಯಾಗಿ ಏಳು ದಿನಗಳೇ ಕಳೆದಿವೆ. ಕರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಚಾರದ ಮೇಲೆ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರು ಹೆದ್ದಾರಿಗುಂಟ ಸಾಗಿ ತಮ್ಮೂರುಗಳಿಗೆ ತೆರಳುವುದನ್ನು ನಿರ್ಬಂಧಿಸಿ ಕ್ವಾರಂಟೈನ್​ಗೆ ಒಳಪಡಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿತ್ತು. ಅದರಂತೆ ದೇಶದ 61 ಸಾವಿರ ಕ್ಯಾಂಪ್​ಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.
ವಲಸೆ ಕಾರ್ಮಿಕರಿಂದ ಕೋವಿಡ್​-19 ಹಬ್ಬುವ ಭೀತಿ: ಯಾವುದೇ ಸುರಕ್ಷತಾ ಕ್ರಮಗಳಲಿಲ್ಲದೇ ಹೆದ್ದಾರಿಗಳಲ್ಲಿ ಸಂಚರಿಸುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರಿಂದ ಕೋವಿಡ್​ ಹಬ್ಬುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇವರನ್ನೆಲ್ಲ ಗಡಿಭಾಗಗಳಲ್ಲಿ ತಡೆದು, 14 ದಿನಗಳವರೆಗೆ ತಪಾಸಣೆಗೆ ಒಳಪಡಿಸಬೇಕು. ಅವರಿಗೆ ಅಗತ್ಯವಾದ ವಸತಿ, ಊಟ ಹಾಗೂ ವೈದ್ಯಕೀಯ ಸೌಲಬ್ಯ ಒದಗಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿತ್ತು. ತಾವಿರುವ ಸ್ಥಳದಿಂದ ಬೇರೆಡೆ ತೆರಳದಂತೆ ಗಡಿ ರಸ್ತೆಗಳನ್ನು ಬಂದ್​ ಮಾಡಬೇಕೆಂದು ನಿರ್ದೇಶಿಸಲಾಗಿತ್ತು.
ಸಿಜೆಐ ಸೂಚನೆ: ವಲಸೆ ಕಾರ್ಮಿಕರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸುವುದಾದರೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು. ಪೊಲೀಸರ ಬದಲಿಗೆ ಸ್ವಯಂಸೇವಕರು ವಲಸೆ ಕಾರ್ಮಿಕರಿರುವ ಶಿಬಿರಗಳನ್ನು ನಿರ್ವಹಿಸಲಿ ಎಂದು ಸಲಹೆ ನೀಡಿದ್ದರು. ಏಕೆಂದರೆ ಅವರ ಮೇಲೆ ಬಲ ಪ್ರಯೋಗಿಸುವುದು ಬೇಡ ಎಂದು ತಿಳಿಸಿದ್ದರು.
ಬಹುತೇಕ ಎಲ್ಲ ರಾಜ್ಯಗಳ ಗಡಿಯಲ್ಲಿ ವಲಸೆ ಕಾರ್ಮಿಕರನ್ನು ತಡೆಯಲಾಗಿದ್ದು, ಸಮೀಪದ ಜಿಲ್ಲಾ ಕೇಂದ್ರಗಳಲ್ಲಿ ಅವರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಊಟ, ನೀರು ಇಲ್ಲದೇ ಸಂಚರಿಸುತ್ತಿದ್ದ ಕಾರ್ಮಿಕರಿಗೆ ಕೊಂಚ ಮಟ್ಟಿಗಿನ ನಿರಾಳತೆ ದೊರೆತಂತಾಗಿದೆ.
ಕರೊನಾ ಸೈಡ್​ ಎಫೆಕ್ಟ್​: ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರ ಸಂಬಳಕ್ಕೆ ಕುತ್ತು: ಶೇ.25 ರಿಂದ ಶೇ.60ರವರೆಗೆ ಕಡಿತ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × 1 =
Remember me
