ಅಯೋಧ್ಯೆ/ವಾರಾಣಸಿ:ಪ್ರತಿವರ್ಷ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾವಡ್​ ಯಾತ್ರೆ ಮತ್ತು ದೇವಸ್ಥಾನಗಳಿಗೆ ಭೇಟಿಕೊಟ್ಟು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವುದು ವಾಡಿಕೆ. ಆದರೆ, ಕೋವಿಡ್ 19 ಸೋಂಕಿನ ಕಾರಣಕ್ಕೆ ಈ ಬಾರಿ ಅದಕ್ಕೆಲ್ಲ ಅವಕಾಶವಿಲ್ಲ. ಆದ್ದರಿಂದ ಕಾಶಿ ವಿಶ್ವನಾಥ ದೇವಸ್ಥಾನದಲ್ಲೂ ಭಕ್ತರ ಅನುಕೂಲಕ್ಕಾಗಿ ಕೆಲವೊಂದು ಮಹತ್ವದ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ, ಶ್ರಾವಣ ಮಾಸದ ಪೂಜೆ ಸಲ್ಲಿಸುವುದಕ್ಕೆ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗದೇ ಇರುವ ಭಕ್ತರು ತಾವಿರುವಲ್ಲಿಂದಲೇ ದೇವರಿಗೆ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಬಹುದು. ಇದಕ್ಕಾಗಿ ದೇಗುಲದ ಆಡಳಿತ ಮಂಡಳಿಯ ನೆರವಿಗೆ ಅಂಚೆ ಇಲಾಖೆ ಮುಂದಾಗಿದೆ.ಸದ್ಯ ಇದು ಉತ್ತರ ಪ್ರದೇಶದ ಪೂರ್ವಭಾಗದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲ್ತಿಗೆ ಬರುತ್ತಿದೆ.ಉಳಿದ ಕಡೆಗಳ ಬೇಡಿಕೆ ನೋಡಿಕೊಂಡು ಸೇವೆಯನ್ನು ವಿಸ್ತರಿಸುವ ಚಿಂತನೆಯಲ್ಲಿದೆ ಅಂಚೆ ಇಲಾಖೆ.
ಇದನ್ನೂ ಓದಿ:ವಿಶ್ವಗುರು: ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!
ಕಾಶಿ ವಿಶ್ವನಾಥ ದೇವಸ್ತಾನ ಟ್ರಸ್ಟ್ ಮತ್ತು ಅಂಚೆ ಇಲಾಖೆ ನಡುವೆ ಶ್ರಾವಣ ಮಾಸದಲ್ಲಿ ಭಕ್ತರಿಗೆ ಪ್ರಸಾದ ತಲುಪಿಸುವ ಒಪ್ಪಂದ ಏರ್ಪಟ್ಟಿದೆ. ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.ಕೃಷ್ಣ ಕುಮಾರ್ ಯಾದವ್​,ಲಖನೌ ಸರ್ಕಲ್ ನಿರ್ದೇಶಕ, ಅಂಚೆ ಇಲಾಖೆ
ಈ ಪ್ರಸಾದ ಪಡೆಯುವುದಕ್ಕಾಗಿ ಭಕ್ತರು ಯಾವುದೇ ಅಂಚೆ ಕಚೇರಿಯಿಂದ ವಾರಾಣಸಿಯ ಪೂರ್ವ ವಿಭಾಗದ ಅಂಚೆ ಕಚೇರಿಗಳ ಸೀನಿಯರ್ ಸುಪರಿಂಟೆಂಡೆಂಟ್​ ಹೆಸರಿಗೆ ಇಲೆಕ್ಟ್ರಾನಿಕ್ ಮನಿ ಆರ್ಡರ್ (ಇಎಂಒ) ರೂಪದಲ್ಲಿ 251 ರೂಪಾಯಿಯನ್ನು ಕಳುಹಿಸಬೇಕು. ಇದಾಗಿ ಮೂರನೇ ದಿನಕ್ಕೆ ಸ್ಪೀಡ್ ಪೋಸ್ಟ್​ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಪ್ರಸಾದ ಸ್ಪೀಡ್ ಪೋಸ್ಟ್​ ಮೂಲಕ ಭಕ್ತರಿಗೆ ರವಾನೆಯಾಗುತ್ತದೆ ಎಂದು ಯಾದವ್ ತಿಳಿಸಿದ್ದಾರೆ.
ಪ್ರಸಾದದ ಕಟ್ಟಿನಲ್ಲಿ ಕಾಶಿ ವಿಶ್ವನಾಥ ದೇಗುಲದ ಜ್ಯೋತಿರ್ಲಿಂಗದ ಫೋಟೋ, ಮಹಾಮೃತ್ಯುಂಜಯ ಮಹಾಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ ಮಾಲೆ, ಡ್ರೈ ಫ್ರುಟ್ಸ್​, ವಿಭೂತಿ ಮತ್ತು ಸಿಹಿ ಪೊಟ್ಟಣವಿರುತ್ತದೆ. (ಏಜೆನ್ಸೀಸ್)
ಮನೋಲ್ಲಾಸ: ಧರ್ಮಕ್ಕೆ ಎಂದಿಗೂ ಜಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
