ಮುಂಬೈ:ಅಜಯ್ ದೇವಗನ್, ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಮತ್ತು ರಣವೀರ್ ಕಪೂರ್​ ನಟಿಸಿರುವ ಭಾರೀ ಬಜೆಟ್​ನ ಹಿಂದಿ ಚಿತ್ರ ‘ಸೂರ್ಯವಂಶಿ’ಯ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಒಂದು ವರ್ಷದ ಹಿಂದೆ ತೆರೆಕಾಣಬೇಕಿದ್ದ ಚಿತ್ರ, ಕರೊನಾ ಅಪ್ಪಳಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ. ಇದೀಗ “ದ ವೇಯ್ಟ್ ಈಸ್ ಫೈನಲಿ ಓವರ್​!” ಎನ್ನುತ್ತಾ ಚಿತ್ರದ ನಿರ್ಮಾಪಕ ಕರಣ್ ಜೋಹರ್ ‘ಸೂರ್ಯವಂಶಿ’ ಚಿತ್ರವು ಏಪ್ರಿಲ್ 30 ರಂದು ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ.
ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿಯವರ ಜನ್ಮದಿನವಾದ ಇಂದು (ಮಾರ್ಚ್ 14) ಸೂರ್ಯವಂಶಿ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಈ ಬಗ್ಗೆ ನಿರ್ಮಾಪಕ ಕರಣ್ ಜೋಹರ್​ಗೂ ಮುಂಚೆ ನಟ ಅಕ್ಷಯ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಚಿತ್ರದ ಕೆಲವು ದೃಶ್ಯಗಳನ್ನು ಒಳಗೊಂಡ ವಿಡಿಯೊ ತುಣುಕನ್ನು ಇಬ್ಬರೂ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ರಾಬರ್ಟ್​ ಪೈರಸಿ: ಸುದೀಪ್​-ದರ್ಶನ್​ ಫ್ಯಾನ್ಸ್​ ನಡುವೆ ಕಿಡಿ ಹೊತ್ತಿಸಿದ ಆರೋಪಿ ಹೇಳಿಕೆ..!
“ಆ ರಹಿ ಹೇ ಪೊಲೀಸ್​” ಎಂಬುದು ಚಿತ್ರದ ಕಾಚ್​ಫ್ರೇಸ್​ ಆಗಿದ್ದು, ಮೂವರು ಬಾಲಿವುಡ್​ ನಟರು ಪೊಲೀಸ್ ಸಮವಸ್ತ್ರದಲ್ಲಿ ಸ್ಟೈಲಾಗಿ ನಡೆದು ಬರುವ ದೃಶ್ಯ ಆಕರ್ಷಕವಾಗಿದೆ. ಜೊತೆಗೆ ಬಿಳಿಯ ಚೂಡೀದಾರ್​ನಲ್ಲಿ ಮುಖ್ಯ ನಟಿ ಕತ್ರೀನಾ ಕೈಫ್​ ಕೂಡ ಇದ್ದಾರೆ. ನೀವೂ ಆ ವಿಡಿಯೊ ನೋಡಿ:
We promised you all a cinematic experience and that’s what you will get…the wait is finally over! Aa Rahi Hai Police👮‍♀️#Sooryavanshireleasing worldwide in cinemas on 30th April 2021.#Sooryavanshi30thAprilpic.twitter.com/IZbczUqmqu
— Akshay Kumar (@akshaykumar)March 14, 2021

ಮಲ್ಟಿ ಸ್ಟಾರರ್ ಆ್ಯಕ್ಷನ್​ ಮೂವಿಯಾದ ಸೂರ್ಯವಂಶಿ ಚಿತ್ರದ ಬಿಡುಗಡೆ ದಿನಾಂಕದ ಘೋಷಣೆ ಅಭಿಮಾನಿಗಳಿಗೆ ರೋಚಕ ಸುದ್ದಿಯಾಗಿದೆ. ಒಂದು ವರ್ಷದ ಹಿಂದೆ ಈ ಚಿತ್ರದ ಬಿಡುಗಡೆ 2020 ರ ಮಾರ್ಚ್​ 24 ಕ್ಕೆ ಬಿಡುಗಡೆ ನಿಗದಿಯಾಗಿದ್ದು ಕೊನೇ ಕ್ಷಣದಲ್ಲಿ ಸ್ಥಗಿತಗೊಂಡಿತ್ತು. ಇದೀಗ ಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳನ್ನು ನಡೆಸಲು ಸರ್ಕಾರ ಅನುಮತಿಸಿದ ನಂತರ, ಚಿತ್ರದ ಬಿಡುಗಡೆಗೆ ಸಕಾಲ ಬಂದಿದೆ ಎಂದಿದ್ದಾರೆ.
“ನಮ್ಮ ಧಮಾಕೇದಾರ್ ಚಿತ್ರಕ್ಕಾಗಿ ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ ಮತ್ತು ಬರ್ತ್​ಡೇ ಬಾಯ್ ರೋಹಿತ್​ ಶೆಟ್ಟಿಗೆ ನನ್ನ ಪ್ರೀತಿ. ನಿಮ್ಮೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಂದು ಬ್ಲಾಸ್ಟ್​ !” ಎಂದು ಕರಣ್ ಜೋಹರ್ ಹೇಳಿದ್ದಾರೆ. “ಸೂರ್ಯವಂಶಿಯನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವ ನೀಡುತ್ತೇವೆಂದು ಪ್ರಾಮಿಸ್​ ಮಾಡಿದ್ದೆವು. ಇದೀಗ ನಿಮ್ಮ ಪ್ರತೀಕ್ಷೆಯ ಕ್ಷಣಗಳು ಮುಗಿದಿವೆ. ಆ ರಹಿ ಹೇ ಪೊಲೀಸ್!” ಎಂದು ಅಕ್ಷಯ್​ಕುಮಾರ್ ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

ಕರೊನಾ ಪ್ರಕರಣ ಹೆಚ್ಚಳ: ನಾಳೆ ಮಹತ್ವದ ಸಭೆ ಕರೆದ ಸಿಎಂ ಬಿಎಸ್​ವೈ, ಮತ್ತೆ ಕಾದಿದೆಯಾ ಆಘಾತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
