ನವದೆಹಲಿ:ಜಾತಿವಾದ ಮತ್ತು ಪ್ರಾದೇಶಿಕತೆಯೊಂದಿಗೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳನ್ನು ಕೊನೆಗಾಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರಾಮಲೀಲಾ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಬ್ಬವು ರಾವಣನ ಪ್ರತಿಕೃತಿ ದಹನಕ್ಕೆ ಸೀಮಿತವಾಗದೆ ದೇಶದ ಪ್ರತಿಯೊಂದು ದುಷ್ಟರ ವಿರುದ್ಧ ದೇಶಭಕ್ತಿಯ ವಿಜಯ ಆಗಬೇಕು ಎನ್ನುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನೇರ ದಾಳಿ ನಡೆಸಿದ್ದಾರೆ.
ಸಾಮಾಜಿಕ ಅನಿಷ್ಟ ಮತ್ತು ತಾರತಮ್ಯವನ್ನು ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಬೇಕು. ಸಾಮಾಜಿಕ ಸಾಮರಸ್ಯವನ್ನು ಕದಡುವ ಪ್ರತಿಯೊಂದು ಅನಿಷ್ಟವನ್ನೂ ಸುಡಬೇಕು. ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯವಾದ ಮಂದಿರವನ್ನು ನಿರ್ವಿುಸಲಾಗುತ್ತಿದೆ. ಶತಮಾನಗಳ ಕಾಯುವಿಕೆಯ ನಂತರ ದೇಶ ಇದಕ್ಕೆ ಸಾಕ್ಷಿಯಾಗಿರುವುದು ಪ್ರತಿಯೊಬ್ಬರ ಅದೃಷ್ಟ ಎಂದರು.
ಮತದಾನ ಮಾಡುವ ಮುನ್ನ ಸರಿಯಾಗಿ ಆಲೋಚನೆ ಮಾಡಿ
ನಾಗ್ಪುರ:2024ರ ಆರಂಭದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಜನರು ಸರಿಯಾಗಿ ಯೋಚಿಸಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಕಣದಲ್ಲಿರುವ ಒಳ್ಳೆಯ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಪಂಚ-ರಾಜ್ಯ ಚುನಾವಣೆಗಳಲ್ಲೂ ಸರಿಯಾಗಿ ಆಲೋಚಿಸಿ ಮತ ಚಲಾಯಿಸಿ ಎಂದು ಸಲಹೆ ಮಾಡಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಹಿಂದುತ್ವ ಫೌಂಡೇಶನ್​ನ ಸ್ಥಾಪನಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಭಾಗವತ್, ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯಲು ಯತ್ನಿಸುವ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಲಹೆ ಮಾಡಿದರು. ದೇಶದ ಒಗ್ಗಟ್ಟು, ಸಮಗ್ರತೆ ಮತ್ತು ಅಸ್ಮಿತೆಯನ್ನು ಗಮನದಲ್ಲಿಟ್ಟುಕೊಂಡು ಜನರು ಮತ ಚಲಾಯಿಸಬೇಕು ಎಂದರು. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದ ಭಾಗವತ್, ಜನರು ಎಲ್ಲ ರೀತಿಯ ಜನರನ್ನು ಕಂಡು ಅನುಭವಿಸಿದ್ದಾರೆ. ಹೀಗಾಗಿ ಆ ಪೈಕಿ ಉತ್ತಮರನ್ನೇ ಆಯ್ಕೆ ಮಾಡುವುದು ಅಗತ್ಯ ಎಂದರು.
ರಾಮ ಮಂದಿರ ಪ್ರಸ್ತಾಪ: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಅದೇ ದಿನ ದೇಶದಾದ್ಯಂತ ಜನರು ದೇವಸ್ಥಾನ ಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಎಂದು ಹೇಳಿದರು.
ಈ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಬೇಡಿಕೆ ಹೆಚ್ಚಿದ ನಂತರ ವಿಮಾನ ಟಿಕೆಟ್‌ ದರ ಶೇ.30ರಷ್ಟು ಅಗ್ಗ

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ ಜೈಲಿನ ಅಧಿಕಾರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
