ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ಪರೇಡ್​ಗೆ ರಾಜಧಾನಿ ದೆಹಲಿಯ ರಾಜ್​ಪಥ್ ಸಜ್ಜಾಗುತ್ತಿದೆ. ಇಲ್ಲಿ ಸಾಗಿ ಹೋಗುವ ಸ್ತಬ್ಧಚಿತ್ರಗಳ ತಯಾರಿ ಕೆಲಸವೂ ಅಂತಿಮ ಘಟ್ಟದಲ್ಲಿದೆ. ಪ್ರತಿವರ್ಷ ವಿಶಿಷ್ಟ ಸ್ತಬ್ಧಚಿತ್ರ ಮೂಲಕ ಗಮನಸೆಳೆಯುವ ಕರ್ನಾಟಕ, ಈ ಬಾರಿ ಬಸವಣ್ಣರ ಅನುಭವ ಮಂಟಪದ ಸ್ತಬ್ಧಚಿತ್ರ ಸಿದ್ಧಪಡಿಸಿದ್ದು, ಇಡೀ ದೇಶಕ್ಕೆ ಅವರ ಸಂದೇಶ ಪರಿಚಯಿಸಲು ಯತ್ನಿಸಿದೆ.
ಸಂತ ಬಸವೇಶ್ವರರು 12ನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ ಕ್ರಾಂತಿಯ ಪ್ರತಿರೂಪವೇ ಈ ಅನುಭವ ಮಂಟಪ. ಇದನ್ನು ಗಣರಾಜ್ಯೋತ್ಸವ ಪರೇಡ್​ನಲ್ಲಿ ಪ್ರದರ್ಶಿಸುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದು ಸ್ತಬ್ಧಚಿತ್ರ ಮುಖ್ಯ ವಿನ್ಯಾಸಕಾರ ಶಶಿಧರ ಅಡಪ ಹೇಳಿದ್ದಾರೆ. ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ದೇಹವೇ ದೇಗುಲ ಎಂಬ ಬಸವಣ್ಣವರ 3 ವಚನಗಳ ಸಾಲುಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್​ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ವಾರ್ತಾ ಇಲಾಖೆ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಮಾಹಿತಿ ನೀಡಿದ್ದಾರೆ.
ಸ್ತಬ್ಧಚಿತ್ರದ ಮುಂಭಾಗ ಕಾಯಕವೇ ಕೈಲಾಸ ಪರಿಕಲ್ಪನೆಗೆ ರೂಪಕೊಟ್ಟ ಬಸವಣ್ಣರ ಪ್ರತಿಕೃತಿಯಿದ್ದು, ಅಕ್ಕಪಕ್ಕ ಕಾಯಕ ಕಲ್ಪನೆಯ ಅರ್ಥ ವಿಸ್ತರಿಸಿದ ಅನುಭಾವಿಗಳು ತಮ್ಮ ಕಾಯಕದಲ್ಲಿ ಮಗ್ನರಾಗಿರುವ ಶಿಲ್ಪಗಳಿವೆ. ಕೆಳಪೀಠದಲ್ಲಿ ಅಕ್ಕ ನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಕಲ್ಯಾಣಮ್ಮ, ಹರಳಯ್ಯ, ಕುಂಬಾರ ಗುಂಡಣ್ಣ, ಸಿದ್ದರಾಮೇಶ್ವರ, ಬಾಚಿ ಕಾಯಕದ ಬಸಪ್ಪ ಪ್ರತಿಕೃತಿಗಳಿವೆ.
ಕೇಂದ್ರ ಭಾಗದ ಶೂನ್ಯ ಸಿಂಹಾಸನದಲ್ಲಿ ಅಲ್ಲಮಪ್ರಭು, ಪಕ್ಕದಲ್ಲಿ ಅಕ್ಕಮಹಾದೇವಿ ವಿಚಾರ ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದು. 27 ಕಲಾವಿದರು ವಿವಿಧ ಶರಣರ ಪಾತ್ರ ಮತ್ತು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಹಿಂದಿ ಮತ್ತು ಕನ್ನಡದಲ್ಲಿ ಹಿನ್ನೆಲೆಯಾಗಿ ವಚನ ಗಾಯನ, ಜನಪದರ ನೃತ್ಯ ವೈಭವಕ್ಕೆ ಬುರ›ಕಥಾ, ಚೌಡಿಕೆ, ಕಿನ್ನರಿ ಬೊಮ್ಮಯ್ಯ, ಕಿಂದರಿಜೋಗಿ, ಕಂಸಾಳೆ, ಮೈಲಾರಲಿಂಗ, ವೀರಗಾಸೆ ಕಲಾವಿದರು ಹುರುಪು ತುಂಬಿದ್ದಾರೆ. ಶಶಿಧರ ಅಡಪ ಜತೆಗೆ ಅಕ್ಮಲ್ ಪಾಷಾ, ವಿನೋದ್ ಸತೀಶ್ ರೈ, ರಾಜಕುಮಾರ್ ನಿರ್ವಹಣೆ ಮತ್ತು ತಾಂತ್ರಿಕ ಸಹಾಯದ ಉಸ್ತುವಾರಿ ವಹಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × four =
Remember me
