ಉತ್ತರಪ್ರದೇಶ:ಹಿಂದು ಧರ್ಮವನ್ನು ತ್ಯಜಿಸಿ ಬೇರೆ ಧರ್ಮವನ್ನು ಸ್ವೀಕರಿಸಿದ್ದ 100ಕ್ಕೂ ಹೆಚ್ಚು ಜನರು ಇದೀಗ ಮತ್ತೆ ‘ಘರ್ ವಾಪ್ಸಿ’ ಕಾರ್ಯಕ್ರಮದ ಮೂಲಕ ತಮ್ಮ ಮೂಲ ಧರ್ಮಕ್ಕೆ ಹಿಂತಿರುಗಿರುವಂತಹ ಬೆಳವಣಿಗೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ವಿವಿಧ ಕಾರಣಗಳಿಂದ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದ ವಾಲ್ಮೀಕಿ ಸಮಾಜದ 20 ಕುಟುಂಬಗಳ 100ಕ್ಕೂ ಅಧಿಕ ಮಂದಿ ಇದೀಗ ಹಿಂದು ಧರ್ಮವನ್ನು ಸ್ವೀಕಾರ ಮಾಡಿದ್ದಾರೆ. ಸ್ಥಳೀಯ ಶಾಸಕಿ ಮಿನಾಕ್ಷಿ ಸಿಂಗ್ ಸಹಕಾರದೊಂದಿಗೆ ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ‘ಘರ್ ವಾಪ್ಸಿ’ ಕಾರ್ಯಕ್ರಮದ ಮೂಲಕ ಮೂಲ ಧರ್ಮವನ್ನು ಸ್ವೀಕರಿಸುವಂತಾಗಿದೆ.ಇನ್ನು ಮುಂದೆ ಶ್ರೀರಾಮ, ಶ್ರೀಕೃಷ್ಣ ಮತ್ತು ಸನಾತನ ದೇವರು, ದೇವತೆಗಳಿಗೆ ಪ್ರಾರ್ಥಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಲ್ಲರೂ ಮತ್ತೆ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ. ಹಿಂದು ಧರ್ಮಕ್ಕೆ ಮರಳಿದ ಜನರನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ರಾಷ್ಟ್ರೀಯ ಚೇತನಾ ಮಿಷನ್ ಅಧ್ಯಕ್ಷ ಹೇಮಂತ್ ಸಿಂಗ್ ಹೇಳಿದ್ದಾರೆ.
ನನ್ನ ಮಗುವಿಗೆ ಆರೋಗ್ಯ ಸಮಸ್ಯೆ ಕಾಡಿದ್ದಾಗ ಯೇಸುವನ್ನು ಪೂಜಿಸಲು ಆರಂಭಿಸಿದೆ. ಅಂದಿನಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡಿರಲಿಲ್ಲ. ನಂತರ ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದೆ. ಆದರೆ ನನ್ನ ತಾಯಿ ನಿಧನರಾದಾಗ ಕ್ರಿಶ್ಚಿಯನ್ ಧರ್ಮದಂತೆ ವಿಧಿವಿಧಾನಗಳನ್ನು ನಡೆಸುವಂತೆ ಒತ್ತಾಯಿಸಿದರು. ಹಿಂದೂ ಧರ್ಮದಂತೆ ಅಂತಿಮ ವಿಧಿವಿಧಾನಗಳನ್ನು ನಡೆಯಬೇಕು ಎಂದು ನನ್ನ ತಾಯಿ ಬಯಸಿದ್ದರು. ಅದು ಸಾಧ್ಯವಾಗಿಲ್ಲ. ಹೀಗಾಗಿ ತಪ್ಪಿನ ಅರಿವಾಗಿ ಮತ್ತೆ ಮೂಲ ಧರ್ಮಕ್ಕೆ ಮರಳುತ್ತಿದ್ದೇನೆ ಎಂದು ಸಂದೀಪ್ ವಾಲ್ಮೀಕಿ ಎಂಬಾತ ಹೇಳಿಕೊಂಡಿದ್ದಾನೆ.
ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮ ಸ್ವೀಕಾರ ಮಾಡಿಕೊಂಡಿದ್ದವರು ಕೂಡಾ ಮರಳಿ ಹಿಂದು ಧರ್ಮ ಸ್ವೀಕಾರ ಮಾಡಿಕೊಂಡಿದ್ದಾರೆ. ವೇದ ಮಂತ್ರವನ್ನು ಪಠಣ ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ಮತ್ತೆ ಮೂಲ ಧರ್ಮಕ್ಕೆ ವಾಪಸ್ಸಾಗಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
