ಗಾಜಿಯಾಬಾದ್‌:ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾಂಸ್ಕೃತಿಕ ಉತ್ಸವದ ವೇಳೆ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ನಂತರ ಆತನನ್ನು ವೇದಿಕೆಯಿಂದ ಕೇಳಗಿಳಿಸಲಾಯಿತು. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕಾಲೇಜೊಂದರಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಕೇಳಿದರು.
ನಡೆದಿದ್ದೇನು?:ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ ನಡೆಯುತ್ತಿತ್ತು. ವಿದ್ಯಾರ್ಥಿಯು ವೇದಿಕೆಯನ್ನು ಸಮೀಪಿಸುತ್ತಿದ್ದಂತೆ, ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅದಕ್ಕೆ ವಿದ್ಯಾರ್ಥಿ “ಜೈ ಶ್ರೀ ರಾಮ್ ಸ್ನೇಹಿತರೇ” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತಾರೆ. ಅಲ್ಲೇ ಇದ್ದ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ವೇದಿಕೆಯಿಂದ ಕೇಳಗೆ ಬರುವಂತೆ ಸೂಚಿಸುತ್ತಾರೆ. ಇದೊಂದು ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಮಂತ್ರಘೋಷಗಳಿಗೆ ಅವಕಾಶವಿಲ್ಲ” ಎಂದು ಶಿಕ್ಷಕರು ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದಾಗಿದೆ.
Mamata Gautam, a teacher from ABES Engineering college in Ghaziabad expelled a student from stage for greeting audience with "Jai Shree Ram". The student was about to perform at the College Cultural Fest.
@ABESEC032should explain Bharat me Jai Shree Ram nahi bolenge to kya…pic.twitter.com/kvN3NGVcQ0
— BALA (@erbmjha)October 20, 2023

ವಿಡಿಯೋ ಗಾಜಿಯಾಬಾದ್ ಪೊಲೀಸ್ ಆಯುಕ್ತರ ಗಮನ ಬಂದಿದ್ದು, ಈ ಬಗ್ಗೆ ತನಿಖೆ ಮಾಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಕ್ರಾಸಿಂಗ್ ಪೊಲೀಸ್ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕಾಲೇಜು ಅಧಿಕಾರಿಗಳು ತೆಗೆದುಕೊಂಡ ಕ್ರಮದಲ್ಲಿ, ಮಮತಾ ಗೌತಮ್ ಮತ್ತು ಇನ್ನೊಬ್ಬ ಪ್ರಾಧ್ಯಾಪಕಿ ಶ್ವೇತಾ ಶರ್ಮಾ ಅವರು ತಮ್ಮ ಪ್ರದರ್ಶನವನ್ನು ನೀಡುವ ಮೊದಲು ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಕೇಳಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
VIDEO | ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ 37.58 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ


Sign in to your account
Please enter an answer in digits:two × three =
Remember me
