ಲಖನೌ:ರಸ್ತೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ರೀಲ್ಸ್​ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ಒಂದು ಪ್ರವೃತ್ತಿ ಕೆಲವೊಮ್ಮೆ ದುಷ್ಕರ್ಮಿಗಳಿಗೆ ಲಾಭವಾಗಿ ಪರಿಣಮಿಸುತ್ತೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಮಹಿಳೆಯೊಬ್ಬಳು ರಸ್ತೆಯಲ್ಲಿ ವಾಕಿಂಗ್​ ಮಾಡುತ್ತಾ ರೀಲ್ಸ್​ ಮಾಡುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಸರಗಳ್ಳ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನ ಇಂದಿಯಾಪುರಂನಲ್ಲಿ ನಡೆದಿದೆ. ಇದಿಷ್ಟು ಘಟನೆ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ವೈರಲ್​​ ಆಗಿರುವ ವಿಡಿಯೋದಲ್ಲಿ, ಸಲ್ವಾರ್ ಸೂಟ್‌ ಧರಿಸಿರುವ ಮಹಿಳೆಯೊಬ್ಬರು ನಿಧಾನವಾಗಿ ಕ್ಯಾಮೆರಾದತ್ತ ನಡೆಯುವುದನ್ನು ಕಾಣಬಹುದು, ಆಗ ಬೈಕ್ ಸವಾರನೊಬ್ಬ ವಿಡಿಯೋ ಫ್ರೇಮ್‌ಗೆ ಪ್ರವೇಶಿಸುತ್ತಾನೆ. ಆದರೆ, ಆರೋಪಿ ಹೆಲ್ಮೆಟ್ ಹಾಕಿಕೊಂಡಿರುವುದರಿಂದ ಆತನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ತನ್ನ ವಿಡಿಯೋಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ನೋಡಿ ಮಹಿಳೆಯು ಸಿಟ್ಟಾಗುತ್ತಾಳೆ. ಇನ್ನೇನು ಆತನಿಗೆ ಬೈಯ್ಯಬೇಕು ಅನ್ನುವಷ್ಟರಲ್ಲಿ ಬೈಕ್​ ಸವಾರ ಆಕೆಯ ಕುತ್ತಿಗೆಗೆ ಕೈಹಾಕಿ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
REEL के साइड इफैक्ट –UP के जिला गाजियाबाद में एक महिला सड़क पर REEL बनवा रही थी। बाइक सवार बदमाश आया और चेन लूटकर फरार हो गया।pic.twitter.com/THRcfo8OiW
— Sachin Gupta (@SachinGuptaUP)March 24, 2024

ಸರ ಕಳೆದುಕೊಂಡ ಸಂತ್ರಸ್ತೆಯನ್ನು ಸುಷ್ಮಾ ಎಂದು ಗುರುತಿಸಲಾಗಿದೆ. ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಇಂದಿರಾಪುರಂ ಎಸಿಪಿ ಸ್ವತಂತ್ರ ಕುಮಾರ್ ಸಿಂಗ್, ಇಂದು (ಮಾರ್ಚ್ 24) ಸರಗಳ್ಳತನ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.(ಏಜೆನ್ಸೀಸ್​)
ಬಿಜೆಪಿಯ 5ನೇ ಪಟ್ಟಿ ಬಿಡುಗಡೆ: ಬೆಳಗಾವಿಯಿಂದ​ ಶೆಟ್ಟರ್​, ಚಿಕ್ಕಬಳ್ಳಾಪುರದಿಂದ ಸುಧಾಕರ್​ ಕಣಕ್ಕೆ

ಬೇಸಿಗೆ ಅಂತ ಅತಿ ಹೆಚ್ಚು ನೀರು ಕುಡಿಯುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​, ಕುಡಿಯುವ ರೀತಿ ಹೀಗಿರಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
