ಕಾಲ ಬದಲಾದಂತೆಇಂದು ಪ್ರೀತಿಯ ಪರಿಕಲ್ಪನೆಗಳೂ ಸಹ ಬದಲಾಗಿವೆ. ಪ್ರೇಮಕ್ಕೆ ಹಿಂದೆ ಇದಷ್ಟು ಭಾವುಕತೆ ಈಗ ಇಲ್ಲ. ಪ್ರೀತಿಯು ಇಂದು ಯಾಂತ್ರಿಕವಾಗಿದೆ. ಪ್ರಣಯ ಸಂಬಂಧಗಳ ಜೀವಿತಾವಧಿ ಬಹಳ ಕಡಿಮೆ ಇರುವ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇಂದು ಅನೇಕ ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಕೇವಲ ಪುಸ್ತಕದ ಮೇಲಿನ ಬದನೆಕಾಯಿಯಾಗಿದೆ. ಜನರು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬಹಳ ಬೇಗನೆ ಮನಸ್ಸು ಬದಲಿಸುತ್ತಾರೆ. ಆದ್ದರಿಂದ ​ಪ್ರೇತ ಅಥವಾ ಘೋಸ್ಟಿಂಗ್​ ವಿದ್ಯಮಾನವು ಸಂಬಂಧಗಳಲ್ಲಿ ವಿಶೇಷವಾಗಿ ಪ್ರಣಯ ಸಂಬಂಧಗಳಲ್ಲಿ ಇಂದು ಹೆಚ್ಚುತ್ತಿದೆ.
ಏನಿದು ಘೋಸ್ಟಿಂಗ್​?ಯಾವುದೇ ವಿವರಣೆಯನ್ನು ನೀಡದೆ ಸಂಬಂಧವು ಇದ್ದಕ್ಕಿದ್ದಂತೆ ಕೊನೆಗೊಳ್ಳುವುದನ್ನು ಘೋಸ್ಟಿಂಗ್ ಎಂದು ಕರೆಯಲಾಗುತ್ತದೆ. ಯಾವುದೇ ಸೂಚನೆ ನೀಡದೆ, ಸಂದೇಶಗಳಿಗೆ ಅಥವಾ ಕರೆಗಳಿಗೆ ಪ್ರತಿಕ್ರಿಯಿಸದೆ ಒಬ್ಬರ ಜೀವನದಿಂದ ಸಂಪೂರ್ಣವಾಗಿ ಕಣ್ಮರೆಯಾಗುವ ಅಭ್ಯಾಸ ಇದಾಗಿದೆ. ಈ ಪದವನ್ನು ಮೊದಲು 2006ರಲ್ಲಿ ಅರ್ಬನ್ ಡಿಕ್ಷನರಿಯಲ್ಲಿ ಉಲ್ಲೇಖಿಸಲಾಗಿದೆ. ನಂತರ, ಇದನ್ನು ವಿದೇಶಗಳಲ್ಲಿ ಪ್ರೇಮ ಸಂಬಂಧಗಳಲ್ಲಿ ಆಗಾಗ ಬಳಸಲಾಯಿತು. ಘೋಸ್ಟಿಂಗ್​ ಅನುಭವಿಸದ ಹೊಸ ತಲೆಮಾರುಗಳು ಇಂದು ಬಹಳ ಕಡಿಮೆ. ಘೋಸ್ಟಿಂಗ್ ಕ್ಷುಲ್ಲಕವೆಂದು ತೋರುತ್ತದೆ ಆದರೆ, ಮಾರಣಾಂತಿಕ ಮಾನಸಿಕ ಪರಿಣಾಮಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.
ಘೋಸ್ಟಿಂಗ್ ಪತ್ತೆ ಹಚ್ಚುವುದು ಹೇಗೆ?ಆಗಾಗ ನಿಮ್ಮೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಯು ಇದ್ದಕ್ಕಿದ್ದಂತೆ ಮಾತನಾಡುವುದನ್ನು ನಿಲ್ಲಿಸುವುದು ಘೋಸ್ಟಿಂಗ್​ನ ಮುಖ್ಯ ಲಕ್ಷಣವಾಗಿದೆ. ಇದ್ದಕ್ಕಿದ್ದಂತೆ ಸಂಪೂರ್ಣ ಮೌನಕ್ಕೆ ಜಾರುತ್ತಾರೆ. ಕರೆಗಳು ಅಥವಾ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆ ಕಣ್ಮರೆಯಾದರು ಎಂಬುದು ಇತರರಿಗೆ ಅರ್ಥವಾಗುವುದಿಲ್ಲ. ನೀವು ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೂ, ಇತರ ವ್ಯಕ್ತಿಯು ಆಸಕ್ತಿಯನ್ನು ತೋರಿಸುವುದಿಲ್ಲ ಅಥವಾ ಪ್ರಯತ್ನಗಳನ್ನೂ ಮಾಡುವುದಿಲ್ಲ. ಅವರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿದ್ದರೂ ನಿಮ್ಮ ಸಂದೇಶಗಳಿಗೆ ಪ್ರತ್ಯುತ್ತರ ನೀಡುವುದಿಲ್ಲ. ಅಲ್ಲದೆ, ಜಾಲತಾಣಗಳಿಂದಲೇ ನಿಮ್ಮನ್ನು ಬ್ಲಾಕ್​ ಮಾಡುತ್ತಾರೆ. ಪ್ರತಿಕ್ರಿಯೆಯು ಕೆಲವೇ ಪದಗಳಲ್ಲಿ ಕೊನೆಗೊಂಡರೂ ಸಹ, ಏನೋ ತಪ್ಪು ನಡೆದಿದೆ ಎಂದು ನೀವು ಭಾವಿಸಲು ಪ್ರಾರಂಭಿಸುತ್ತೀರಿ.
ಘೋಸ್ಟಿಂಗ್​ ವ್ಯಕ್ತಿಯನ್ನು ಹೇಗೆ ವ್ಯಾಖ್ಯಾನಿಸುತ್ತದೆ?ಘೋಸ್ಟಿಂಗ್ ಅನ್ನು ಹೆಚ್ಚಾಗಿ ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆಗಳನ್ನು ಒಪ್ಪಲು ಅಸಮರ್ಥರಾದ ಜನರು ಮಾಡುತ್ತಾರೆ. ಅವರು ಪ್ರಾಮಾಣಿಕ ಭಾವನೆಗಳಿಗೆ ಹೆದರುತ್ತಾರೆ. ಇನ್ನೊಬ್ಬ ವ್ಯಕ್ತಿಯು ತಮ್ಮ ಕೋಪ, ದುಃಖ ಮತ್ತು ಭಯವನ್ನು ಹಂಚಿಕೊಂಡಾಗ ಅವರು ಅಸಮಾಧಾನಗೊಳ್ಳುತ್ತಾರೆ. ಆದ್ದರಿಂದ ಅಂತಹ ಜನರು ಅಂತಹ ಸಂದರ್ಭಗಳನ್ನು ಮತ್ತು ಅಂತಹ ಜನರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಘೋಸ್ಟಿಂಗ್​ನ ಇನ್ನೊಂದು ಗುಂಪಿದೆ. ಯಾವುದೆಂದರೆ, ಇತರರ ಬಗ್ಗೆ ಯಾವುದೇ ಸಹಾನುಭೂತಿ ಅಥವಾ ಪರಿಗಣನೆಯನ್ನು ಹೊಂದಿರದ ಮತ್ತು ಅವರ ಭಾವನೆಗಳನ್ನು ಗೌರವಿಸದೇ ಇರುವವರು. ಸಂಬಂಧವನ್ನು ಉಳಿಸಿಕೊಳ್ಳಲು ಅಥವಾ ಮುಂದುವರಿಸಲು ಭಯಪಡುವವರಿಂದ ಘೋಸ್ಟಿಂಗ್​ ಮಾಡುತ್ತಾರೆ. ಕೆಲವು ಜನರು ತಮ್ಮದೇ ಆದ ಮಾನಸಿಕ ಸಮಸ್ಯೆಗಳು ಅಥವಾ ಕುಟುಂಬ, ಸಮಾಜ ಅಥವಾ ಔದ್ಯೋಗಿಕ ಸ್ಥಳದ ಸಮಸ್ಯೆಗಳಿಂದಾಗಿ ಘೋಸ್ಟಿಂಗ್​ ಅನುಭವಿಸಬಹುದು.
ಘೋಸ್ಟಿಂಗ್​ ಭಾವನಾತ್ಮಕ ಹಂತಗಳು* ಮೊದಲಿಗೆ ಘೋಸ್ಟಿಂಗ್​ ಬಲಿಪಶು ಗೊಂದಲಕ್ಕೆ ಒಳಗಾಗುತ್ತಾನೆ. ತನ್ನನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ ಎಂದು ಆರಂಭದಲ್ಲಿ ಅರ್ಥವಾಗುವುದಿಲ್ಲ.* ಸ್ವಯಂ ಆಪಾದನೆ ಮಾಡಿಕೊಳ್ಳುವುದು ಮುಂದಿನ ಹಂತವಾಗಿದೆ. ಘೋಸ್ಟಿಂಗ್​ ಬಲಿಪಶು ಏನಾದರೂ ತಪ್ಪು ಮಾಡಿರಬೇಕು ಎಂದು ಯೋಚಿಸುತ್ತಾರೆ. ಆ ವ್ಯಕ್ತಿ ಏಕೆ ತನ್ನ ಜೀವನದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದನು ಎಂದು ಅವನು ಯೋಚಿಸಲು ಪ್ರಾರಂಭಿಸುತ್ತಾನೆ. ಅವರಿಗೆ ಅವರೇ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿ, ಸ್ವಂತ ಮೌಲ್ಯವನ್ನು ಅಳೆಯುತ್ತಾರೆ.* ಬಲಿಪಶು ಅನುಭವಿಸುವ ಮುಂದಿನ ಸಂಗತಿ ಏನೆಂದರೆ, ವಿಪರೀತ ಕೋಪ ಮತ್ತು ಸಂಕಟ. ಜೀವನವು ಮುಗಿದಿದೆ ಮತ್ತು ನೀವು ಮುಂದುವರಿಯಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಈ ಹಂತದಲ್ಲಿ ಅನೇಕ ಜನರು ಆತ್ಮಹತ್ಯೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ.* ಘೋಸ್ಟಿಂಗ್​, ವ್ಯಕ್ತಿಯ ಮೇಲೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಬಹುದು. ಘೋಸ್ಟಿಂಗ್​ ಬಲಿಪಶು ಸಮಾಜ ಮತ್ತು ಕುಟುಂಬದ ಸಂಬಂಧಗಳಿಂದ ದೂರವಿರುವ ಏಕಾಂಗಿ ಜೀವನವನ್ನು ಕೊನೆಗೊಳಿಸಬಹುದು. ಈ ಘೋಸ್ಟಿಂಗ್ ಎಂಬುದು ಓದು ಮತ್ತು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಇದು ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನದ ಮೇಲೆ ಪರಿಣಾಮ ಬೀರುತ್ತದೆ. ಬಲಿಪಶುಗಳು ಭವಿಷ್ಯದಲ್ಲಿ ಇತರರನ್ನೂ ನಂಬಲು ಹೆದರುತ್ತಾರೆ. 2012ರ ಸಂಶೋಧನೆ ಪ್ರಕಾರ ಘೋಸ್ಟಿಂಗ್​ ಬಲಿಪಶುಗಳು ಇತರರಿಗೆ ಘೋಸ್ಟಿಂಗ್​ ಆಗುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ.
ಘೋಸ್ಟಿಂಗ್​ಗೆ ಹೇಗೆ ಪ್ರತಿಕ್ರಿಯಿಸುವುದು?* ದುಃಖಿಸಲು ಮತ್ತು ಅಳುವುದನ್ನು ತಡೆಯಬೇಡಿ. ಪ್ರೀತಿಯ ನಿರ್ಲಕ್ಷ್ಯ ಮತ್ತು ನಿರಾಕರಣೆ ತುಂಬಾ ನೋವಿನಿಂದ ಕೂಡಿರುತ್ತದೆ ಎಂಬುದು ಸತ್ಯ. ಆ ನೋವನ್ನು ತಪ್ಪಿಸಲು ಪ್ರಯತ್ನಿಸುವ ಬದಲು, ಆ ಹಂತವನ್ನು ದಾಟಿ, ಹೊರಬರಲು ಪ್ರಯತ್ನಿಸಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ. ಅಗತ್ಯವಿದ್ದರೆ ವೃತ್ತಿಪರ ಸಹಾಯವನ್ನು ಪಡೆಯಿರಿ.* ನಿಮ್ಮ ಜೀವನದಿಂದ ಅವರು ಹೋಗಲಿ. ಮಾತನಾಡುವುದನ್ನು ನಿಲ್ಲಿಸುವುದರ ಅರ್ಥ ಸಂಬಂಧವನ್ನು ಮುಂದುವರಿಸಲು ಆಸಕ್ತಿಯಿಲ್ಲ ಎಂಬುದರ ಸಂಕೇತವಾಗಿದೆ. ಹೀಗಾಗಿ ವಿದಾಯ ಬೇಕು ಎಂದು ನೀವು ಭಾವಿಸಿದರೆ, ಸಂಬಂಧವನ್ನು ಕೊನೆಗೊಳಿಸಲು ಸರಳ ಸಂದೇಶವನ್ನು ಕಳುಹಿಸಿ. ಅವರು ಉತ್ತರಿಸದಿದ್ದರೆ, ಅವರ ಹಿಂದೆ ಹೋಗದೇ ಸುಮ್ಮನಿದ್ದು ಬಿಡಿ.* ತಪ್ಪು ಆಲೋಚನೆಗಳನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮನ್ನು ನೀವೇ ದೂಷಿಸಬೇಡಿ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಪ್ರಯತ್ನಿಸಿ. ಅದು ನಿಮ್ಮ ತಪ್ಪು ಅಲ್ಲ ಎಂದು ಅರಿತುಕೊಳ್ಳಿ ಮತ್ತು ಅನುಭವಗಳಿಂದ ಕಲಿಯಲು ಜಾಗರೂಕರಾಗಿರಿ.* ಅತಿಯಾಗಿ ವಿಶ್ಲೇಷಿಸುವುದನ್ನು ತಪ್ಪಿಸಿ ಮತ್ತು ಉತ್ತರಗಳನ್ನು ಹುಡುಕಲು ಪ್ರಯತ್ನಿಸಬೇಡಿ. ಏಕೆಂದರೆ, ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. ಸ್ವಂತ ಗಾಯದ ಚಿಕಿತ್ಸೆ ಮತ್ತು ಸ್ವಯಂ-ಆರೈಕೆಗೆ ಆದ್ಯತೆ ನೀಡಿ.(ಏಜೆನ್ಸೀಸ್​)
ಐಪಿಎಲ್​ ಮ್ಯಾಚ್​ ಫಿಕ್ಸಿಂಗ್​ ಕೇಸ್​: ಸಾಕ್ಷಿ ಇದ್ರೂ ಶ್ರೀಶಾಂತ್ ಬಚಾವ್​ ಆಗಿದ್ಹೇಗೆ? ಬಯಲಾಯ್ತು ಸ್ಪೋಟಕ ರಹಸ್ಯ

ಮುಖಂಡರ ಬಂಧನಕ್ಕೆ ಬಂಗಾಳ ಸರ್ಕಾರ ಪ್ರತಿಕಾರ.. ಎನ್‌ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 8 =
Remember me
