ಶ್ರೀನಗರ:ಯಾವುದೇ ಪಕ್ಷದವರು ತಮ್ಮ ಪ್ರತಿಪಕ್ಷದ ನಾಯಕನನ್ನು ವಿರೋಧಿಸಿ ಅವರ ಪ್ರತಿಕೃತಿ ಸುಟ್ಟು ಹಾಕುವ ಸುದ್ದಿಗಳನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರು ಎನ್ನುವ ಕಾರಣಕ್ಕೆ ಅವರದ್ದೇ ಪ್ರತಿಕೃತಿಯನ್ನು ಅವರ ಪಕ್ಷದ ಕಾರ್ಯಕರ್ತರೇ ಸುಟ್ಟು ಹಾಕಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಇತ್ತೀಚೆಗೆ ರಾಜ್ಯ ಸಭೆಯಿಂದ ನಿವೃತ್ತರಾದ ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಅವರ ಪ್ರತಿಕೃತಿಯನ್ನು ಜಮ್ಮು ಕಾಶ್ಮೀರದ ಕಾಂಗ್ರೆಸ್​ ಕಾರ್ಯಕರ್ತರು ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಶನಿವಾರದಂದು ಕಾಂಗ್ರೆಸ್​ನ ಜಿ 23 ಸಭೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್​ ಶಕ್ತಿ ಕುಂದುತ್ತಿರುವುದಾಗಿ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಾದ ಮಾರನೇ ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಗುಲಾಂ ನಬಿ ಅವರು ಮೋದಿಯವರು ನಮ್ಮ ದೇಶದ ಹೆಮ್ಮೆಯ ಚಾಯ್​ವಾಲಾ. ಅವರು ಪ್ರಧಾನಿ ಸ್ಥಾನಕ್ಕೇರಿದರೂ ತಮ್ಮ ಬೇರನ್ನು ಮರೆತಿಲ್ಲ ಎಂದು ಹೊಗಳಿದ್ದರು. ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ಷೇಪ ತೆಗೆದಿದ್ದಾರೆ. ಆಜಾದ್​ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ.
ಕಾಂಗ್ರೆಸ್​ ಕಾರ್ಯಕರ್ತರು ಪಕ್ಷದ ಹಿರಿಯ ನಾಯಕನ ಪ್ರತಿಕೃತಿ ದಹಿಸುತ್ತಿರುವ ದೃಶ್ಯ ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪಕ್ಷವು ಅವರನ್ನು ಗೌರವದ ಸ್ಥಾನದಲ್ಲಿ ನೋಡುತ್ತದೆ, ಆದರೆ ಅವರು ಕಾಂಗ್ರೆಸ್​ನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸಲಾರಂಭಿಸಿದ್ದಾರೆ ಎಂದು ಕಾರ್ಯಕರ್ತರು ದೂರಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!

ಇಂದಿರಾ ಗಾಂಧಿ ಕುಟುಂಬದ ಕುಡಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ಪ್ರಿಯಾಂಕಾ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
