ದೆಹಲಿ:ದೆಹಲಿಯ ನರೇಲಾ ಪ್ರದೇಶದಲ್ಲಿ ನಡೆದ ನವರಾತ್ರಿ ಮೇಳದಲ್ಲಿ ತಾಂತ್ರಿಕ ದೋಷದಿಂದಾಗಿ ಜೈಂಟ್ ವೀಲ್ಹ್​​​ ರೈಡ್ ಕೆಲಸ ನಿಲ್ಲಿಸಿದೆ. ಈ ವೇಳೆ ಕನಿಷ್ಠ 50 ಜನರು ಸಿಲುಕಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಬುಧವಾರ ( 2023 ಅಕ್ಟೋಬರ್ 18) ರಂದು ನಗರದ ನರೇಲಾ ಪ್ರದೇಶದಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ಆಯೋಜಿಸಲಾದ ಮೇಳವು ಜೈಂಟ್ ವೀಲ್ಹ್​​​ನಂತಹ ಹಲವಾರು ಮನರಂಜನೆಗಳನ್ನು ಹೊಂದಿತ್ತು. ಇದರ ಭಾಗವಾಗಿ ದೈತ್ಯ ಚಕ್ರ ಮೇಲಕ್ಕೆ ಹೋಗಿ ತಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆ ಉಂಟಾಗಿ ದಿಢೀರ್ ಸ್ಥಗಿತಗೊಂಡಿದೆ. ಜೈಂಟ್ ವೀಲ್ಹ್ ರೈಡ್​​​ನಲ್ಲಿದ್ದವರು ಗಾಬರಿಯಾದರು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ತಾಂತ್ರಿಕ ಸಿಬ್ಬಂದಿಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
#WATCH| A giant wheel at a Navratri Mela in Delhi's Narela area stopped working with people onboard. Everyone has been rescued safely. Legal action initiated by Police. Further details awaited: Delhi Police
(Viral video, confirmed by Police)pic.twitter.com/X91BM3x5Uw
— ANI (@ANI)October 18, 2023

ದೆಹಲಿಯಲ್ಲಿ ನವರಾತ್ರಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಹಲವು ಮಂದಿ ಅಲ್ಲಿನ ಜೈಂಟ್ ವೀಲ್ಹ್ ಹತ್ತಿದರು. ರಾತ್ರಿ 10.30ರ ವೇಳೆಗೆ ತಾಂತ್ರಿಕ ಸಮಸ್ಯೆಯಿಂದ ದೈತ್ಯ ಚಕ್ರ ನಿಂತಿತು. ಇದರೊಂದಿಗೆ ಜೈಂಟ್ ವೀಲ್ಹ್ ನಲ್ಲಿ ಸಿಲುಕಿದ್ದ 50 ಮಂದಿ ಭಯಗೊಂಡಿದ್ದಾರೆ. ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲಿಯೇ ಇದ್ದರು. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮಾಹಿತಿ ಪಡೆದ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈಗಾಗಲೇ 20 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ ನಾಲ್ವರು ಪುರುಷರು, ಹನ್ನೆರಡು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ. ಸುರಕ್ಷತೆಯನ್ನು ನಿರ್ಲಕ್ಷಿಸಿದ ಮೇಳದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದಲ್ಲಿ ಕೆಲವೆಡೆ ಮಳೆ, ಇನ್ನುಳಿದೆಡೆ ಭಾರೀ ಬಿಸಿಲು; IMDಯಿಂದ ಉಷ್ಣಾಂಶ ಹೆಚ್ಚಳ ಎಚ್ಚರಿಕೆ!

Sign in to your account
Please enter an answer in digits:twenty + 7 =
Remember me
