ಭೂಪಾಲ್​​:ಹಣಕ್ಕಾಗಿ 12 ವರ್ಷದ ಬಾಲಕಿಯನ್ನು ಮಾರಾಟ ಮಾಡಿ, ಬಾಲ್ಯವಿವಾಹ ಮಾಡಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ.
ಘಟನೆ ಸಂಬಂಧಿಸಿದಂತೆ, ಮಾನವ ಕಳ್ಳಸಾಗಣೆ, ಬಾಲಾಪರಾಧಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪ್ರಾಪ್ತ ಬಾಲಕಿಯ ಪೋಷಕರು, ವರ ಮತ್ತು ಆತನ ಪೋಷಕರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಇದನ್ನೂ ಓದಿ:10 ಕೆಜಿ ಅಕ್ಕಿ ಕೊಡಿ ಇಲ್ಲವಾದ್ರೆ ದುಡ್ಡು ನೀಡಿ; ಬಿ.ವೈ.ರಾಘವೇಂದ್ರ
ಸೋಮವಾರದಂದು ಗುನಗಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮದುವೆಯ ಅರಿಶಿನ ಕಾರ್ಯಕ್ರಮ ನಡೆಯುತ್ತಿತ್ತು. ವಿಚಾರಣೆ ನಡೆಸಿದಾಗ ಹುಡುಗಿಗೆ 12 ವರ್ಷ ಮತ್ತು ಆಕೆ ಮದುವೆಯಾಗಲಿರುವ ವ್ಯಕ್ತಿಗೆ 27 ವರ್ಷ ವಯಸ್ಸಾಗಿತ್ತು.
ಬಾಲಕಿಯು ಮದುವೆಗೆ ನಿರಾಕರಿಸಿದರೂ ಆಕೆಯ ಮಾತನ್ನು ಕೇಳದೆ ಪೋಷಕರು ಆಕೆಯನ್ನು ಯುವಕನ ಕುಟುಂಬದವರಿಗೆ 40 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಇದರ ಭಾಗವಾಗಿ ಪೋಷಕರು 20 ಸಾವಿರ ರೂ.ಗಳನ್ನು ಮುಂಗಡ ಹಣವನ್ನು ಪಡೆದಿದ್ದು, ಉಳಿದ ಮೊತ್ತವನ್ನು ಮದುವೆಯ ನಂತರ ಪಡೆಯುವ ಯೋಜನೆಯನ್ನು ರೂಪಿಸಲಾಗಿತ್ತು.ಇದನ್ನೂ ಓದಿ:ನೀವು ಶೌಚಾಲಯದಲ್ಲಿ ಫೋನ್​ ಬಳಸುತ್ತೀರಾ? ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಬಹುದು, ಎಚ್ಚರ!
ಈ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ಮಾಹಿತಿ ತಿಳಿದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹುಡುಗಿಯ ವಿವಾಹವನ್ನು ತಡೆದು ಐದು ಜನರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ದಲ್ಲಾಳಿಗಳಾಗಿ ಕೆಲಸ ಮಾಡಿದವರು ಅಥವಾ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eight =
Remember me
