ಓಡಿಶಾ:ಗಾಯಾಳು ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾಲಕಿಯೊಬ್ಬಳು 35 ಕಿಲೋಮೀಟರ್​ ಸೈಕಲ್​ ತುಳಿದಿರುವ ಘಟನೆ ಓಡಿಶಾದ ಭದ್ರಕ್​ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯು ಅಕ್ಟೋಬರ್ 23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತನ್ನ ತಂದೆಯನ್ನು ಆಸ್ಪತ್ರೆಯಿಂದ ವಾಪಸ್​ ಮನೆಗೆ ಕರೊದೊಯ್ಯುತ್ತಿದ್ದ ವೇಳೆ ಪತ್ರಕರ್ತರೊಬ್ಬರು ಆಕೆಯನ್ನು ಮಾತನಾಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬಹುಕೋಟಿ ಪಡಿತರ ಹಗರಣ; ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯ ಮಲ್ಲಿಕ್​ನನ್ನು ವಶಕ್ಕೆ ಪಡೆದ ED
ಭದ್ರಕ್​ ಜಿಲ್ಲೆಯ ನಾಡಿಗನ್​ ಗ್ರಾಮದ ನಿವಾಸಿ ಸುಜಾತ ಸೇಥಿ ಅಕ್ಟೋಬರ್​ 22ರಂದು ಗುಂಪುಘರ್ಷಣೆಯಲ್ಲಿ ಗಾಯಗೊಂಡಿದ್ದ ತನ್ನ ತಂದೆಯನ್ನು ತಮ್ಮ ಊರಿನಿಂದ ಸುಮಾರು 14 ಕಿಲೋಮೀಟರ್ ಧಾಮ್​ನಗರದ ಬಳಿ ಇರುವ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಬಳಿಕ ಅಲ್ಲಿನ ಸಿಬ್ಬಂದಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವ ಕಾರಣ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಆ್ಯಂಬುಲೆನ್ಸ್​ ಅಥವಾ ಖಾಸಗಿ ವಾಹನಕ್ಕೆ ಬಾಡಿಗೆ ನೀಡಲು ಹಣವಿಲ್ಲದ ಕಾರಣ ಸುಜಾತಾ ತನ್ನ ಬಳಿ ಇದ್ದ ಸೈಕಲ್​ ಟ್ರಾಲಿ ಮೂಲಕ ಸುಮಾರು 35 ಕಿಲೋಮೀಟರ್​ ದೂರ ಕ್ರಮಿಸಿ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ವೈದ್ಯರು ಒಂದು ವಾರ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ವಾಪಸ್​ ತೆರಳುತ್ತಿರುವುದಾಗಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಭದ್ರಕ್​ ಕ್ರೇತ್ರದ ಶಾಸಕ ಅಗತ್ಯ ನೆರವನ್ನು ಘೋಷಿಸಿದ್ದಾರೆ. ಇದಲ್ಲದೆ ಬಾಲಕಿಗೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
