ಜೈಪುರ:ಸುಮಾರು ಎಂಟು ದಿನಗಳವರೆಗೆ 20 ಮಂದಿ 15 ವರ್ಷದ ಅಪ್ರಾಪ್ತೆ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ರಾಜಸ್ಥಾನದ ಝಲಾವಾರ್​ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಈ ಘಟನೆ ಸಂಬಂಧಿಸಿದ 20 ಮಂದಿಯನ್ನು ಬಂಧಿಸಲಾಗಿದೆ. ಘಟನೆ ನಡೆದ ಹತ್ತು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಅಪ್ರಾಪ್ತೆಗೆ ನಗರದಲ್ಲಿ ಸ್ಕೂಲ್​ ಬ್ಯಾಗ್​ ತೆಗೆದುಕೊಡುವ ಸೋಗಿನಲ್ಲಿ ಸ್ನೇಹಿತ ಮತ್ತು ಮತ್ತೊಬ್ಬ ಹುಡುಗ ಆಕೆಯನ್ನು ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾರೆ.
ಇದನ್ನೂ ಓದಿರಿ:Web Exclusive: ಹಾಡಿ ಮಕ್ಕಳಿಗೆ ಚನ್ನಪಟ್ಟಣದ ಆಟಿಕೆಗಳು: ಅಂಗನವಾಡಿಗಳಿಗೆ ಆಟಿಕೆ ಪೂರೈಕೆ!
ಪಾರ್ಕ್​ ಒಂದರಲ್ಲಿ ಡ್ರಗ್ಸ್​ ನೀಡಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಅಲ್ಲದೆ, ಎಂಟು ದಿನಗಳವರೆಗೆ ನಗರದ ವಿವಿಧ ಸ್ಥಳಗಳಲ್ಲಿ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ರೇಪ್​ ಮಾಡಿದ್ದಾಗಿ ಅಪ್ರಾಪ್ತೆ ಹೇಳಿಕೆ ನೀಡಿದ್ದಾಳೆ.
ಬಂಧನವಾಗಿ 20 ಆರೋಪಿಗಳಲ್ಲಿ ನಾಲ್ವರು ಅಪ್ರಾಪ್ತರೆಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸ್​ ವರಿಷ್ಠಾಧಿಕಾರಿ ಶರದ್​ ಚೌಧರಿ ಮಾತನಾಡಿ, ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೇವೆ. ಅಪರಾಧ ನಡೆದು ಹತ್ತು ದಿನಗಳಾದರೂ ಅಪ್ರಾಪ್ತೆಯನ್ನು ರಕ್ಷಣೆ ಮಾಡದಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​)
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿಗಳಿಬ್ಬರ ಭರ್ಜರಿ ಎಣ್ಣೆ ಪಾರ್ಟಿ!

ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನ

ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
